Asianet Suvarna News Asianet Suvarna News

ಪ್ರಾಕ್ಟೀಸ್‌ಗೆ ಚಕ್ಕರ್ ಹಾಕಿ ಟೀಚರ್ ಜೊತೆ ಸೆಕ್ಸ್, ಆ್ಯಪ್ ಮೂಲಕ ಮಗನ ಸರಸ ಪತ್ತೆ ಹಚ್ಚಿದ ತಾಯಿ!

ಪುತ್ರ ಹಠ ಹಿಡಿದ ಕಾರಣ ರಗ್ಬೀ ಆಟಕ್ಕೆ ಸೇರಿಸಲಾಗಿತ್ತು. ದುಬಾರಿ ಫೀಸ್, ಖರ್ಚು ವೆಚ್ಚ ಇದ್ದರೂ ಪುತ್ರ ರಗ್ಬಿ ಆಟಗಾರನಾಗುತ್ತಾನೆ ಅನ್ನೋ ವಿಶ್ವಾಸವಿತ್ತು. ಆದರೆ ಮಗ ಮಾತ್ರ ಮೈದಾನದಲ್ಲಿ ರಗ್ಬಿ ಆಡುವ ಬದಲು, 26 ವರ್ಷದ ಟೀಚರ್ ಜೊತೆ ಮಂಚದಾಟದಲ್ಲಿ ಬ್ಯೂಸಿಯಾಗತೊಡಗಿದೆ. ಕೋಚ್ ಪ್ರತಿ ದಿನ ಅಭ್ಯಾಸಕ್ಕೆ ನಿಮ್ಮ ಪುತ್ರ ಬರುತ್ತಿಲ್ಲ ಎಂದು ದೂರು. ಹೀಗಾಗಿ ಕುಟುಂಬ ಅಭಿವೃದ್ಧಿಪಡಿಸಿದ ಆ್ಯಪ್ ಮೂಲಕ ಗಮನ ಕಾಮಕ್ರೀಡೆಯನ್ನು ತಾಯಿ ಪತ್ತೆ ಹಚ್ಚಿದ ಘಟನೆ ನಡೆದಿದೆ.
 

Washington Mother saw her son compromising situation with school teacher after She use location finder app ckm
Author
First Published Dec 16, 2023, 2:23 PM IST

ವಾಶಿಂಗ್ಟನ್(ಡಿ.16) ರಗ್ಬಿ ಆಟಗಾರನಾಗಬೇಕೆಂಬ ಮಗನ ಆಸೆಯನ್ನು ಈಡೇರಿಸಲು ತಾಯಿ ಈಡೇರಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ಖ್ಯಾತ ರಗ್ಬಿ ಕ್ಲಬ್‌ಗೆ ದುಬಾರಿ ಫೀಸ್ ನೀಡಿ ಸೇರಿಸಲಾಗಿತ್ತು. 18 ವರ್ಷದ ಮಗ ಆರಂಭದಲ್ಲಿ ರಗ್ಬೀ ಅಭ್ಯಾಸಕ್ಕೆ ತೆರಳುತ್ತಿದ್ದ. ಆದರೆ ಬರುಬರುತ್ತಾ ಮನಗ ರಗ್ಬೀ ಆಟ ಮೈದಾನದ ಬದಲು ಬೇರೆಡೆ ತಿರುಗಿತ್ತು. ತನ್ನ 26 ವರ್ಷದ ಹೈಸ್ಕೂಲ್ ಟೀಚರ್ ಜೊತೆ ಕಾಮಕ್ರೀಡೆಯಲ್ಲಿ ಪುತ್ರನ ಆಟ ನಿರಂತರವಾಗಿತ್ತು. ಪ್ರತಿ ದಿನ ಕೋಚ್ ದೂರು ಸ್ವೀಕರಿಸುತ್ತಿದ್ದ ತಾಯಿ ಮಗನ ಅಸಲಿ ಕತೆ ಪತ್ತೆ ಹಚ್ಚಲು ಕುಟುಂಬ ಅಭಿವೃದ್ಧಿಪಡಿಸಿದ ಆ್ಯಪ್ ಬಳಸಿದ್ದಾರೆ. ಬಳಿಕ ಟೀಚರ್ ಜೊತೆ ಕಾಮಕ್ರೀಡೆಯಲ್ಲಿ ತೊಡಗಿದ್ದ ವೇಳೆಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೀಗ ಪೊಲೀಸ್ ಪ್ರಕರಣ ದಾಖಲಾಗಿದ್ದು, ಟೀಚರ್‌ಗೆ ಸಂಕಷ್ಟ ಹೆಚ್ಚಾಗಿದೆ.ಅಮೆರಿಕದ ವಾಶಿಂಗ್ಟನ್‌ನಲ್ಲಿ ಈ ಘಟನೆ ನಡೆದಿದೆ.

18 ವರ್ಷದ ಪುತ್ರ ಕಾಡಿ ಬೇಡಿ ರಗ್ಬಿ ಆಟಕ್ಕೆ ಸೇರಿಕೊಂಡಿದ್ದ. ದುಬಾರಿ ಫೀಸ್ ಹೊಂದಿಸುವುದು ತಾಯಿಗೆ ಪ್ರಯಾಸದ ಕೆಲಸವಾಗಿತ್ತು. ಆದರೆ ಅಮೆರಿಕ ಸೇರಿದಂತೆ ಯೂರೋಪ್‌ನಲ್ಲಿ ರಗ್ಬಿ ಕ್ರೀಡೆಗಿರುವ ಪ್ರಾಮುಖ್ಯತೆ, ವೃತ್ತಿಪರ ರಗ್ಬಿಯಲ್ಲಿ ತೊಡಗಿಸಿಕೊಂಡರೆ ಪುತ್ರನ ಲೈಫ್ ಸೆಟ್ಲ್ ಎಂದು ತಾಯಿ ಭಾವಿಸಿದ್ದಾಳೆ. ಹೀಗಾಗಿ ಫೀಸ್ ನೀಡಿ ರಗ್ಬಿ ಕ್ಲಬ್‌ಗೆ ಸೇರಿಸಿದ್ದಾಳೆ.

 

ಮೂವರು ಮಹಿಳಾ ಟೀಚರ್ ಜೊತೆ ಸೆಕ್ಸ್, ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ಆಮಿರ್ ನಾಪತ್ತೆ

ಆರಂಭಿಕ ದಿನದಲ್ಲಿ ಪ್ರತಿ ದಿನ ಸಂಜೆ ರಗ್ಬಿ ಅಭ್ಯಾಸಕ್ಕೆ ತೆರಳುತ್ತಿದ್ದ ಪುತ್ರ, ಬಳಿಕ ಒಂದೊಂದು ದಿನ ನಾಪತ್ತೆಯಾಗುತ್ತಿದ್ದ. ಬರುಬರುತ್ತಾ ಅಭ್ಯಾಸಕ್ಕೆ ಚಕ್ಕರ್ ಹಾಕುವುದು ನಿರಂತರವಾಗಿತ್ತು. ಹೀಗಾಗಿ ರಗ್ಬಿ ಕೋಚ್ ನೇರವಾಗಿ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆರಂಭಿಕ ದಿನಗಳಲ್ಲಿ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದ ತಾಯಿ, ಪದೇ ಪದೇ ದೂರು ಕೇಳಿಬಂದಾಗ ಪುತ್ರ ಅಭ್ಯಾಸಕ್ಕೆಂದು ತೆರಳಿ ಎಲ್ಲಿಗೆ ಹೋಗುತ್ತಿದ್ದಾನೆ ಅನ್ನೋದು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಪತ್ತೆ ಹಚ್ಚುವ ಕಾರ್ಯಕ್ಕೆ ಕುಟುಂಬ 2008ರಲ್ಲಿ ಅಭಿವೃದ್ಧಿಪಡಿಸಿದ ಆ್ಯಪ್ ನೆರವು ಪಡೆದಿದ್ದಾಳೆ.2008ರಲ್ಲಿ ಈ ಕುಟುಂಬದ ಸಾಫ್ಟ್‌ವೇರ್ ಎಂಜಿನಿಯರ್ಸ್ ಕುಟುಂಬಸ್ಥರಿಗೆ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ಈ ಆ್ಯಪ್ ಮೂಲಕ ಕುಟುಂಬದ ಸದಸ್ಯರು ಎಲ್ಲಿದ್ದಾರೆ ಅನ್ನೋ ಮಾಹಿತಿ ನಿಖರವಾಗಿ ಹೇಳಲಿದೆ. ಇಷ್ಟೇ ಅಲ್ಲ ಕುಟುಂಬದ ಜೊತೆಗೆ ಸಂಪರ್ಕ, ಮೆಸೆಜ್ ,ಡೇಟಾ ಶೇರಿಂಗ್, ಫೈಲ್ ಟ್ರಾನ್ಸ್‌ಫರ್ ಸೇರಿದಂತೆ ಹಲವು ಇತರ ಫೀಚರ್ಸ್ ಕೂಡ ಪರಿಚಯಿಸಲಾಗಿತ್ತು.

ಈ ಆ್ಯಪ್ ಬಳಸಿ ಪುತ್ರ ಎಲ್ಲಿದ್ದಾನೆ ಅನ್ನೋ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಪುತ್ರನ ಲೋಕೇಶನ್ ಪಾರ್ಕ್ ರೋಡ್ ಎಂದು ತೋರಿಸಿತ್ತು. ತಕ್ಷಣವೇ ಪಾರ್ಕ್ ರೋಡ್‌ಗೆ ತೆರಳಿದ ತಾಯಿಗೆ ಆಘಾತವಾಗಿದೆ.  ಪಾರ್ಕ್ ರೋಡ್ ಬಳಿ ನಿಲ್ಲಿಸಿದ ಕಾರಿನಲ್ಲಿ 26 ವರ್ಷದ ಸೌಥ್‌ಮೆಕ್ಲೆನಬರ್ಗ್ ಹೈಸ್ಕೂಲ್ ಟೀಚರ್ ಗೆಬ್ರಿಯೆಲಾ ಕಾರ್ತಾಯ ನ್ಯೂಫೆಲ್ಡ್ ಜೊತೆ ಸೆಕ್ಸ್‌ನಲ್ಲಿ ತೊಡಗಿಕೊಂಡಿದ್ದ. ರೆಡ್‌‌ಹ್ಯಾಂಡ್ ಆಗಿ ಪುತ್ರನ ಹಿಡಿದ ತಾಯಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 

ವಿಡಿಯೋ ಕಾಲ್‌ನಲ್ಲಿ ನಗ್ನ ಚಿತ್ರ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್; ಕಾರು ಚಾಲಕನ ವಿರುದ್ಧ ಮಹಿಳೆ ದೂರು

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿರುವ ಸೇರಿದಂತೆ ಇತರ ಎರಡು ಕೇಸು ದಾಖಲಾಗಿದೆ. ಇತ್ತ ಪುತ್ರನಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ.
 

Follow Us:
Download App:
  • android
  • ios