Asianet Suvarna News Asianet Suvarna News

ಅಪ್ರಾಪ್ತೆಯಾಗಿದ್ದಾಗ ಅತ್ಯಾಚಾರ: 28 ವರ್ಷಗಳ ಬಳಿಕ ಠಾಣೆ ಮೆಟ್ಟಿಲೇರಿದ ಮಹಿಳೆ

ಬಾಲ್ಯದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿ 35 ವರ್ಷದ ಮಹಿಳೆಯೊಬ್ಬಳು ಘಟನೆ ನಡೆದ ಬರೋಬ್ಬರಿ 28 ವರ್ಷಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಉತ್ತರಪ್ರದೇಶದ (UP) ಅಲಿಗಡದಲ್ಲಿ ನಡೆದಿದೆ.

Uttar Pradesh woman registered case aganist her rapist after 28 year of incident akb
Author
First Published Sep 19, 2022, 10:56 AM IST

ಅಲಿಗಡ: ಬಾಲ್ಯದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿ 35 ವರ್ಷದ ಮಹಿಳೆಯೊಬ್ಬಳು ಘಟನೆ ನಡೆದ ಬರೋಬ್ಬರಿ 28 ವರ್ಷಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಉತ್ತರಪ್ರದೇಶದ(Uttar Pradesh) ಅಲಿಗಡದಲ್ಲಿ (Aligarh) ನಡೆದಿದೆ.  ತಾನು ಏಳು ವರ್ಷದವಳಿದ್ದಾಗ ತನ್ನ ಮೇಲೆ ತನ್ನ ಮಲತಂದೆಯ (Step Father) ಕುಟುಂಬದ ಅನೇಕ ಪುರುಷರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಏಳು ವರ್ಷದಿಂದ ಶುರುವಾಗಿ 19 ವರ್ಷ ತುಂಬುವವರೆಗೆ ಅವರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. 

ತನ್ನ ಪತಿ ಮಾಜಿ ಸೈನಿಕನಾಗಿದ್ದು, ಅವರು ನನಗೆ ದೂರು ದಾಖಲಿಸುವಂತೆ ಧೈರ್ಯ ತುಂಬಿದರು. ಹೀಗಾಗಿ ಕೊನೆಗೂ ತಾನು ಧೈರ್ಯ ತುಂಬಿಕೊಂಡು ಬಂದು ಆರೋಪಿಗಳ ವಿರುದ್ಧ ದೂರು ದಾಖಲಿಸಿರುವುದಾಗಿ ಮಹಿಳೆ ಹೇಳಿದ್ದಾರೆ. ಕಾಮುಕರು ಇವರಿಗೆ 19 ವರ್ಷ ತುಂಬುವವರೆಗೂ 12 ವರ್ಷಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಈಕೆಯ ಪತಿ ದೂರು ದಾಖಲಿಸುವಂತೆ ಧೈರ್ಯ ತುಂಬಿರುವುದರಿಂದ ತಪ್ಪಿತಸ್ಥರ ವಿರುದ್ಧ 28 ವರ್ಷಗಳ ಬಳಿಕ ಪ್ರಕರಣ ದಾಖಲಿಸುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ.

Crime News: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಖಾಸಗಿ ಅಂಗ ಕಚ್ಚಿ ವಿಕೃತಿ

ಈ ಬಗ್ಗೆ ಮೊದಲಿಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರು, ನಂತರ ಮಹಿಳೆ ಹಿರಿಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ (SSP), ರಾಷ್ಟ್ರೀಯ ಮಹಿಳಾ ಆಯೋಗ (National Commission for Woman) ಮತ್ತು ಮುಖ್ಯಮಂತ್ರಿಯ (CM) ಕುಂದು ಕೊರತೆ ಪರಿಹಾರ ಪೋರ್ಟಲ್ ಅನ್ನು ಸಂಪರ್ಕಿಸಿದ ಬಳಿಕ ಪೊಲೀಸರು ಅಂತಿಮವಾಗಿ ಎಫ್‌ಐಆರ್ (FIR)  ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಮತ್ತು 506 (ಅಪರಾಧ ಬೆದರಿಕೆ) ಅಡಿ ಈಗ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Lakhimpur Kheri Horror: ಇಬ್ಬರು ದಲಿತ ಬಾಲಕಿಯರ ಅತ್ಯಾಚಾರ, ಕೊಲೆ; 6 ಆರೋಪಿಗಳು ವಶಕ್ಕೆ

ಮೊದಲ ಬಾರಿಗೆ ನನ್ನ ಮಲ ಚಿಕ್ಕಪ್ಪ(step uncle) ನನ್ನ ಮೇಲೆ ಮೊದಲ ಬಾರಿ ಅತ್ಯಾಚಾರವೆಸಗಿದ್ದರು. ಈ ಘಟನೆಯ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ವಿಚಾರವನ್ನು ತಾಯಿಗೆ ಹೇಳಿದಾಗ ಆಕೆ ನನಗೆ ಔಷಧಿಯನ್ನು ನೀಡಿ ಈ ವಿಚಾರವಾಗಿ ಎಲ್ಲೂ ಬಾಯಿ ಬಿಡದಂತೆ ತಿಳಿಸಿದರು. ಆದರೆ ಇದು ಕೇವಲ ಒಂದು ದಿನ ಮಾತ್ರವಾಗಿರಲಿಲ್ಲ. ನನಗೆ 19 ವರ್ಷ ತುಂಬುವವರೆಗೂ ನನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರ (Rape) ನಿಂತ ಬಳಿಕವೂ ಕೂಡ ಅವರು ನನಗೆ ಅವಮಾನಿಸುವ ಯಾವ ಅವಕಾಶವನ್ನು ಕೂಡ ಬಿಡಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಮದುವೆಯ (wedding) ನಂತರವೂ ಕೂಡ ಅವರು ನಾನು ತವರಿಗೆ ಹೋದಾಗಲೆಲ್ಲಾ ಅವರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಆಘಾತದಿಂದ (trauma) ಹೊರಬರಲಾಗದೇ ನಾನು ಈ ವಿಚಾರವನ್ನು ನನ್ನ ಪತಿಯೊಂದಿಗೆ ಹೇಳಿಕೊಂಡಿದ್ದೆ. ಅವರು ಪೊಲೀಸರಿಗೆ ದೂರು ನೀಡುವಂತೆ ಧೈರ್ಯತುಂಬಿದರು ಎಂದು ಮಹಿಳೆ ಹೇಳಿಕೊಂಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

Follow Us:
Download App:
  • android
  • ios