ಮಧುಮೇಹಿ ಮಗಳಿಗೆ ಮೌಂಟೇನ್ ಡ್ಯೂ ನೀಡಿದ ತಾಯಿ, ಮಗಳನ್ನು ಕೊಂದ ಮಹಿಳೆಗೆ ನಾಲ್ಕು ವರ್ಷ ಜೈಲು!
ಅಮೇರಿಕಾದಲ್ಲಿ ಮಹಿಳೆಯೊಬ್ಬಳು ತನ್ನ ಮಧುಮೇಹಿ ಮಗಳಿಗೆ ಮೌಂಟೇನ್ ಡ್ಯೂ ಒಳಗೊಂಡಿರುವ ಆಹಾರ ನೀಡಿರುವ ಘಟನೆ ನಡೆದಿದೆ. ಮಹಿಳೆ ವಿರುದ್ಧ ನರಹತ್ಯೆಗಾಗಿ ಪ್ರಕರಣ ದಾಖಲಾಗಿದ್ದು, ಕನಿಷ್ಠ ಒಂಬತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಅಮೇರಿಕಾದಲ್ಲಿ ಮಹಿಳೆಯೊಬ್ಬಳು ತನ್ನ ಮಧುಮೇಹಿ ಮಗಳಿಗೆ ಮೌಂಟೇನ್ ಡ್ಯೂ ಒಳಗೊಂಡಿರುವ ಆಹಾರ ನೀಡಿರುವ ಘಟನೆ ನಡೆದಿದೆ. ಮಹಿಳೆ ವಿರುದ್ಧ ನರಹತ್ಯೆಗಾಗಿ ಕನಿಷ್ಠ ಒಂಬತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮಹಿಳೆಯ 4 ವರ್ಷದ ಮಗಳು ಕಾರ್ಮಿಟಿ ಹೋಬ್ ಮಧುಮೇಹ ಮತ್ತು ತೀವ್ರವಾದ ಹಲ್ಲಿನ ಕೊಳೆತಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಜನವರಿ 2022ರಲ್ಲಿ ನಿಧನರಾದರು. ಅಪೌಷ್ಟಿಕತೆ ಮತ್ತು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವಕೀಲರು ವಾದಿಸಿದ್ದಾರೆ.
ಮಹಿಳೆ ಆಗಾಗ ಹುಡುಗಿಗೆ ಬೇಬಿ ಫಾರ್ಮುಲಾ ಬಾಟಲಿಗಳನ್ನು ಮೌಂಟೇನ್ ಡ್ಯೂ ಸೋಡಾದೊಂದಿಗೆ ನೀಡುತ್ತಿದ್ದರು. ಸಾವಿನ ಸಮಯದಲ್ಲಿ ಬಾಲಕಿಯ ಹಲವು ಹಲ್ಲುಗಳು ಕೊಳೆತು ಹೋಗಿದ್ದವು ಎಂದು ನ್ಯಾಯಾಲಯವು ಕೇಳಿದೆ.
ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ 10 ನಿಮಿಷದಲ್ಲಿ ದೇಹಕ್ಕೆ ಸೇರುತ್ತಂತೆ ವಿಷ!
ಮೌಂಟೇನ್ ಡ್ಯೂ ಗಮನಾರ್ಹವಾಗಿ 77 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಬಾಲಕಿಯ ತಂದೆ 53 ವರ್ಷದ ಕ್ರಿಸ್ಟೋಫರ್ ಹೋಯೆಬ್, ಮಗಳ ನರಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತ ಜೂನ್ 11ರಂದು ಶಿಕ್ಷೆಗೆ ಗುರಿಯಾಗಲಿದ್ದಾನೆ ಎಂದು ತಿಳಿದುಬಂದಿದೆ. 'ಇದು ನಾನು ಎದುರಿಸಿದ ಅತ್ಯಂತ ದುರಂತ ಪ್ರಕರಣಗಳಲ್ಲಿ ಒಂದಾಗಿದೆ. ಈ ಮಗುವನ್ನು ಸಹಜವಾಗಿ ಸತ್ತಿಲ್ಲ, ಮಗುವನ್ನು ಸಾಯಿಸಲಾಗಿದೆ' ಎಂದು ಕ್ಲೆರ್ಮಾಂಟ್ ಕೌಂಟಿ ಸಹಾಯಕ ಪ್ರಾಸಿಕ್ಯೂಟಿಂಗ್ ಅಟಾರ್ನಿ ಕ್ಲೇ ಥಾರ್ಪ್ ಹೇಳಿದರು.
ಜನವರಿ 2022ರಲ್ಲಿ ಬಾಲಕಿ ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿತ್ತು. ದಿನಗಳು ಕಳೆದಂತೆ ರೋಗ ಲಕ್ಷಣಗಳು ಉಲ್ಭಣಗೊಂಡವು. ಆಕೆಯ ತಾಯಿ ಮಗಳು ಉಸಿರಾಡುವುದನ್ನು ನಿಲ್ಲಿಸಿದ ನಂತರ ಆಸ್ಪತ್ರೆಗೆ ಕರೆ ಮಾಡಿದರು. ವೈದ್ಯರು ಸ್ಕ್ಯಾನ್ ನಡೆಸಿದ ನಂತರ ಆಕೆಯ ಮೆದುಳು ಸತ್ತಿದೆ ಎಂಬುದು ದೃಢಪಟ್ಟಿತು.
ಆಲ್ಕೋಹಾಲ್ ಜೊತೆ ಸೋಡಾ, ಕೋಲ್ಡ್ ಡ್ರಿಂಕ್ಸ್ ಮಿಕ್ಸ್ ಮಾಡ್ತೀರಾ? ತಪ್ಪು ತಪ್ಪು
ಬಾಲಕಿಗೆ ನಿರಂತರವಾಗಿ ಮೌಂಟೇನ್ ಡ್ಯೂ ನೀಡುತ್ತಿದ್ದ ಕಾರಣ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಾ ಹೋಯಿತು. ಹಲ್ಲುಗಳ ಸಮಸ್ಯೆ ಸಹ ಕಾಣಿಸಿಕೊಂಡಿತು. ಆಕೆಯನ್ನು ಯಾವತ್ತೂ ದಂತವೈದ್ಯರ ಬಳಿ ಕರೆದೊಯ್ಯಲ್ಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ನಿಯಮಿತವಾಗಿ ಆಕೆಯ ಪ್ರಿಸ್ಕ್ರಿಪ್ಷನ್‌ಗಳನ್ನು ಪುನಃ ತುಂಬಿಸುತ್ತಿದ್ದರು. ಆಕೆಯ ವೈದ್ಯಕೀಯ ಅಗತ್ಯಗಳನ್ನು ಪೂರೈಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವೈದ್ಯರು ಆಕೆಯ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದರು. ಆದರೂ ಮೆಡಿಸಿನ್‌ನಲ್ಲಿ ಲೋಪವಾಗಿರುವುದು ತಿಳಿದುಬಂದಿಲ್ಲ.