ಮುಂಬೈನಲ್ಲಿ ಭೀಕರ ಕೊಲೆಯಾಗಿದೆ. ಆಸ್ತಿಯ ವಿಚಾರವಾಗಿ ಸ್ವತಃ ಪುತ್ರನೇ ಬೇಸ್‌ಬಾಲ್‌ ಬ್ಯಾಟ್‌ನಿಂದ ತಲೆಗೆ ಬಡಿದು ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಶವವನ್ನು ನದಿಗೆ ಎಸೆದಿರುವ ಘಟನೆ ನಡೆದಿದೆ.

ನವದೆಹಲಿ (ಡಿ. 10): ಮುಂಬೈನಲ್ಲಿ ಆಸ್ತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ವತಃ ಪುತ್ರನೇ ತಾಯಿಯನ್ನು ದಾರುಣವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ವಿಲೆ ಪಾರ್ಲೆ ಪ್ರದೇಶದಲ್ಲಿ ಈ ಬರ್ಬರ ಕೃತ್ಯ ವರದಿಯಾಗಿದ್ದು, ಆಸ್ತಿ ವಿವಾದದ ವಿಚಾರವಾಗಿ ಸಿಟ್ಟಾಗಿದ್ದ ಪುತ್ರ, ಬೇಸ್‌ಬಾಲ್‌ ಬ್ಯಾಟ್‌ನಿಂದ ಆಕೆಯ ತಲೆಗೆ ಹೊಡೆದು ಸಾಯಿಸಿದ್ದಾನೆ. ಬಳಿಕ ಆಕೆಯ ಶವವನ್ನು ಸಮೀಪದ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಹು ಪೊಲೀಸ್‌ ಈಗಾಗಲೇ ಆರೋಪಿಯಾಗಿರುವ ಪುತ್ರ 43 ವರ್ಷದ ಸಚಿನ್‌ನನ್ನು ಬಂಧಿಸಿದ್ದಾರೆ. ಅದರೊಂದಿಗೆ ಮನೆಯ ಕೆಲಸಗಾರನಾಗಿದ್ದ 25 ವರ್ಷದ ಚೋಟು ಅಲಿಯಾಸ್‌ ಲಾಲುಕುಮಾರ್ ಮಂಡಲ್‌ನಲ್ಲಿ ಬಂಧನ ಮಾಡಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ, ಕಲ್ಪತರು ಸೊಸೈಟಿಯ ಭದ್ರತಾ ಮೇಲ್ವಿಚಾರಕರು ಜುಹು ಪೊಲೀಸರನ್ನು ಸಂಪರ್ಕಿಸಿ, ವೃದ್ಧೆ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.

ದೂರಿನ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು, ಮೃತ ತಾಯಿಯ ಮೊಬೈಲ್ ಸ್ಥಳವು ಅವರ ಕಟ್ಟಡದ ಬಳಿ ದೊರೆತಿದ್ದರೆ, ಅವರ ಮಗನ ಸ್ಥಳ ಪನ್ವೇಲ್‌ನಲ್ಲಿ ದಾಖಲಾಗಿತ್ತು. ಮರುದಿನ ಪೊಲೀಸರು ಸಚಿನ್‌ ಮತ್ತು ಆತನ ಸೇವಕನನ್ನು ಠಾಣೆಗೆ ಕರೆಸಿ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

Bengaluru: ಟೀ ಅಂಗಡಿ ಹುಡುಗರ ಮೇಲಿನ ಹಲ್ಲೆ ಪ್ರಕರಣಕ್ಕೆ ರಿವೇಂಜ್‌ ಟ್ವಿಸ್ಟ್‌

ವಿಚಾರಣೆ ವೇಳೆ ಆರೋಪಿ ಸಚಿನ್‌, ತಾಯಿಯ ತಲೆಗೆ ಬೇಸ್‌ಬಾಲ್ ಬ್ಯಾಟ್‌ನಿಂದ ಹಲವು ಬಾರಿ ಹೊಡೆದಿದ್ದಾಗಿ ಹೇಳಿದ್ದಾನೆ. ಆ ಕ್ಷಣದಲ್ಲಿ ಬಂದ ಕೋಪದಿಂದ ನಾನು ತಾಯಿಯನ್ನು ಕೊಂದಿದ್ದಾಗಿ ಬಹಿರಂಗಪಡಿಸಿದ್ದಾರೆ. ತನ್ನ ಹಾಗೂ ತಾಯಿಯ ನಡುವೆ ಆಸ್ತಿಯ ವಿಚಾರವಾಗಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎಂದು ಆತ ತಿಳಿಸಿದ್ದು, ಆಕೆ ಸಾವು ಕಂಡ ಬಳಿಕ ಶವವನ್ನು ರಾಯಗಢ್‌ ಜಿಲ್ಲೆಯಲ್ಲಿ ನದಿಯಲ್ಲಿ ಎಸೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

Crime News: ಪ್ರೀತಿಸಿ ಮದುವೆಯಾದವಳನ್ನೇ ಕೊಂದು ಬಿಟ್ಟನಾ ಪೊಲೀಸ್?

ಮಹಿಳೆಯ ಹಿರಿಯ ಮಗ ಅಮೆರಿಕದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302,201 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.