ಅಯೋಧ್ಯೆಯ ರಾಮ್ ಕಿ ಪೈಡಿಯಲ್ಲಿ (ಕಲ್ಯಾಣಿ) ಸ್ನಾನ ಮಾಡುವಾಗ ಪತಿ ಪತ್ನಿಗೆ ಮುತ್ತಿಟ್ಟಿದ್ದಾನೆ. ಇದಾದ ನಂತರ ಯುವಕರ ಗುಂಪೊಂದು ಬಂದು ಆಕೆಯ ಪತಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಮಾಡಿ ಥಳಿಸಲು ಆರಂಭಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರಪ್ರದೇಶ (ಜೂ. 22): ರಾಮನಗರಿ ಅಯೋಧ್ಯೆಯ ಸರಯೂ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ (ಕಲ್ಯಾಣಿ) ಸದಾ ಜನಜಂಗುಳಿ ಇರುತ್ತದೆ. ರಾಮ್ ಕಿ ಪೈಡಿಯಲ್ಲಿ (Ram Ki Paidi ) ನೀರಿನ ಕಡಿಮೆ ಹರಿವು ಹಾಗೂ ಬೇಸಿಗೆಯ ದಿನಗಳಲ್ಲಿ ಸ್ನಾನಕ್ಕೆ ಅನುಕೂಲವಾಗಿರುವುರಿಂದ ಇಲ್ಲಿ ಸಾಕಷ್ಟು ಪ್ರವಾಸಿಗರು (Tourist) ಬರುತ್ತಾರೆ. ಹೀಗಾಗಿ ಪ್ರವಾಸಿಗರು ಸೇರಿದಂತೆ ಸಾಮಾನ್ಯ ಅಯೋಧ್ಯೆ ನಿವಾಸಿಗಳು ಈ ಕಲ್ಯಾಣಿಯಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು.
ಆದರೆ ಈಗ ಇದೇ ರಾಮ್ ಕಿ ಪೈಡಿಯ ವಿಡಿಯೋವೊಂದು ವೈರಲ್ (Viral Video) ಆಗುತ್ತಿದ್ದು, ಇದರಲ್ಲಿ ರಾಮ್ ಕಿ ಪೈಡಿಯಲ್ಲಿ ನವ ದಂಪತಿಗಳು ಜನರ ನಡುವೆ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಪತಿ-ಪತ್ನಿ ಪರಸ್ಪರ ಮುತ್ತಿಟ್ಟಿದ್ದಾರೆ. ಆದರೆ ಮುತ್ತು ಕೊಡುವಾಗ ಪತಿ ತನ್ನ ಮುತ್ತಿಗೆ ಇಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೆಂಡತಿ ಅಂದುಕೊಂಡಿರಲಿಲ್ಲ.
ವೈರಲ್ ಆದ ವಿಡಿಯೋದಲ್ಲಿಯೇ ಕಲ್ಯಾಣಿಯಲ್ಲಿ ಸ್ನಾನ ಮಾಡುತ್ತಿರುವ ಯುವಕರ ಗುಂಪೊಂದು ಪತ್ನಿಗೆ ಮುತ್ತಿಟ್ಟ ಗಂಡನ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪತಿಗೆ ಥಳಿಸಲು ಮುಂದಾಗಿದ್ದಾರೆ. ಮೊದಲಿಗೆ ಹೆಂಡತಿ ತನ್ನ ಗಂಡನನ್ನು ಉಳಿಸಲು ಪ್ರಯತ್ನಿಸಿದ್ದಾಳೆ ಆದರೆ ಯುವಕರ ಗುಂಪನ್ನು ನೋಡಿ ಹೆದರಿದ್ದಾಳೆ.
ಬಳಿಕ ಆಕೆಯ ಪತಿಯನ್ನು ಯುವಕರು ಥಳಿಸಲು ಪ್ರಾರಂಭಿಸಿದ್ದಾರೆ. ಯುವಕರು ಒಬ್ಬರ ನಂತರ ಒಬ್ಬರು ಹೊಡೆಯಲು ಪ್ರಾರಂಭಿಸಿದ್ದು, ಕೆಲವೇ ಸೆಕೆಂಡುಗಳಲ್ಲಿ ಸುತ್ತಮುತ್ತರಿದ್ದವರೆಲ್ಲರೂ ಕೈ ಜೋಡಿಸಿದ್ದಾರೆ. ರಾಮ್ ಕಿ ಪೈಡಿಯನ್ನು ವಾಟರ್ ಪಾರ್ಕ್ ಎಂದು ಭಾವಿಸಿದ್ದು ನವ ದಂಪತಿಗಳಿಗೆ ಸಂಕಷ್ಟ ತಂದೊಡ್ಡಿದೆ. ದಂಪತಿಗಳು ಬಹುಶಃ ಜೀವನದಲ್ಲಿ ಈ ಘಟನೆಯನ್ನು ಎಂದಿಗೂ ಮರೆಯುವುದಿಲ್ಲ.
ಇದನ್ನೂ ಓದಿ:ವಿದ್ಯಾರ್ಥಿನಿಯರ ಮುಂದೆ ಪ್ಯಾಂಟ್ ಬಿಚ್ಚಿದ, ತುಮಕೂರು ಜನರಿಂದ ಗೂಸಾ
ಇನ್ನು ಈ ಬಗ್ಗೆ ಮಾತನಾಡಿರುವ ಎಸ್‌ಎಸ್‌ಪಿ ಅಯೋಧ್ಯೆ ಶೈಲೇಶ್ ಪಾಂಡೆ ಕ್ಯಾಮೆರಾ ಮುಂದೆ ಯಾವುದೇ ಮಾಹಿತಿ ನೀಡಿಲ್ಲ ಆದರೆ ಈ ವೀಡಿಯೊ ಒಂದು ವಾರ ಹಳೆಯದು ಎಂದು ತಿಳಿಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ನವವಿವಾಹಿತರು ವಾಸವಾಗಿರುವ ಸ್ಥಳವನ್ನು ಮಾತನಾಡಿಸಿ ದೂರುಗಳಿದ್ದಲ್ಲಿ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
