Asianet Suvarna News Asianet Suvarna News

Vijayapura ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಮೇಲೆ ಗ್ಯಾಂಗ್‌ ರೇಪ್‌: ರಾತ್ರಿಯಿಡೀ ನರಳಾಡಿದ ಯುವತಿ

ವಿಜಯಪುರ ನಗರದ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರವ ಮೂವರು ಯುವಕರು ಆಕೆಯ ಮೇಲೆ ಅತ್ಯಾಚಾರ ಮಾಡಿರುವ ದುರಂತ ಘಟನೆ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ. 

Vijayapura Gang Rape of young woman standing at Bus stop young woman moaned all night sat
Author
First Published Jan 19, 2023, 5:59 PM IST

ವಿಜಯಪುರ (ಜ.19): ವಿಜಯಪುರ ನಗರದ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರವ ಮೂವರು ಯುವಕರು ಆಕೆಯ ಮೇಲೆ ಅತ್ಯಾಚಾರ ಮಾಡಿರುವ ದುರಂತ ಘಟನೆ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ. 

ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಜನವರಿ 17 ರ ತಡರಾತ್ರಿಯ ವೇಳೆ ಮೂವರು ಯುವಕರು ಪುಸಲಾಯಿಸಿ ಕೇಂದ್ರ ಬಸ್ ನಿಲ್ಧಾಣದಿಂದ ಬೇರೆಡೆ ಕರೆದುಕೊಂಡು ಹೋಗಿದ್ದಾರೆ. ನಂತರ ನಗರದ ಸ್ಯಾಟಲೈಟ್‌ ಬಸ್ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಕಾಮುಕರು ಅಲ್ಲಿ ಯಾರೊಬ್ಬರೂ ಬರದಿರುವುದನ್ನು ಗಮನಿಸಿ ಯುವತಿಯನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಓರ್ವ ಯುವಕ ಮಾತ್ರ ಅತ್ಯಾಚಾರ ಮಾಡಿದ್ದು, ಉಳಿದ ಇಬ್ಬರು ಆತನಿಗೆ ಸಹಾಯ ಮಾಡಿದ್ದಾರೆ ಎಂದು ಕೇಳಿಬಂದಿದೆ.

9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್..!

ಅಸ್ವಸ್ಥ ಯುವತಿಯನ್ನು ಅಲ್ಲಿಯೇ ಬಿಟ್ಟು ಯುವಕರು ಪರಾರಿ:  ಇನ್ನು ಸ್ಯಾಟಲೈಟ್‌ ಬಸ್‌ ನಿಲ್ದಾಣದ ನಿರ್ಜನ ಪ್ರದೇಶದಲ್ಲಿ ಯುವತಿಯನ್ನು ಹೆದರಿಸಿ ಅತ್ಯಾಚಾರ ಮಾಡಿದ ಆರೋಪಿ ಸೇರಿದಂತೆ ಆತನಿಗೆ ಸಹಾಯ ಮಾಡಿದ ಇಬ್ಬರು ಯುವಕರು, ಘಟನೆಯ ನಂತರ ಆಕೆಯನ್ನು ಕತ್ತಲೆಯಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿ ಆಗಿದ್ದಾರೆ. ರಾತ್ರಿಯಿಡೀ ನಿರ್ಜನ ಪ್ರದೇಶಲ್ಲಿಯೇ ಯುವತಿ ಬಿದ್ದು ನರಳಾಡಿದ್ದಾಳೆ. ನಿನ್ನೆ ಬೆಳಗಿನ ಜಾವ (ಜನವರಿ 18) ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿಯ ಪ್ರದೇಶದಲ್ಲಿ ನರುಳುತ್ತಿದ್ದ ಯುವತಿಯನ್ನು ಸ್ಥಳಿಯರು ನೋಡಿದ್ದಾರೆ. ನಂತರ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ವಿಜಯಪುರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಅಸ್ವಸ್ಥ ಯುವತಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅತ್ಯಾಚಾರ ವಿಚಾರ ಬಹಿರಂಗ: ಅಸ್ವಸ್ಥಳಾಗಿದ್ದ ಯುವತಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ವಿಚಾರಣೆ ಮಾಡಿದ ವಿಜಯಪುರ ಮಹಿಳಾ ಠಾಣೆಯ ಇನ್ಸಪೆಕ್ಟರ್ ರಾಯಗೊಂಡ ಜನಾರ ಅವರಿಗೆ ತನ್ನ ಮೇಲೆ ಅತ್ಯಾಚಾರ ನಡೆದಿರುವ ಮಾಹಿತಿಯನ್ನು ಯುವತಿ ಹೇಳಿಕೊಂಡಿದ್ದಾಳೆ. ರಾತ್ರಿ ವೇಲೆ ನನ್ನನ್ನು ನಿಮ್ಮ ಮನೆಯವರು ಕರೆಯುತ್ತಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ನಂತರ ನಿರ್ಜನ ಪ್ರದೇಶದಲ್ಲಿ ಓರ್ವ ಅತ್ಯಾಚಾರ ಮಾಡಿದ್ದು, ಇನ್ನಿಬ್ಬರು ಆತನಿಗೆ ಸಹಾಯ ಮಾಡಿದ್ದಾರೆಂದು ಯುವತಿ ಮಾಹಿತಿ ನೀಡಿದ್ದಾಳೆ.

ಸ್ವಾಧಾರ ಕೇಂದ್ರದಲ್ಲಿ ರಕ್ಷಣೆ:  ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಪೊಲೀಸ್‌ ಅಧಿಕಾರಿಗಳು,  ಸರ್ಕಾರಿ ಸ್ವಾಮ್ಯದ ಸ್ವಾದಾರ ಕೇಂದ್ರದಲ್ಲಿ ಯುವತಿಯನ್ನು ಇಟ್ಟಿದ್ದಾರೆ. ಆದರೆ, ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋದ ಮೂವರ ಬಂಧನಕ್ಕಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆಸಿದ್ದಾರೆ. ಅತ್ಯಾಚಾರ ಮಾಡಿದ ವ್ಯಕ್ತಿ ಹಾಗೂ ಸಹಾಯ ಮಾಡಿದ ಇಬ್ಬರ ಬಂಧನಕ್ಕೆ ಜಾಲ ಬೀಸಿದ್ದು, ಸುತ್ತಲಿನ ಪ್ರದೇಶದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಘಟನೆ ಕುರಿತಂತೆ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ಬಾಯ್‌ಫ್ರೆಂಡ್ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರಿಂದ ಗ್ಯಾಂಗ್ ರೇಪ್!

ಇಂಡಿ ತಾಲೂಕಿನ ಯುವತಿ: ಇನ್ನು ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯನ್ನು ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದವಳು ಎಂದು ಗುರುತಿಸಲಾಗಿದೆ. ಆದರೆ, ಮಧ್ಯರಾತ್ರಿಯಲ್ಲಿ ಬಸ್‌ ನಿಲ್ದಾಣದಲ್ಲಿ ಯಾಕೆ ಒಂಟಿಯಾಗಿ ಇದ್ದಳು ಎಂಬುದು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆದರೆ, ಆಕೆಯ ಬಟ್ಟೆ ಹಾಗೂ ವೇಷಗಳನ್ನು ನೋಡಿದರೆ ಮಾನಸಿಕ ಅಸ್ವಸ್ಥೆ ಆಗಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅತ್ಯಾಚಾರ ಘಟನೆಗೆ ಕಾರಣವಾದ ಆರೋಪಿಗಳ ಪತ್ತೆಗೆ ಪೊಲೀಸ್‌ರು ತನಿಖೆ ಚುರುಕುಗೊಳಿಸಿದ್ದಾರೆ.

Follow Us:
Download App:
  • android
  • ios