ಕೋಲ್ಕತ್ತಾ(ಅ. 13)  ಮನೆಗೆ ಹೊಂದಿರುಗುತ್ತಿದ್ದ 19 ವರ್ಷದ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಪರಾರಿಯಾಗುತ್ತಿದ್ದವನ ಬಂಧನ ಮಾಡಲಾಗಿದೆ.

ಅಭ್ಯಾಸ ಮುಗಿಸಿ ಯುವತಿ ಮನೆಗೆ ಬರುತ್ತಿದ್ದಾಗ ಕಿಡಿಗೇಡಿ ತನ್ನ ಚೇಷ್ಟೆ ಮೆರೆದಿದ್ದಾನೆ. ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯಲ್ಲಿ ಪ್ರಕರಣ ನಡೆದಿದೆ.

ಹೆಂಡತಿ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಗಂಡ

ಅಶೋಕನಗರದ ಚೌರಂಗಿಯಲ್ಲಿ ಯುವತಿ ಎದುರು ಬಂದ ಆಸಾಮಿ  ನಲವತ್ತು ವರ್ಷದ ಅಮಿಮಾ ದಾಸ್ ಅಶ್ಲೀಲ ಸನ್ನೆ ಮಾಡಿದ್ದಾನೆ. ಯುವತಿ ತಿರುಗಿ ನೋಡದೆ ಮುಂದಕ್ಕೆ ನಡೆದಿದ್ದಾಳೆ. ಹಿಂದಿನಿಂದ ಬಂದ ಆರೋಪಿ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಆಕೆಯ ಬಳಿ ಇದ್ದ ಬ್ಯಾಗ್ ಕಸಿದುಕೊಳ್ಳಲು ಯತ್ನಿಸಿದ್ದಾನೆ .

ಮೊದಲಿಗೆ ಆಘಾತಗೊಂಡ ಯುವತಿ ಆತನ ಬೆನ್ನಟ್ಟಿದ್ದಾಳೆ.  ನಂತರ ಸ್ಥಳೀಯರು ಆಖೆಯ ನೆರವಿಗೆ ಧಾವಿಸಿದ್ದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.