ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ: ಸೂಸೈಡ್‌ಗೂ ಮುನ್ನ ಆತ ಮಾಡಿದ್ದೇನು ಗೊತ್ತಾ?
ನಗರದ ಲಾಡ್ಜ್‌ನಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಶಶಿಧರ್ ಎಂದು ಗುರುತಿಸಲಾಗಿದೆ. ಶಶಿಧರ್ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಿವಾಸಿ.
ಬೆಂಗಳೂರು (ಆ.16): ನಗರದ ಲಾಡ್ಜ್‌ನಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಶಶಿಧರ್ ಎಂದು ಗುರುತಿಸಲಾಗಿದೆ. ಶಶಿಧರ್ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಿವಾಸಿ. ಮೃತ ಶಶಿಧರ್ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆಯಾಗಿದ್ದನು. ಶಶಿಧರ್ ಮೇಲೆ ಬಾಲಕಿಯ ಪೋಷಕರು ಬಸವನ ಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿ ಶಶಿಧರ್ನನ್ನು ಬಂಧಿಸಲು ಮುಂದಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಬಂದು ಶಶಿಧರ್ ತಲೆಮರೆಸಿಕೊಂಡಿದ್ದನು.
ಮೊನ್ನೆ ಕಾಟನ್ ಪೇಟೆಯ ಗಜಾನನ ಲಾಡ್ಜ್‌ನಲ್ಲಿ ಶಶಿಧರ್. ರೂಮ್ ಮಾಡಿಕೊಂಡಿದ್ದ. ನಿನ್ನೆ ರಾತ್ರಿಯೇ ರೂಮ್‌ನಲ್ಲಿರೋ ಫ್ಯಾನ್‌ಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಲಾಡ್ಜ್‌ನ ಸಿಬ್ಬಂದಿ ರೂಮ್‌ಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ವಾಟ್ಸ್ಆ್ಯಪ್ ನಲ್ಲಿ ಸ್ಟೇಟಸ್ ಶಶಿಧರ್ ಹಾಕಿಕೊಂಡಿದ್ದ. ಆರು ವರ್ಷ ಲವ್ ಮಾಡಿ ಮದುವೆ ಮಾಡಿಕೊಂಡಿದ್ದಾಳೆ. ಇವಾಗ ಜಾತಿ ಸಲುವಾಗಿ ಅವರ ಅಪ್ಪ ಅಮ್ಮ ಮತ್ತೆ ಅವರ ಕಾಕಾ ಅವರಜ್ಜಿ ಮತ್ತೆ ಅವರ ಸಮಾಜದರು ನನ್ನ ಸಾವಿಗೆ ಕಾರಣ. ಇವಾಗ ನನ್ನಗೆ ಉಲ್ಟಾ ಮಾತಡ್ತಾ ಇದ್ದಾಳೆ. ಪೊಲೀಸ್ರು ನನ್ನ ಕಂಪ್ಲೇಂಟ್ ತಗೊಂತಿಲ್ಲ, ಅವರ ವಿರುದ್ಧ ತನಿಖೆ ಮಾಡುವಂತೆ ಯುವಕ ಸ್ಟೇಟಸ್ ಹಾಕಿಕೊಂಡಿದ್ದ.
ನೀರಮಾನ್ವಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಭಯ ಭೀತರಾದ ಗ್ರಾಮಸ್ಥರು!
ಗಜಾನನ ಲಾಡ್ಜ್‌ನಲ್ಲಿ ಸೂಡೈಡ್: ತನ್ನ ಪ್ರೇಯಸಿಯ ಬೆತ್ತಲೆ ಪೋಟೋ ವೈರಲ್ ಮಾಡಿ ಯುವಕ ಶಶಿಧರ ಸೂಸೈಡ್ ಮಾಡಿಕೊಂಡಿದ್ದು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದ ಯುವಕ. ಇನ್‌ಸ್ಟಾಗ್ರಾಮ್, ವಾಟ್ಸಾಪ್ ಸ್ಟೇಟಸ್‌ನಲ್ಲಿ ಇಬ್ಬರು ರಾಸಲೀಲೆಯಲ್ಲಿ ತೊಡಗಿರುವ ಪೋಟೋ ಹಾಕಿ ಆತ್ಮಹತ್ಯೆ ಮಾಡಡಿಕೊಂಡಿದ್ದಾನೆ. 6 ವರ್ಷ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆಕೆ ಅಪ್ರಾಪ್ತೆಯಾಗಿದ್ದಾಗಲೇ ಮದುವೆಯಾಗಿದ್ದ ಶಶಿಧರ. ಬಳಿಕ ಬೆಂಗಳೂರಿನಲ್ಲಿ ಕರೆತಂದು ರೂಂ ಮಾಡಿಕೊಂಡಿದ್ದ. ಈ ನಡುವೆ ಯುವತಿ ಪೋಷಕರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು.
ಯತ್ನಾಳ್ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು
ಯುವತಿಯು ಶಶಿಧರ್ ಜೊತೆಗಿರಲು ವಿರೋಧಿಸಿದ್ದಳಂತೆ. ಇದರಿಂದ ಶಶಿಧರ ಮನನೊಂದಿದ್ದ. ಅಪ್ರಾಪ್ತೆಯ ಮದುವೆ ಕಾರಣದಿಂದ ಈತನ ಮೇಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೋಕ್ಸೋ ಕೇಸ್‌ನಲ್ಲಿ ಪೊಲೀಸರು ಬಂಧನಕ್ಕಾಗಿ ಹುಡುಕಾಟ ನಡೆಸಿದಾಗ ಆತ್ಮಹತ್ಯೆ ಮುಂದಾದ ಶಶಿಧರ, ಮದುವೆಗೆ ವಿರೋಧಿಸಿದವರ ಹೆಸರು ಬರೆದು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಇತ್ತ ಆಕೆ ಜೊತೆಗಿರುವ ನಗ್ನ ಚಿತ್ರಗಳನ್ನಇನ್‌ಸ್ಟಾಗ್ರಾಮ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಶ್ಲೀಲ ಪೊಟೋಗಳನ್ನ ವೈರಲ್ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ. ಇನ್ನು ಶಶಿಧರ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಬೆಂಗಳೂರಿನತ್ತ ಹೊರಟಿದ್ದಾರೆ.