Asianet Suvarna News Asianet Suvarna News

ರಾಯಚೂರು: ಹೋಟೆಲ್‌ನಲ್ಲಿ ಬಾಣಂತಿ ಆತ್ಮಹತ್ಯೆ, ಹುಟ್ಟಿದ 20 ದಿನಕ್ಕೇ ತಾಯಿ ಕಳೆದುಕೊಂಡ ಹಸುಗೂಸು..!

ಮಗ ಹುಟ್ಟಿದ ಖುಷಿಯಲ್ಲಿ ಅವಿನಾಶ್ ಇಡೀ ಹೋಟೆಲ್ ಸಿಬ್ಬಂದಿಗೆ ಪಾರ್ಟಿ ಕೂಡ ನೀಡಿದ್ದನು. ಆ ಪಾರ್ಟಿ ವೇಳೆ ಎಲ್ಲರೂ ಕುಡಿದು ಕುಪ್ಪಳಿಸಿದ್ರು. 

Uttar Pradesh Origin 23 Year Old Woman Committed Suicide in Raichur grg
Author
First Published Dec 14, 2023, 4:30 AM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಡಿ.14):  ಗಂಡ ಕೆಲಸ ಮಾಡುವ ಹೋಟೆಲ್‌ನ ರೂಂನಲ್ಲಿಯೇ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಿನ್ನೆ(ಬುಧವಾರ) ನಡೆದಿದೆ. ನಗರದ ಸಂತೋಷಿ ಸರೋವರ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಸೋನಿ(23) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.  

ಮೃತ ಮಹಿಳೆ ಉತ್ತರ ಪ್ರದೇಶದ ನಗಲಬಾರಿ ಜಿಲ್ಲೆಯ ಅತ್ರಾಸ್ ಮೂಲದವರು ಎಂದು ತಿಳಿದು ಬಂದಿದೆ. ಸೋನಿಗೂ ಮತ್ತು ಅವಿನಾಶ್ ಗೂ ಕಳೆದ ವರ್ಷ ಮದುವೆ ಆಗಿತ್ತು. ಮದುವೆ ಆದ ಬಳಿಕ ಸೋನಿಗೆ ಉತ್ತರಪ್ರದೇಶದಿಂದ ಕರೆದುಕೊಂಡು ಬಂದ ಅವಿನಾಶ್, ತಾನು ಕೆಲಸ ಮಾಡುವ ರಾಯಚೂರು ನಗರದ ಕೇಂದ್ರ ಸ್ಥಾನದಲ್ಲಿ ಇರುವ ಸಂತೋಷ ಸರೋವರ ಹೋಟೆಲ್ ‌ನ ರೂಂ ನಂಬರ್ 113ರಲ್ಲಿಯೇ ವಾಸವಾಗಿದ್ರು. ಹೋಟೆಲ್ ‌ನಲ್ಲಿ ಸ್ವೀಟ್ ತಯಾರಿಕೆ ಮಾಡುತ್ತಿದ್ದ ಅವಿನಾಶ್ ಮತ್ತು ಸೋನಿ ಖುಷಿಯಿಂದ ಜೀವನ ಮಾಡುತ್ತಿದ್ರು.

ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಮಗ ಹುಟ್ಟಿದಕ್ಕೆ ಹೋಟೆಲ್ ಸಿಬ್ಬಂದಿಗೆ ಪಾರ್ಟಿ ಕೊಟ್ಟಿದ್ದ ಅವಿನಾಶ್:

ಉತ್ತರ ಪ್ರದೇಶದಿಂದ ರಾಯಚೂರಿಗೆ ಹೊಟ್ಟೆ ಪಾಡಿಗೆ ಬಂದು ಜೀವನ ಮಾಡುತ್ತಿದ್ದ ಸೋನಿ ಮತ್ತು ಅವಿನಾಶ್ ದಂಪತಿ ತುಂಬಾ ಖುಷಿಯಾಗಿದ್ರು. ಕಳೆದ 20 ದಿನಗಳ ಹಿಂದೆ ಮೃತ ಸೋನಿ ಗಂಡು ಮಗುವಿಗೆ ಜನ್ಮ ‌ನೀಡಿದ್ದಳು. ಹೆರಿಗೆ ವೇಳೆ ಮಗುವಿನ ತೂಕ ಹೆಚ್ಚಾಗಿದೆ ಎಂದು ವೈದ್ಯರು ಅರ್ಬಾಷನ್ ಮಾಡಿದ್ರು. ಅರ್ಬಾಷನ್ ಆದ ಬಳಿಕ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಅದೇ ಹೋಟೆಲ್ ರೂಂಗೆ ಬಂದು ವಾಸವಾಗಿದ್ದರು. ಮಗ ಹುಟ್ಟಿದ ಖುಷಿಯಲ್ಲಿ ಅವಿನಾಶ್ ಇಡೀ ಹೋಟೆಲ್ ಸಿಬ್ಬಂದಿಗೆ ಪಾರ್ಟಿ ಕೂಡ ನೀಡಿದ್ದನು. ಆ ಪಾರ್ಟಿ ವೇಳೆ ಎಲ್ಲರೂ ಕುಡಿದು ಕುಪ್ಪಳಿಸಿದ್ರು. 

ಪತ್ನಿ ನೋವಿಗೆ ಸ್ಪಂದಿಸದೇ ಕ್ರಿಕೆಟ್ ಮ್ಯಾಚ್ ನೋಡಲು ಹೋಗಿದ್ದ ಪತಿ:

ಗಂಡ ಅವಿನಾಶ್ ನನ್ನ ನಂಬಿ ಆಕೆ ಉತ್ತರ ಪ್ರದೇಶದಿಂದ ರಾಯಚೂರಿಗೆ ಬಂದಿದ್ದಳು. ಪತಿ ಕೆಲಸ ಮಾಡುವ ಹೋಟೆಲ್ ನ ರೂಂನಲ್ಲಿಯೇ ವಾಸವಾಗಿದ್ದ ಸೋನಿಗೆ 20 ದಿನಗಳ ಹಿಂದೆ ಅಬಾರ್ಷನ್ ಆಗಿ ಹೆರಿಗೆ ಆಗಿತ್ತು. ಹಸುಗೂಸಿನ ಜೊತೆಗೆ ಹೋಟೆಲ್ ರೂಂನಲ್ಲಿ ಸೋನಿ ವಾಸವಾಗಿದ್ದಳು. ಅಬಾರ್ಷನ್ ನೋವು ಹೆಚ್ಚಾದಾಗ ಗಂಡನ ಗಮನಕ್ಕೆ ತಂದಿದ್ದಾಳೆ. ಆದ್ರೆ ಗಂಡ ಅವಿನಾಶ್ ಮಾತ್ರ ಕೇರ್ ಮಾಡದೇ ಕಡಿಮೆ ಆಗುತ್ತೆ ಅಂತ ಹೇಳುತ್ತಾ ಕಾಲಹರಣ ಮಾಡಿದ್ದಾನೆ.‌ ದಿನೇ ದಿನೇ ನೋವು ಹೆಚ್ಚಾಗಿದೆ. ಆದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪತಿ, ಪತ್ನಿಯನ್ನ ಹೋಟೆಲ್ ರೂಂನಲ್ಲಿ ಬಿಟ್ಟು ಕ್ರಿಕೆಟ್ ಮ್ಯಾಚ್‌ ನೋಡಲು ಹೋಗಿದ್ದಾನೆ. ಇತ್ತ ಸೋನಿ ಅಬಾರ್ಷನ್ ನೋವು ಹೆಚ್ಚಾಗಿದಕ್ಕೆ 20 ದಿನದ ಹಸುಗೂಸು ಬಿಟ್ಟು ಅದೇ ರೂಂನಲ್ಲಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. 

20 ದಿನಕ್ಕೇ ಅನಾಥವಾದ ಹಸುಗೂಸು:

ಸೋನಿ ಮತ್ತು ಅವಿನಾಶ್ ದಂಪತಿಗೆ ಮುದ್ದಾಗಿರುವ ಗಂಡ ‌ಮಗು ಜನಿಸಿತ್ತು. ಈ ದಂಪತಿ ಖುಷಿಯಾಗಿ ಇದ್ರು.‌ಈ ದಂಪತಿ ಮೇಲೆ ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಸುಂದರವಾದ ಸಂಸಾರದಲ್ಲಿ ಈಗ ಬಿರುಗಾಳಿ ಬೀಸಿ ಹೋಗಿದೆ.‌ಬಿರುಗಾಳಿ ಹೊಡೆತಕ್ಕೆ ಇಡೀ ಸಂಸಾರವೇ ನಡುರಸ್ತೆಗೆ ಬಂದು ನಿಂತಿದೆ. ಜಗತ್ತಿನ ಅರಿವೇ ಗೊತ್ತಿಲ್ಲ 20 ದಿನಗಳ ಹಿಂದೆ ಭೂಮಿಗೆ ಬಂದ ‌ಹಸುಗೂಸು ತಾಯಿಯನ್ನ ಕಳೆದುಕೊಂಡ ಅನಾಥವಾಗಿದೆ. ತಾಯಿಯೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ರೆ, ಇತ್ತ ಪೊಲೀಸರು ತಂದೆಯನ್ನ ವಶಕ್ಕೆ ಪಡೆದು ವಿಚಾರಣೆ ಕರೆದುಕೊಂಡು ಹೋದ್ರು. ಇತ್ತ ಹಸುಗೂಸು ಅಳುವುದು ನೋಡಿದ್ರೆ ಕರಳುಚೂರು ಅನ್ನಿಸುತ್ತಿತ್ತು.‌ಈ ಸಂದರ್ಭ ಈ ಭೂಮಿ ಮೇಲೆ ನಮ್ಮ ಬದ್ಧವೈರಿಗೂ ಬರಬಾರದು. 

ಬೆಂಗಳೂರು: ಮನೆ ಬಿಟ್ಟು ಓಡಿ ಬಂದು ಮದುವೆಯಾಗಿದ್ದ ಯುವತಿ ಆತ್ಮಹತ್ಯೆ, ಕಾರಣ ನಿಗೂಢ?

ಹೋಟೆಲ್‌ಗೆ ಎಸ್‌ಪಿ ನಿಖಿಲ್. ಬಿ. ಭೇಟಿ

ರಾಯಚೂರು ‌ನಗರದ ಸಂತೋಷಿ ಸರೋವರ ಹೋಟೆಲ್ ನಲ್ಲಿ ಬೆಳಂಬೆಳಗ್ಗೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು.‌ ಮಹಿಳೆ ಆತ್ಮಹತ್ಯೆ ಬಗ್ಗೆ ಹೋಟೆಲ್ ‌ಮಾಲೀಕರು ಪಶ್ಚಿಮ ಠಾಣೆಗೆ ಮಾಹಿತಿ ‌ನೀಡಿದ್ರು. ಈ  ಸುದ್ದಿ ತಿಳಿದ ತಕ್ಷಣವೇ ಖುದ್ದು ರಾಯಚೂರು ಎಸ್ಪಿ ನಿಖಿಲ್. ಬಿ. ಭೇಟಿ ‌ನೀಡಿ ಪರಿಶೀಲನೆ ‌ನಡೆಸಿದ್ರು. ಅಲ್ಲದೆ ಹೋಟೆಲ್ ನ ಪ್ರತಿಯೊಂದು ಸಿಸಿಟಿವಿ ಸಹ ಪರಿಶೀಲನೆ ‌ನಡೆಸಿದ್ರು. ಆ ಬಳಿಕ ಬೆರಳಚ್ಚು ತಜ್ಞರ ತಂಡವು ಸಹ ಇಡೀ ರೂಂ. ತಪಾಸಣೆ ‌ನಡೆಸಿದ್ರು. ಬಳಿಕ ಮೃತದೇಹ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ರು. 

ಇತ್ತ ಪತಿಯನ್ನ ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಮೇಲೋಟಕ್ಕೆ ಇದು ಆತ್ಮಹತ್ಯೆ ಅಂತ ಹೇಳಲಾಗುತ್ತಿದ್ದು, ಪಶ್ಚಿಮ ಠಾಣೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Follow Us:
Download App:
  • android
  • ios