ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಹುಡುಗಿಯರಿಬ್ಬರು ಅಶ್ಲೀಲ ಹಾಗೂ ನಿಂದನಾತ್ಮಕ ರೀಲ್ಸ್ ಹಂಚಿಕೊಂಡಿದ್ದು, ಈ ವೀಡಿಯೋ ಭಾರಿ ವೈರಲ್ ಆದ ನಂತರ ನೋಡುಗರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ಹುಡುಗಿಯರ ವಿರುದ್ಧ ಕೇಸ್ ದಾಖಲಾಗಿದೆ.

ಲಕ್ನೋ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿ ಲೈಕ್ ಕಾಮೆಂಟ್ ಗಿಟ್ಟಿಸುವುದಕ್ಕಾಗಿ ಕೆಲವರು ಮಾಡಬಾರದ್ದನ್ನು ಮಾಡುತ್ತಿದ್ದಾರೆ. ಕೆಟ್ಟದ್ದೋ ಒಳ್ಳೆಯದೋ ಒಟ್ಟಿನಲ್ಲಿ ಫೇಮಸ್ ಆಗ್ಬೇಕು ಅಷ್ಟೇ. ಈ ರೀತಿಯ ಮನಸ್ಥಿತಿಯಿಂದಾಗಿ ಕೆಲವರು ಎಂತಹಾ ಕೆಳಮಟ್ಟಕ್ಕೂ ಇಳಿಯುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದಕ್ಕೆ ಹೋಗಿ ಹುಡುಗಿಯರಿಬ್ಬರು ಅಸಭ್ಯವಾದ ರೀಲ್ಸ್‌ನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಈಗ ಕೇಸ್ ದಾಖಲಿಸಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶ ಸಂಭಾಲ್‌ನಲ್ಲೊ ಮೆಹಕ್ ಪರಿ (Mehak Pari) ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಅಶ್ಲೀಲ ಹಾಗೂ ನಿಂದನಾತ್ಮಕ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಇಬ್ಬರು ಹುಡುಗಿಯರಿದ್ದಾರೆ. ಈ ಇಬ್ಬರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಸಂಭಾಲ್ ಜಿಲ್ಲೆಯ ಶಹ್ಬಾಝ್‌ಪುರ ಗ್ರಾಮದವರಾಗಿದ್ದಾರೆ. ಕೆಟ್ಟ ಭಾಷೆಯೊಂದಿಗೆ ಅಶ್ಲೀಲ ವೀಡಿಯೋವನ್ನು ಇವರು ಪೋಸ್ಟ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Scroll to load tweet…

ಕೊಳಕು ಭಾಷೆಯ ಜೊತೆ ವೈರಲ್ ಅದ ಇವರ ಅಸಹ್ಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡ ಜನ ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಈ ಇಬ್ಬರು ಪೋಲಿ ಹುಡುಗಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಭಾಲ್‌ ಪೊಲೀಸರು ಕೂಡ ಈ ವಿಚಾರವನ್ನು ಖಚಿತಪಡಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಸ್ಮೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದ್ದರೂ ಈ ಇಬ್ಬರು ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಈ ಅಶ್ಲೀಲ ವೀಡಿಯೋ ಮತ್ತೆ ವೈರಲ್ ಆಗ್ತಿದೆ. ಮೆಹಕ್ ಪರಿ @mehakrpari143 ಎಂಬ ಇನ್ಸ್ಟಾ ಖಾತೆಯನ್ನು ಹೊಂದಿದ್ದಾಳೆ.