Asianet Suvarna News Asianet Suvarna News

ಹಿಂದುಗಳ ವೇಷದಲ್ಲಿ ಬಂದು ಸಾಮರಸ್ಯ ಕದಡುವ ಪ್ರಯತ್ನ ಮಾಡಿದ ಮುಸ್ಲಿಮರ ಬಂಧನ!

"ಈ ಸಂಪೂರ್ಣ ವಿಷಯವು ಕನ್ವರ್ ಯಾತ್ರೆಯ ನಡುವೆ ವಾತಾವರಣವನ್ನು ಹಾಳುಮಾಡುವ ಪ್ರಯತ್ನಗಳನ್ನು ತಿಳಿಸುತ್ತದೆ.  ಹೆಚ್ಚು ಜಾಗರೂಕರಾಗಿರಲು ಕ್ಷೇತ್ರ ಅಧಿಕಾರಿಗಳಿಗೆ ಸೂಚಿಸಲಾಗಿದೆ; ನಿರಂತರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಕೂಡ ನಡೆಯುತ್ತಿದೆ" ಎಂದು ಎಡಿಜಿ ಕುಮಾರ್ ಹೇಳಿದ್ದಾರೆ.

UP police thwart conspiracy by Kamal and Adil to blame Hindus for the desecration of Mazar in Bijnor san
Author
Bengaluru, First Published Jul 25, 2022, 4:09 PM IST | Last Updated Jul 25, 2022, 4:09 PM IST

ಬಿಜ್ನೂರ್ (ಜುಲೈ 25): ಭಾನುವಾರ (ಜುಲೈ 24), ಉತ್ತರ ಪ್ರದೇಶದ ಬಿಜ್ನೋರ್ ನಗರದಲ್ಲಿ ಹಿಂದೂಗಳಂತೆ ವೇಷಭೂಷಣ ಧರಿಸಿಕೊಂಡು,  ಮಜರ್ ಅನ್ನು ಅಪವಿತ್ರಗೊಳಿಸಿದ ಇಬ್ಬರು ಮುಸ್ಲಿಂ ದುಷ್ಕರ್ಮಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಆರೋಪಿಗಳನ್ನು ಕಮಲ್ ಮತ್ತು ಆದಿಲ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಕೇಸರಿ ಬಣ್ಣದ ಬಟ್ಟೆಯನ್ನು ತಲೆಗೆ ಕಟ್ಟಿಕೊಂಡು ಜಲಾಲ್ ಷಾ ಮಜಾರ್ ಅನ್ನು ದೋಚುವ ಹಾಗೂ ಅದನ್ನು ಹಾಳುಗೆಡವುವ ಪ್ರಯತ್ನ ಮಾಡಿದ್ದಾರೆ. ಅದಲ್ಲದೆ, ಮಜರ್‌ನಲ್ಲಿದ್ದ ಹಲವಾರು ‘ಚಾದರ್’ಗಳಿಗೂ ಬೆಂಕಿ ಹಚ್ಚಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿದ್ದಾರೆ. ಶೆರ್ಕೋಟ್ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ  (ಜುಲೈ 24 ರಂದು) ಒಂದು ದೊಡ್ಡ ಕೋಮ ಸಾಮರಸ್ಯ ಕದಡುವ ಪಿತೂರಿಯನ್ನು ತಡೆಯಲಾಯಿತು. ಇಬ್ಬರು ವ್ಯಕ್ತಿಗಳು ಜಲಾಲ್ ಷಾ ಮಜಾರ್ ಅನ್ನು ದರೋಡೆ ಮಾಡಿದ ಮತ್ತು ಹಲವಾರು 'ಚಾದರ್'ಗಳನ್ನು ಸುಟ್ಟುಹಾಕಿದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಧಾರ್ಮಿಕ ಗ್ರಂಥಗಳಿಗೆ ಯಾವುದೇ ಹಾನಿ ಮಾಡಿಲ್ಲ ಎಂದು ಹೇಳಿದ್ದಾರೆ. ಕುಮಾರ್ ಪ್ರಕಾರ, ಇಬ್ಬರು ಆರೋಪಿಗಳು ಸಂಬಂಧದಿಂದ ಸಹೋದರರಾಗಿದ್ದು, ಈ ಹಿಂದೆ ಶೆರ್ಕೋಟ್‌ನಲ್ಲಿರುವ ಕುತುಬ್ ಷಾ ಮಜಾರ್ ಅನ್ನು ಅಪವಿತ್ರಗೊಳಿಸಿದ್ದರು. ಅವರ ಬಂಧನದೊಂದಿಗೆ, ಪೊಲೀಸರು ಹಿಂದೂ ಸಮುದಾಯದ ಮಾನಹಾನಿ ಮಾಡುವ ಇವರಿಬ್ಬರ ಕ್ರಿಮಿನಲ್ ಸಂಚನ್ನು ವಿಫಲಗೊಳಿಸಿದ್ದಾರೆ.

"ಈ ಸಂಪೂರ್ಣ ವಿಷಯವು ಕನ್ವರ್ ಯಾತ್ರೆಯ ನಡುವೆ ವಾತಾವರಣವನ್ನು ಕೆಡಿಸುವ ಪ್ರಯತ್ನಗಳನ್ನು ತೋರಿಸುತ್ತದೆ. ಈ ವಲಯದ ಅಧಿಕಾರಿಗಳಿಗೆ ಹೆಚ್ಚು ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ. ನಿರಂತರವಾಗಿ ಸಾಮಾಜಿಕ ಮಾಧ್ಯಮದ ಮೇಲ್ವಿಚಾರಣೆಯೂ ನಡೆಯುತ್ತಿದೆ ಎಂದು ಎಡಿಜಿ ಕುಮಾರ್ ತಿಳಿಸಿದ್ದಾರೆ.

ಹಿಂದೂಗಳ ರೀತಿಯಲ್ಲಿ ಬಟ್ಟೆ ಧರಿಸಿ, ಕೇಸರಿ ಶಾಲು ಹಾಕಿಕೊಂಡಿದ್ದ ಕಮಲ್‌ ಹಾಗೂ ಆದಿಲ್‌, ನೂರಾರು ವರ್ಷಗಳಷ್ಟು ಹಳೆಯದಾದ ದರ್ಗಾ ಭುರೆ ಶಾ ಬಾಬಾ ಮತ್ತು ಜಲಾಲ್‌ಶಾ ಬಾಬಾ ಮತ್ತು ಮೂರನೇ ಕುತುಬ್ ಷಾ ಸಮಾಧಿಯನ್ನು ನಾಶ ಮಾಡಿದ್ದಾರೆ. ಅದಲ್ಲದೆ, ಈ ಸಮಾಧಿಗಳ ಮೇಲೆ ಹೊದಿಸಿದ್ದ ಚಾದರ್‌ಗಳಿಗೂ ಬೆಂಕಿ ಹಚ್ಚಿ ದುಂಡಾವರ್ತನೆ ತೋರಿದ್ದಾರೆ. ಆದರೆ, ಪೊಲೀಸರು ಹಾಗೂ ಜಿಲ್ಲಾಧಿಕಾರಿ ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಪರಿಸ್ಥಿತಿ ಹದಗೆಡದಂತೆ ತಡೆದರು. ಇವರಿಬ್ಬರ ಬಂಧನವನ್ನೂ ಮಾಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಎಕ್ಸ್‌ಪ್ರೆಸ್‌ ವೇನಲ್ಲಿ ನಿಂತಿದ್ದ ಡಬಲ್‌ ಡೆಕರ್‌ ಬಸ್‌ಗೆ ಗುದ್ದಿದ ಇನ್ನೊಂದು ಬಸ್‌, 8 ಸಾವು!

ವಾತಾವರಣ ಕೆಡಿಸುವ ಉದ್ದೇಶದಿಂದ ಸಹೋದರರಿಬ್ಬರೂ ಕೇಸರಿ ಬಣ್ಣದ ಬಟ್ಟೆ ಧರಿಸಿ ಕೃತ್ಯ ಎಸಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಮುಸ್ಲಿಂ ಯುವಕರಿಬ್ಬರೂ ಅಪರಾಧ ಕಾರ್ಯದಲ್ಲಿ ತೊಡಗಿದ್ದಾಗ ದಾರಿಹೋಕರು ಸಮಾಧಿಯನ್ನು ಧ್ವಂಸ ಮಾಡುವುದನ್ನು ಕಂಡರು. ಇದರಿಂದಾಗಿ, ತರಾತುರಿಯಲ್ಲಿ, ಬಿಜ್ನೋರ್ ಡಿಎಂ ಮತ್ತು ಎಸ್ಪಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಮತ್ತು ಮುರಿದ ಮೂರು ಗೋರಿಗಳ ದುರಸ್ತಿ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಿದರು. ಏಕಕಾಲದಲ್ಲಿ ಪೊಲೀಸರು ಆರೋಪಿಗಳಾದ ಆದಿಲ್ ಮತ್ತು ಕಮಲ್‌ ಇಬ್ಬರನ್ನೂ ಬಂಧಿಸಿದ್ದಾರೆ.

ಅತ್ಯಾಚಾರ ಕೇಸ್‌: ಮಾಜಿ ಶಾಸಕನ ಪುತ್ರನನ್ನು ಹುಡುಕಿಕೊಟ್ಟರೆ 1 ಲಕ್ಷ ಬಹುಮಾನ

ಮಾನಸಿಕ ಅಸ್ವಸ್ಥರು: ಭಾನುವಾರ ಸಂಜೆ 4.30 ರ ಸುಮಾರಿಗೆ ಶೆರ್ಕೋಟ್ ಪ್ರದೇಶದ ಜಲಾಲ್ ಶಾ ಮಜಾರ್‌ನಲ್ಲಿ ವಿಧ್ವಂಸಕ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಎಸ್ಪಿ ದಿನೇಶ್ ಸಿಂಗ್ ತಿಳಿಸಿದ್ದಾರೆ. ಮಾಹಿತಿಯ ನಂತರ, ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದರು ಮತ್ತು ಘೋಸಿಯಾವಾಲಾ ಗ್ರಾಮದಲ್ಲಿರುವ ಭೂರೆ ಲಾಲ್ ಶಾ ಅವರ ಸಮಾಧಿಯನ್ನು ಧ್ವಂಸಗೊಳಿಸಲಾಗಿದೆ. ಇದಾದ ನಂತರ ಪೊಲೀಸರು ಸ್ಥಳಕ್ಕಾಗಮಿಸಿದಾಗ ಇಬ್ಬರು ಸಹೋದರರಾದ ಮೊಹಮ್ಮದ್ ಕಮಲ್ ಮತ್ತು ಮೊಹಮ್ಮದ್ ಆದಿಲ್ ಧ್ವಂಸ ಮಾಡಿರುವುದು ಪತ್ತೆಯಾಗಿದೆ.ಮತ್ತೊಂದೆಡೆ, ಇಬ್ಬರೂ ಮಾನಸಿಕ ಅಸ್ವಸ್ಥರು ಎಂದು ಮನೆಯವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios