ಹಾಸನ ಪೆನ್‌ಡ್ರೈವ್ ಪ್ರಕರಣ ಬಳಿಕ ದೇಶ ತೊರೆದಿದ್ದ ಸಂಸದ ಪ್ರಜ್ವಲ್ ರೇವಣ್ಣರನ್ನ 35 ದಿನಗಳ ಬಳಿಕ ಕೊನೆಗೂ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪ್ರಜ್ವಲ್‌ರನ್ನ ಮಹಿಳಾ ಪೊಲೀಸರೇ ಬಂಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.  ಬಂಧನ ವೇಳೆ ಚಾಲಕ ಹೊರತು ಪಡಿಸಿ ಮೂವರು ಮಹಿಳಾ ಸಿಬ್ಬಂದಿಯಿಂದಲೇ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು (ಮೇ.31): ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ದೇಶ ತೊರೆದಿದ್ದ ಸಂಸದ ಪ್ರಜ್ವಲ್ ರೇವಣ್ಣ 35 ದಿನಗಳ ಬಳಿಕ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮೇ.30ರಂದು ಬರುವುದಾಗಿ ಪ್ರಜ್ವಲ್ ವಿಡಿಯೋ ಮಾಡಿದ ದಿನದಿಂದಲೇ ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬೀಡುಬಿಟ್ಟಿದ್ದರು. ಕಳೆದ ಬಾರಿಯಂತೆ ಟಿಕೆಟ್ ಕ್ಯಾನ್ಸಲ್ ಮಾಡುವ ಸಂಭವವೂ ಇತ್ತು. ರಾಜತಾಂತ್ರಿಕ ವೀಸಾದ ಅವಧಿ ಇನ್ನೂ ಇದೆ ಹೀಗಿರುವಾಗ ಬರುವ ಸಾಧ್ಯತೆ ಕಡಿಮೆ ಇತ್ತು. ಆದರೆ ವಿಡಿಯೋದಲ್ಲಿ ಹೇಳಿದಂತೆ ಮೇ.30ಕ್ಕೆ ಬರುವುದು ಕನ್ಫರ್ಮ್ ಆದಾಗ ಅಲರ್ಟ್‌ ಆಗಿದ್ದ ಪೊಲೀಸರು. ಜರ್ಮನಿಯಿಂದಲೇ ಟ್ರ್ಯಾಕ್ ಮಾಡಿ ಬೆಂಗಳೂರಿನಲ್ಲಿ ಮಧ್ಯರಾತ್ರಿ 12.47ಕ್ಕೆ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಮೂವರು ಮಹಿಳಾ ಪೊಲೀಸ್ ಪೇದೆಗಳ ಮೂಲಕ ವಶಕ್ಕೆ ಪಡೆದಿದ್ದರು. ಮಹಿಳಾ ಪೊಲೀಸರಿಂದಲೇ ಬಂಧಿಸಿದ್ದು ಯಾಕೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು; ಮುಂದೈತೆ ಅಸಲಿ ತನಿಖೆ

ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಮಾಡಿದ್ದ ಎಸ್‌ಐಟಿ! ಹೌದು ಏರ್‌ಪೋರ್ಟ್‌ನಲ್ಲಿ ಮೂವರು ಮಹಿಳಾ ಅಧಿಕಾರಿಗಳಿಂದಲೇ ಪ್ರಜ್ವಲ್ ಅರೆಸ್ಟ್ ಮಾಡಿಸಿದ ಎಸ್‌ಐಟಿ ಅಧಿಕಾರಿಗಳು. ಜೀಪ್ ಚಾಲಕ ಹೊರತುಪಡಿಸಿದ್ರೆ ಉಳಿದವರೆಲ್ಲ ಮಹಿಳಾ ಅಧಿಕಾರಿಗಳೇ ಇದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೆಣ್ಣನ್ನು ಕೇವಲವಾಗಿ ನೋಡಿದ ಪ್ರಜ್ವಲ್‌ಗೆ ಮುಜುಗರ, ಅವಮಾನಿಸಲು, ನಾಚಿಕೆಪಡುವಂತಾಗಲಿ ಎಂದು ಮಹಿಳಾ ಅಧಿಕಾರಿಗಳಿಂದಲೇ ಅರೆಸ್ಟ್ ಮಾಡಿಸಿದ ಎಸ್‌ಐಟಿ ಆ ಮೂಲಕ ಹೆಣ್ಣು ಅಬಲೆಯಲ್ಲ, ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಂದೇಶ ರವಾನಿಸಿದೆ.