Asianet Suvarna News Asianet Suvarna News

ಹೊಸ ವರ್ಷದ ಗಿಫ್ಟ್ ಜೊತೆ ಗೆಳತಿ ಗೆಳತಿ ಭೇಟಿಯಾಗಲು ಬಂದವನ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ!

ಹೊಸ ವರ್ಷಕ್ಕೆ ಗರ್ಲ್‌ಫ್ರೆಂಡ್‌ಗೆ ಗಿಫ್ಟ್ ಕೊಡಿಸುವುದು, ಪಾರ್ಟಿ, ಸುತ್ತಾಟ ಸಾಮಾನ್ಯ. ಹೀಗೆ ತನ್ನ ಗೆಳೆತಿಗೆ ಹೊಸ ವರ್ಷದ ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿ ಪಡಿಸಲು ಬಂದವನಿಗೆ ಶಾಕ್ ಎದುರಾಗಿದೆ. ಗ್ರಾಮಸ್ಥರು ಈತನ ಕಂಬಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಥಳಿಸಿದ್ದಾರೆ.

Uttar Pradesh man assault by mob after tying him to pole as he came to meet Girlfriend on New year 2023 ckm
Author
First Published Jan 4, 2023, 6:13 PM IST

ಬಲರಾಂಪುರ(ಜ.04) ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ತಮ್ಮ ತಮ್ಮ ಇತಿ ಮಿತಿಗಳಲ್ಲಿ ಬಹುತೇಕರು ನ್ಯೂ ಇಯರ್ ಬರ ಮಾಡಿಕೊಂಡಿದ್ದಾರೆ. ಹೀಗೆ ಹೊಸ ವರ್ಷದಲ್ಲಿ ತನ್ನ ಗೆಳತಿಗೆ ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿ ಪಡಿಸಲು ಬಂದವನಿಗೆ ಗ್ರಾಮಸ್ಥರು ಶಾಕ್ ನೀಡಿದ್ದಾರೆ. ಆತನ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶ ಬಲಾಂಪುರದ ಭಾರ್ಗವ ವಲಯದಲ್ಲಿ ನಡೆದಿದೆ. ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 15 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದರಲ್ಲಿ ಓರ್ವನನ್ನು ಬಂಧಿಸಿದ್ದರೆ, ಇನ್ನುಳಿದವರು ನಾಪತ್ತೆಯಾಗಿದ್ದಾರೆ.

ಹೊಸ ವರ್ಷದ ದಿನ ಸೊನು ಗುಪ್ತಾ ತನ್ನ ಗರ್ಲ್‌ಫ್ರೆಂಡ್ ಭೇಟಿಯಾಗಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಪಟ್ಟಣ ಅಲೆದಾಡಿ ಗಿಫ್ಟ್ ಖರೀದಿಸಿದ್ದಾನೆ. ತಾನೇ ಖುದ್ದಾಗಿ ಗಿಫ್ಟ್ ಪ್ಯಾಕ್ ಮಾಡಿ ನೇರವಾಗಿ ಭಾರ್ಘವ ನಗರಕ್ಕೆ ಬಂದಿದ್ದಾನೆ. ಗೆಳತಿಗೆ ಸರ್ಪ್ರೈಸ್ ನೀಡಲು ತಾನು ಆಗಮಿಸುತ್ತಿರುವ ವಿಚಾರ ಗೆಳತಿಗೆ ಹೇಳಿಲ್ಲ. ಗೆಳತಿ ಗ್ರಾಮಕ್ಕೆ ಬಂದ ಸೋನು ಗುಪ್ತಾಗೆ ಸುಲಭವಾಗಿ ಆಕೆಯ ಮನೆ ಸಿಗಲಿಲ್ಲ. ಹೀಗಾಗಿ ಗ್ರಾಮಸ್ಥರಲ್ಲಿ ಕೇಳಿದ್ದಾನೆ.

ಲೈಂಗಿಕ ಕಿರುಕುಳ ಕೇಸಲ್ಲಿ ಕೇರಳ ಮಾಜಿ ಸಿಎಂ, ಬಿಜೆಪಿಯ ಎ.ಪಿ. ಅಬ್ದುಲ್ಲಕುಟ್ಟಿಗೆ ಸಿಬಿಐ ಕ್ಲೀನ್ ಚಿಟ್

ಗಿಫ್ಟ್ ಪ್ಯಾಕ್ ಹಿಡಿದು ವಿಳಾಸ ಕೇಳುತ್ತಾ ಗೆಳತಿ ಮನೆಯ ಕಡೆ ಹೊರಟ ಸೋನು ಗುಪ್ತಾ ಗ್ರಾಮಸ್ಥರ ಅನುಮಾನದ ಬಲೆಯಲ್ಲಿ ಬಿದ್ದಿದ್ದ. ನಮ್ಮ ಗ್ರಾಮದ ಹುಡುಗಿಯ ವಿಳಾಸ ಕೇಳುತ್ತಿದ್ದಾನೆ. ಈತ ನಮ್ಮ ಗ್ರಾಮದವನಲ್ಲ. ಇದರಲ್ಲಿ ಏನೋ ಇದೆ ಎಂದು ಒಂದಷ್ಟು ಗ್ರಾಮಸ್ಥರು ಒಟ್ಟುಕೂಡಿ ನೇರವಾಗಿ ಸೂನು ಗುಪ್ತಾನನ್ನು ಅಡ್ಡಹಾಕಿದ್ದಾರೆ.

ಕಾಲರ್ ಪಟ್ಟಿ ಹಿಡಿದು ಇಲ್ಲೇಕೆ ತಿರುಗಾಡುತ್ತಿದ್ದಿಯಾ? ಎಂದು ಗದರಿಸಿದ್ದಾರೆ.  ನೂಕಾಟ ತಳ್ಳಾಟ, ಒಂದೆರೆಡು ಏಟು ಬಿದ್ದಾಗ ತಾನು ಗೆಳತಿಯನ್ನು ಭೇಟಿಯಾಗಿ ಗಿಫ್ಟ್ ನೀಡಲು ಬಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇಷ್ಟೇ ನೋಡಿ, ಇದರಿಂದ ಗ್ರಾಮದ ಯುವಕರ ಗುಂಪು ಮತ್ತಷ್ಟು ರೊಚ್ಚಿಗೆದ್ದಿದೆ. ಸೋನು ಗುಪ್ತಾನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

ಇತ್ತ ಕೆಲವರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾರೆ. ಗಾಯಗೊಂಡ ಸೋನು ಗುಪ್ತ ಕ್ಷಮೆ ಕೇಳಿ ಭಾರ್ಗವ ನಗರದಿಂ ಕಾಲ್ಕಿತ್ತಿದ್ದಾನೆ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಲಿಕ ಸೋನು ಗುಪ್ತಾನ ಸಂಪರ್ಕಿಸಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ. ಇತ್ತ 15 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓರ್ವನ ಬಂಧಿಸಲಾಗಿದೆ.

 

ಮದುವೆಗೆ ನಿರಾಕರಿಸಿದ ಯುವತಿಯ ಥಳಿಸಿದವನ ಮನೆ ಧ್ವಂಸ

ನಾಪತ್ತೆಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಇದೇ ಗ್ರಾಮದಲ್ಲಿ ಈರೀತಿಯ ಕೆಲ ಹಲ್ಲೆಪ್ರಕರಣಗಳು ವರದಿಯಾಗಿರುವುದು ಬೆಳಕಿಗೆ ಬಂದಿದೆ.  ಇದೀಗ ಪೊಲೀಸರು ಗ್ರಾಮದ ನಿವಾಸಿಗಳ ಮೇಲಿನ ಪ್ರಕರಣದ ಮಾಹಿತಿಯನ್ನು ಕೆದಕಿ ಒಬ್ಬೊಬ್ಬರನ್ನೇ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. 

ಉತ್ತರ ಪ್ರದೇಶದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಕೆಲ ಹಲ್ಲೆ ಘಟನೆಗಳು ನಡೆದಿದೆ. ಕುಡಿದು ಗೆಳೆಯರ ನಡುವೆ ಕಿತ್ತಾಟ ಹಾಗೂ ಹಲ್ಲೆ ಘಟನೆಗಳು ವರದಿಯಾಗಿದೆ. ಹೊಸ ವರ್ಷದ ರಾತ್ರಿ ಕಳ್ಳತನ, ದರೋಡೆ, ಹಲ್ಲೆ ಪ್ರಕರಣಗಳು ದಾಖಲಾಗಿದೆ. 

Follow Us:
Download App:
  • android
  • ios