ಬ್ರೇಕಪ್​ಗೆ ಒಪ್ಪದಿದ್ದಕ್ಕೆ ಪ್ರಿಯಕರನ ಹತ್ಯೆ: ವಿಷ ನೀಡಿದ್ದ ಗ್ರೀಷ್ಮಾ ಕಾಟಕ್ಕೆ ಬೇಸತ್ತ ಕೈದಿಗಳು!

ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾ ಸೇರಿದಂತೆ ಇಬ್ಬರು ಕೈದಿಗಳನ್ನು ಸ್ಥಳಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಗ್ರೀಷ್ಮಾ ಬಂಧನವಾದಾಗಿನಿಂದ ಅಟ್ಟಕುಳಂಗರ ಜೈಲಿನಲ್ಲಿದ್ದರು ಎಂದು ತಿಳಿದುಬಂದಿದೆ. 

greeshma accused in sharone murder case shifted to jail in mavelikkara on complaint of fellow inmates ash

ತಿರುವನಂತಪುರ (ಸೆಪ್ಟೆಂಬರ್ 16, 2023): ಕೇರಳದ ಪರಸ್ಸಾಲ ಶರೋನ್ ಹತ್ಯೆ ಪ್ರಕರಣದ ಆರೋಪಿ ಗ್ರೀಷ್ಮಾ ಅವರನ್ನು ಅವರನ್ನು ಮತ್ತೊಂದು ಜೈಲಿಗೆ ಸ್ಥಳಾಂತರಿಸಲಾಗಿದೆ. ಕೇರಳದ ಅಟ್ಟಕುಳಂಗರ ಮಹಿಳಾ ಜೈಲಿನಲ್ಲಿದ್ದ ಗ್ರೀಷ್ಮಾ ಅವರನ್ನು ಮಾವೇಲಿಕ್ಕರ ವಿಶೇಷ ಜೈಲಿಗೆ ಸ್ಥಳಾಂತರಿಸಲಾಗಿದೆ. 

ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾ ಸೇರಿದಂತೆ ಇಬ್ಬರು ಕೈದಿಗಳನ್ನು ಸ್ಥಳಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಗ್ರೀಷ್ಮಾ ಬಂಧನವಾದಾಗಿನಿಂದ ಅಟ್ಟಕುಳಂಗರ ಜೈಲಿನಲ್ಲಿದ್ದರು ಎಂದು ತಿಳಿದುಬಂದಿದೆ. 

ಇದನ್ನು ಓದಿ: ಅರೇಬಿಕ್‌ ಕಾಲೇಜಲ್ಲಿ ಉಗ್ರ ತರಬೇತಿ: ದೇಶದ 30 ಸ್ಥಳಗಳಲ್ಲಿ ಎನ್‌ಐಎ ರೇಡ್‌; ಡಿಎಂಕೆ ಕೌನ್ಸಿಲರ್‌ ಮನೆ ಮೇಲೂ ಶೋಧ

ಪ್ರಕರಣದ ಹಿನ್ನೆಲೆ..
ಅಕ್ಟೋಬರ್ 14, 2022 ರಂದು ತಮಿಳುನಾಡಿನ ಪಲುಕಲ್‌ನಲ್ಲಿರುವ ತನ್ನ ಮನೆಯಲ್ಲಿ ಗ್ರೀಷ್ಮಾ ತನ್ನ ಪ್ರಿಯಕರ ಶರೋನ್‌ಗೆ ವಿಷವನ್ನು ನೀಡಿದ್ದಳು. ಶರೋನ್‌ಗೆ ಅಸ್ವಸ್ಥತೆಯ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವಾರು ದಿನಗಳ ಕಾಲ ಜೀವನದೊಂದಿಗೆ ಹೋರಾಡಿದ ನಂತರ ಶರೋನ್ ಅಕ್ಟೋಬರ್ 25 ರಂದು ನಿಧನರಾಗಿದ್ದರು.

ಆದರೆ, ಶರೋನ್ ತನ್ನ ಸಾವಿನ ಹೇಳಿಕೆಯಲ್ಲೂ ಗರ್ಲ್‌ಫ್ರೆಂಡ್‌ ಗ್ರೀಷ್ಮಾಳ ಮೇಲೆ ಅನುಮಾನ ಪಡಲಿಲ್ಲ. ಆಕೆಯೇ ನನಗೆ ವಿಷ ಹಾಕಿದ್ದಾಳೆ ಎಂದು ಆತ ಹೇಳಲಿಲ್ಲ. ಈ ಹಿನ್ನೆಲೆ ಪರಸ್ಸಾಲ ಪೊಲೀಸರು ಇದೊಂದು ಸಾಮಾನ್ಯ ಸಾವು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ನಂತರ ವಿಶೇಷ ತನಿಖಾ ತಂಡ ನಡೆಸಿದ ವಿಚಾರಣೆ ಮತ್ತು ತನಿಖೆಯ ಬಳಿಕ ಗ್ರೀಷ್ಮಾ ಶರೋನ್‌ಗೆ ವಿಷ ನೀಡಿ ಹತ್ಯೆ ಮಾಡಿರುವುದು ಪತ್ತೆಯಾಗಿತ್ತು..

ಇದನ್ನೂ ಓದಿ: ಹೆಂಡ್ತಿ ಮೇಲೆ ಅನುಮಾನ: ಗರ್ಭಿಣಿ ಪತ್ನಿ, ಮಗಳನ್ನೇ ಕೊಲೆ ಮಾಡಿದ ಯೋಧ

ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಗ್ರೀಷ್ಮಾ ಶರೋನ್‌ನನ್ನು ಕೊಂದಳು ಎಂದು ಹೇಳಲಾಗಿದೆ. ಇನ್ನು, ಆಕೆಯ ತಾಯಿ ಮತ್ತು ಚಿಕ್ಕಪ್ಪ ಗ್ರೀಷ್ಮಾಳನ್ನು ಬಚಾವ್‌ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡ ಆಧಾರದ ಮೇಲೆ, ಅವರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

ಆಕೆಯ ಊರಾದ ಪರಸ್ಸಾಲಾದಲ್ಲಿ ಶರೋನ್‌ ರಾಜ್‌ಗೆ ವಿಷ ನೀಡಿದ್ದಳು. ಗ್ರೀಷ್ಮಾ ಅವರ ತಾಯಿ ಮತ್ತು ಅಂಕಲ್‌ ಆಕೆಯಿಂದ ಕೊಲೆಯ ಬಗ್ಗೆ ತಿಳಿದುಕೊಂಡರು ಮತ್ತು ನಂತರ ಅವಳನ್ನು ರಕ್ಷಿಸಲು ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳವಾರ ಗ್ರೀಷ್ಮಾ ಅವರ ಮನೆಯ ಸುತ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಪೊದೆಗಳ ಸುತ್ತಲು ಕೀಟನಾಶಕದ ವಿಷದ ಬಾಟಲಿಯನ್ನು ಪತ್ತೆ ಮಾಡಿದ್ದಾರೆ. ಬಳಿಕ ಆಯುರ್ವೇದ ಔಷಧದ ಬಾಟಲಿ ಪತ್ತೆ ಕಾರ್ಯ ಕೂಡ ನಡೆದಿದೆ.

ಇದನ್ನೂ ಓದಿ: ಬಿರಿಯಾನಿಗೆ ರಾಯಿತಾ ಕೇಳಿದ್ದಕ್ಕೆ ಥಳಿಸಿದ ಹೋಟೆಲ್‌ ಸಿಬ್ಬಂದಿ: ಕೆಲವೇ ಕ್ಷಣದಲ್ಲಿ ಗ್ರಾಹಕ ಸಾವು!

ತಿರುವನಂತಪುರಂನಲ್ಲಿ ಶರೋನ್ ನಿಗೂಢವಾಗಿ ಮೃತಪಟ್ಟ ಕೆಲ ದಿನಗಳ ನಂತರ ಆತನ ಗೆಳತಿ ಗ್ರೀಷ್ಮಾ ತಾನು ಕುಡಿಯಲು ಕೊಟ್ಟ ಕಷಾಯದಲ್ಲಿ (ಆಯುರ್ವೇದದ ಮಿಶ್ರಣ) ವಿಷ ಬೆರೆಸಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಮಾನದ ಲೈಟ್‌ ಆಫ್‌ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ

Latest Videos
Follow Us:
Download App:
  • android
  • ios