Asianet Suvarna News Asianet Suvarna News

ಮದುವೆಯಾಗಿ 22 ದಿನಕ್ಕೆ ದುರಂತ ಅಂತ್ಯ, ಬೈಕ್‌ನಲ್ಲಿ ಜಾಲಿರೈಡ್‌ ಹೊರಟಿದ್ದ ನವಜೋಡಿಯ ದಾರುಣ ಸಾವು!

ಮದುವೆಯಾಗಿ ತಿಂಗಳು ಪೂರೈಸದ ವ ವಿವಾಹೊತ ದಂಪತಿ ರಾತ್ರಿ ವೇಳೆ ಜಾಲಿರೈಡ್‌ಗೆಂದು ಹೋಗಿ ಬೈಕ್‌ ಅಪಘಾತವಾಗಿ ರಸ್ತೆಯಲ್ಲಿಯೇ ದಾರುಣ ಸಾವನ್ನಪ್ಪಿದ್ದಾರೆ.

Vijaypura newly married couple died in bike accident Kannada News sat
Author
First Published Jun 14, 2023, 11:12 AM IST

ವಿಜಯಪುರ (ಜೂ.14): ಇತ್ತೀಚೆಗೆ ತಾನೆ ಮದುವೆಯಾಗಿದ್ದ ಜೋಡಿಗೆ ಇನ್ನೂ ಹಸಿಮೈ ಕೂಡ ಆರಿರಲಿಲ್ಲ. ನೂರೆಂಟು ಕನಸುಗಳನ್ನು ಕಟ್ಟಿಕೊಂಡು ಅದ್ಧೂರಿಯಾಗಿ ವಿವಾವಾಗಿದ್ದ ಜೋಡಿ ತಿಂಗಳು ಪೂರೈಸುವ ಮೊದಲೇ ಭೀಕರ ಬೈಕ್‌ ಅಪಘಾತದಲ್ಲಿ ಜೊತೆಯಾಗಿಯೇ ಇಹಲೋಕವನ್ನು ತ್ಯಜಿಸಿದ್ದಾರೆ. 

ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನವವಿವಾಹಿತ ಜೋಡಿಯೊಂದು ರಸ್ತೆಯಲ್ಲಿಯೇ ಅನಾಥವಾಗಿ ಸಾವನ್ನಪ್ಪಿದ್ದಾರೆ.  ಅಪಘಾತದಲ್ಲಿ ನವ ವಿವಾಹಿತ ಗಂಡ ಹೆಂಡತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮದುವೆಯಾದ 24 ದಿನಗಳಲ್ಲೆ ನವಜೋಡಿ ದುರ್ಮರಣ ಕಂಡಿದ್ದಾರೆ. ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಘಟನೆ ನಡೆದಿದೆ. ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. 

ಕೊಪ್ಪಳದ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ದುರ್ಮರಣ

ಮೃತರನ್ನು ಹೊನಮಲ್ಲ ತೇರದಾಳ (31), ಅವರ ಪತ್ನಿ ಗಾಯತ್ರಿ (24) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಮೃತ ಯುವಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಕಳೆದ ಮೇ 22 ರಂದು ಹೊನಮಲ್ಲ ಹಾಗೂ ಗಾಯತ್ರಿ ವಿವಾಹವಾಗಿತ್ತು.ಈಗ ಮದುವೆಯಾಗಿ 24 ದಿನಗಳಲ್ಲಿ ರಾತ್ರಿ ವೇಳೆ ಪಕ್ಕದ ಊರಿಗೆ ಹೋಗುವಾಗ ಕ್ಯಾಂಟರ್‌ ಡಿಕ್ಕಿಯಾಗಿ ರಸ್ತೆಯಲ್ಲಿಯೇ ಭೀಕರವಾಗಿ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಟ್ಟುಹಬ್ಬಕ್ಕೆ ಹೋಗಿ ವಾಪಸ್‌ ಬರುವಾಗ ಘಟನೆ: ರಾತ್ರಿ ವೇಳೆ ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ನಡೆದ ದುರ್ಘಟನೆ ಸಂಭವಿಸಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೊಂದೆಡೆ, ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಲಕ್ಷಾಂತರ ರೂ. ಖರ್ಚು ಮಾಡಿ ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಜೋಡಿ ನೂರೆಂಟು ಕನಸು ಕಂಡಿದ್ದರು. ಆದರೆ, ಮದುವೆಯಾಗಿ ಒಂದು ತಿಂಗಳು ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಿಯೇ ಇಬ್ಬರೂ ದುರಂತ ಸಾವಿಗೀಡಾಗಿದ್ದಾರೆ ಎಂದು ಕುಟುಂಬ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ತಡರಾತ್ರಿ ಪ್ರಯಾಣ ಬೇಡವೆಂದರೂ ಹೊರಟಿದ್ದ ದಂಪತಿ: ಇನ್ನು ಸಂಬಂಧಿಕರ ಮನೆಯಲ್ಲಿ ಮಕ್ಕಳ ಹುಟ್ಟಹಬ್ಬ ಆಚರಣೆ ಮಾಡಿ ಊಟ ಮಾಡಿದ ದಂಪತಿಗಳಿಗೆ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಸಂಬಂಧಿಕರು ಹೇಳಿದ್ದಾರೆ. ನೀವು ಹೊಸ ಮದುವೆ ಜೋಡಿಯಾಗಿದ್ದು ರಾತ್ರಿ ವೇಳೆ ಸಂಚಾರ ಮಾಡಬಾರದು ಎಂದು ಮನೆಯವರು ಹೇಳಿದ್ದಾರೆ. ಆದರೆ, ಇದ್ಯಾವುದನ್ನೂ ಕೇಳದೆ ನಾಳೆ ಕೆಲಸಕ್ಕೆ ಹೋಗಬೇಕು, ಕೆಲವೇ ನಿಮಿಷಗಳನ್ನು ಮನೆಗೆ ಹೋಗುತ್ತೇವೆ ಎಂದು ಮನೆಯಿಂದ ಬೈಕ್‌ ಹತ್ತಿಕೊಂಡು ಇಬ್ಬರೂ ಹೊರಟಿದ್ದಾರೆ. ಆದರೆ, ಮನೆಯಿಂದ ಹೊರಟು ಕೆಲವೇ ನಿಮಿಷಗಳಲ್ಲಿ ಮನೆಯವರಿಗೆ ಸಾವಿನ ಸುದ್ದಿ ಬಂದಿದೆ. 

Belagavi: ಅತ್ತೆಗೆ- ಸೊಸೆ ಕಿರುಕುಳ ಕೊಟ್ಟಿದ್ದು ನಿಜ, ಆದ್ರೆ ಸಾವಿಗೆ ಕಾರಣವಲ್ಲವಂತೆ!

ಕೊಪ್ಪಳ ಕಾರು ಅಪಘಾತದಲ್ಲಿ ಮೂವರ ಸಾವು:  ಕೊಪ್ಪಳ (ಜೂ.13): ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಕಂಟೇನರ್‌ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿಯೂ ಕೂಡ ಲಾರಿ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಮೃತರು ಮೂದ್ದೇಬಿಹಾಳ ಮೂಲದವರಾಗಿದ್ದಾರೆ.  ಪ್ರವೀಣ್ ಕುಮಾರ್ ಭೋಜಪ್ಪ (27), ಸುರೇಶ್ ಈರಸಂಗಪ್ಪ ಹಂಡರಗಲ್ (43) ಹಾಗೂ ಗೌರಮ್ಮ ಹನುಮಗೌಡ ಕನ್ನೂರು (60) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. 

Follow Us:
Download App:
  • android
  • ios