Asianet Suvarna News Asianet Suvarna News

Sex Racket ನಡೆಸುತ್ತಿದ್ದ ಮಹಿಳಾ ಕಾಲೇಜಿನ ಪ್ರೊಫೆಸರ್, ವಿದ್ಯಾರ್ಥಿನಿ ಬಾಯ್ಬಿಟ್ಟಿದ್ದೇ ಪರಾರಿ!

* ಶಿಕ್ಷಣ ಕೊಡಬೇಕಾದ ಪ್ರಾಧ್ಯಾಪಕನಿಂದ ಇದೆಂತಹಾ ನೀಚ ಕೃತ್ಯ

* ವಿದ್ಯಾರ್ಥಿಗಳನ್ನೇ ಸೆಕ್ಸ್ Racketಗೆ ಬಳಸಿಕೊಂಡಿದ್ದ ಗುರು

* ಬಣ್ಣ ಬಯಲಾಗುತ್ತಿದ್ದಂತೆಯೇ ಪರಾರಿಯಾದ ಪ್ರೊಫೆಸರ್

Uttar Pradesh College Professor Running Sex Racket Blackmailing His students pod
Author
Bangalore, First Published Nov 23, 2021, 12:59 AM IST
  • Facebook
  • Twitter
  • Whatsapp

ಲಕ್ನೋ(ನ.23): ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನ ಮಹಿಳಾ ಕಾಲೇಜಿನಲ್ಲಿ (Women's College) ಗಣಿತ ಬೋಧನೆ ಮಾಡುವ ಪ್ರಾಧ್ಯಾಪಕರೊಬ್ಬರು ಸೆಕ್ಸ್ ರಾಕೆಟ್ (Sex Racket) ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಧ್ಯಾಪಕರ ಕೃತ್ಯದ ಬಗ್ಗೆ ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ರಹಸ್ಯ ಬಯಲಾದ ನಂತರ ಪ್ರಾಧ್ಯಾಪಕ ಪರಾರಿಯಾಗಿದ್ದಾರೆ.

ಆರೋಪಿ ಪ್ರೊಫೆಸರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪಾಠ ಹೇಳಿ ಕೊಡುತ್ತದ್ದ. ಕಮ್ರಾನ್ ಆಲಂ ಖಾನ್ (Kamran Alam Khan) ಎಂಬ ಪ್ರೊಫೆಸರ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸಿ ಅವರ ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ವಿದ್ಯಾರ್ಥಿನಿಯರಿಗೆ ನಶೆ ಪದಾರ್ಥ ತಿನ್ನಿಸಿ ಅವರ ಜತೆ ಅಕ್ರಮ ಸಂಬಂಧ ಬೆಳೆಸುತ್ತಿದ್ದ. ಇದಾದ ಬಳಿಕ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಿ ಹೊರಗೆ ಕಳುಹಿಸುತ್ತಿದ್ದ. ಈ ಕೆಲಸದಲ್ಲಿ ಪ್ರಾಧ್ಯಾಪಕರಲ್ಲದೆ, ಕಾಲೇಜು ಸಿಬ್ಬಂದಿ (Collrrge Staffs) ಹಾಗೂ ಇತರ ವಿದ್ಯಾರ್ಥಿಗಳೂ ಶಾಮೀಲಾಗಿದ್ದಾರೆ ಎಂದು ವಿಷಯ ಬಹಿರಂಗಪಡಿಸಿ ವಿದ್ಯಾರ್ಥಿನಿ, ಈ ವಿಚಾರವನ್ನು ತಮ್ಮ ದೂರಿನಲ್ಲೂ ಉಲ್ಲೇಖಿಸಿದ್ದಾರೆ. ಅಶ್ಲೀಲ ಪುಸ್ತಕಗಳು ಮತ್ತು ಲೈಂಗಿಕ ಆಟಿಕೆಗಳನ್ನು ನೀಡುವ ಮೂಲಕ ಪ್ರಾಧ್ಯಾಪಕರು ವಿದ್ಯಾರ್ಥಿನಿಯರಿಗೆ ಅಸಭ್ಯವಾಗಿ ವರ್ತಿಸುವಂತೆ ಒತ್ತಾಯಿಸುತ್ತಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ

ನ.20ರಂದು ಯುವಕನೊಬ್ಬ ಕಾಲೇಜು ಆಡಳಿತ ಮಂಡಳಿಗೆ ಕರೆ ಮಾಡಿ ಪ್ರೊಫೆಸರ್ ನಡೆಸುತ್ತಿರುವ ಸೆಕ್ಸ್ ರಾಕೆಟ್ ಬಗ್ಗೆ ಮಾಹಿತಿ ನೀಡಿದ್ದ. ಇದಾದ ಬಳಿಕವೂ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ದೃಢವಾದ ಕ್ರಮಕೈಗೊಂಡಿಲ್ಲ. ನ.21ರಂದು ವಿದ್ಯಾರ್ಥಿನಿಯೊಬ್ಬರು ಎಸ್ಪಿ ಅವರನ್ನು ಭೇಟಿಯಾಗಿ ಲಿಖಿತ ಅರ್ಜಿ ನೀಡಿ ವಿಷಯ ಬಹಿರಂಗಪಡಿಸಿದ್ದರು. ಎಸ್ಪಿ ಸೂಚನೆ ಮೇರೆಗೆ ಕೊತ್ವಾಲಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸೋಮವಾರ ಕಾಲೇಜಿಗೆ ಆಗಮಿಸಿದ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಆರೋಪಿ ಪ್ರೊಫೆಸರ್ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ. ಪಿಲಿಭಿತ್ ಸಿಒ ಸಿಟಿ ಸುನಿಲ್ ದತ್ ಅವರು ವಿದ್ಯಾರ್ಥಿಯು ಪೊಲೀಸ್ ವರಿಷ್ಠಾಧಿಕಾರಿಯ ಮುಂದೆ ಹಾಜರಾಗಿ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ. ವಿಷಯ ತನಿಖೆಯಲ್ಲಿದೆ.

ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!

ಲೈವ್ ಸ್ಟ್ರೀಮಿಂಗ್ ನಲ್ಲಿ(Live) ಲೈಂಗಿಕ ಕ್ರಿಯೆನ್ನು ತೋರಿಸಿದ  ಜೋಡಿಗೆ ಕಾನೂನು ಸಂಕಷ್ಟ ಎದುರಾಗಿದೆ. ಮುಂಬೈನ (Mumbai)ಮೀರಾ ರೋಡ್ ಪ್ರದೇಶದ ದಂಪತಿ (Couple) ಆಪ್ ಒಂದನ್ನು ಮಾಡಿಕೊಂಡು ಹಣ ಪಾವತಿಸಿದ ಚಂದಾದಾರರ ಮುಂದೆ  ಬೆತ್ತಲೆಯಾಗಿ ಎಲ್ಲವನ್ನು ತೋರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಲೈವ್ ಸೆಕ್ಸ್ ರಾಕೆಟ್ ನ (Sex Racket) ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದರು. ಅದಾದ ಮೇಲೆ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರತೊಡಗಿದವು.   ಹೆಸರಾಂತ ಗಾಯಕ ಅಶ್ಲೀಲ  ಜಾಹೀರಾತೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ತಕ್ಷಣ ದೂರು ನೀಡಿದ್ದರು. ಇದನ್ನು ಬೆನ್ನು ಬಿದ್ದ ಪೊಲೀಸರಿಗೆ ದೊಡ್ಡ ಜಾಲ ಸಿಕ್ಕಿದೆ.

ಬೆತ್ತಲೆ ಸೀನ್ ಏಳು ಸಾರಿ ಶೂಟ್ ಮಾಡಿದ್ದರಂತೆ!

ಏನಿದು ಜಾಲ: ಜೋಡಿಗಳು ಆನ್ ಲೈನ್ ಆಪ್ ಗಳ ಜತೆ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳುತ್ತಾರೆ. ಲೈವ್ ಆಗಿ ಲೈಂಗಿಕ ಕ್ರಿಯೆ  ತೋರಿಸಲಾಗುತ್ತದೆ ಎಂಬುದು ಇಲ್ಲಿನ ಪ್ರಮುಖ ಅಂಶ. ಯುವತಿಯರು ಸಹ  ಇಂಥ ಒಪ್ಪಂದಗಳಿಗೆ ಸಹಿ ಮಾಡಿ ಲೈವ್ ನಲ್ಲಿ ಹಸ್ತಮೈಥುನ ಮಾಡಿಕೊಂಡ  ಪ್ರಕರಣಗಳು ಇವೆ. ವೀಕ್ಷಕರಿಂದ ತಿಂಗಳ ಲೆಕ್ಕದಲ್ಲಿ ಚಂದಾ ವಸೂಲಿ ಮಾಡಲಾಗುತ್ತದೆ.

ಒಬ್ಬ ಸೆಲೆಬ್ರಿಟಿ ಸಹ  ಆನ್ ಲೈನ್ ಸಂಸ್ಥೆ ಒಂದರ ಜತೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದ್ದರು.   ಹಣ ಪಾವತಿಸುವ ಚಂದಾದಾರರಿಗೆ ಲೈವ್  ಆಗಿ ಲೈಂಗಿಕ ಚಟುವಟಿಕೆಯನ್ನು ಸ್ಟ್ರೀಮ್ ಮಾಡಿ ತೋರಿಸಿದ ಆರೋಪ ಬಂದಿತ್ತು.  ಮುಂಬೈ ಹೊರವಲಯದ ಅಪಾರ್ಟ್ ಮೆಂಟ್ ಗಳಲ್ಲಿ ಈ ರೀತಿಯ ಚಟುವಟಿಕೆ  ನಿರಂತರವಾಗಿ ನಡೆಯುತ್ತಿದೆ ಎಂಬ ದೂರುಗಳು ನಿರಂತರವಾಗಿ ದಾಖಲಾದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

Follow Us:
Download App:
  • android
  • ios