Asianet Suvarna News Asianet Suvarna News

ಆಸ್ತಿ ಕಲಹ: ತಂದೆಯನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ಗೆ ತುಂಬಿ ಎಸೆದ ಮಗ

ಮಗನೋರ್ವ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. 30 ವರ್ಷದ ಮಗ ತನ್ನ 62 ವರ್ಷದ ಅಪ್ಪನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

Uttar Pradesh father beaten to death by son with hammer and chopped body into pieces and put it in suitcase akb
Author
First Published Mar 13, 2023, 2:28 PM IST | Last Updated Mar 13, 2023, 2:28 PM IST

ಗೋರಖ್‌ಪುರ: ಮಗನೋರ್ವ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. 30 ವರ್ಷದ ಮಗ ತನ್ನ 62 ವರ್ಷದ ಅಪ್ಪನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಪ್ಪ ಮಗನ ಮಧ್ಯೆ ವಾದ ವಿವಾದವೇರ್ಪಟ್ಟಿದೆ. ಈ ಮಾತಿನ ಕಲಹವೇ ವಿಕೋಪಕ್ಕೆ ತಿರುಗಿದ್ದು, ಕುಪಿತಗೊಂಡ ಮಗ ಅಪ್ಪನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. 

ಕೊಲೆ ಮಾಡಿದ ನಂತರ ತನ್ನ ತಂದೆಯ ದೇಹವನ್ನು ಕೋಳಿ ಮಾಂಸ ಕತ್ತರಿಸಿದಂತೆ ತುಂಡು ತುಂಡುಗಳಾಗಿ ಮಾಡಿ ಅದನ್ನು ಸೂಟ್‌ಕೇಸ್‌ನಲ್ಲಿ ತುಂಬಿ ದೂರ ಎಸೆದಿದ್ದಾನೆ. ತಿವಾರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೂರಜ್‌ ಕುಂಡ್ ಕಾಲೋನಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. 

ಚರಂಡಿಯಲ್ಲಿ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವಪತ್ತೆ

ಭಾನುವಾರ ಆರೋಪಿಯ ಸಹೋದರ ಪ್ರಶಾಂತ್ ಗುಪ್ತಾ (Prashant Gupta) ಎಂಬುವವರು ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಮುರಳಿ ಧಾರ್ ಗುಪ್ತಾ (Murli Dhar Gupta) ಎಂದು ಗುರುತಿಸಲಾಗಿದೆ. ಹಾಗೆಯೇ ಕೊಲೆ ಮಾಡಿದ ಆರೋಪಿಯನ್ನು ಸಂತೋಷ್ ಕುಮಾರ್ ಆಲಿಯಾಸ್ ಪ್ರಿನ್ಸ್ ( Santosh Kumar Gupta alias Prince) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ನಗರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕೃಷ್ಣ ಕುಮಾರ್ ಬಿಷ್ನೋಯಿ  ಹೇಳಿದ್ದಾರೆ. 

ಕುಟುಂಬದೊಳಗಿನ ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ವಿವಾದವೇರ್ಪಟ್ಟು ಈ ಘಟನೆ ನಡೆದಿದೆ. ಮನೆಯಲ್ಲಿ ಒಬ್ಬನೇ ಇರುವುದನ್ನು ಗಮನಿಸಿದ ಆರೋಪಿ ಸುತ್ತಿಗೆ ಹಿಡಿದುಕೊಂಡು ಬಂದು ತಂದೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಸಹೋದರನ ರೂಮ್‌ನಲ್ಲಿದ್ದ ಸೂಟ್‌ಕೇಸ್‌ (suitcase) ತೆಗೆದುಕೊಂಡು ಬಂದು ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ ಅದನ್ನು ಮನೆ ಹಿಂದಿನ ಕಾಲೋನಿಯಲ್ಲಿ ಅಡಗಿಸಿಟ್ಟಿದ್ದಾನೆ. ಆರೋಪಿಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. 

21 ವರ್ಷದ ಮಗಳನ್ನು ಕೊಂದು, ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ತಂದೆ!

Latest Videos
Follow Us:
Download App:
  • android
  • ios