ಮಹಿಳೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಕಾರಣಕ್ಕೆ ಆಕೆಯ ಮಕ್ಕಳ ಮುಂದೆ ಮರಕ್ಕೆ ಕಟ್ಟಿ ಹಾಕಿ ಮಸಿ ಬಳೆಯಲಾಗಿದೆ. ಕೂದಲು ಕತ್ತರಿಸಿ ಹಲ್ಲೆ ನಡೆಸಲಾಗಿದೆ. ದುರಂತ ಅಂದರೆ ಇದು ಪಂಚಾಯತ್ ಆಜ್ಞೆಯ ಪ್ರಕಾರ ನಡೆದಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಾಪಘಡ(ಜು.29) ಅಕ್ರಮ ಸಂಬಂಧ ಆರೋಪದಡಿ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಶಿಕ್ಷಿಸಿದ ಘಟನೆ ನಡೆದಿದೆ.ದುರಂತ ಅಂದರೆ ಪಂಚಾಯತ್ ಈ ಕ್ರೌರ್ಯಕ್ಕೆ ಆರ್ಡರ್ ನೀಡಿದೆ. ಮಹಿಳೆ ಗಂಡ ಮುಂಬೈನಲ್ಲಿರುವ ಕಾರಣ ಅದೇ ಗ್ರಾಮದ ನಾಲ್ಕು ಮಕ್ಕಳ ಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಅನ್ನೋ ಗಂಭೀರ ಆರೋಪದ ಮೇಲೆ ಈ ಕೌರ್ಯ ನಡೆಸಲಾಗಿದೆ. ಮಹಿಳೆಯನ್ನು ಆಕೆಯ ಮಕ್ಕಳ ಮುಂದೆ ಮರಕ್ಕೆ ಕಟ್ಟಿ ಹಾಕಲಾಗಿದೆ. ಮುಖಕ್ಕೆ ಮಸಿ ಬಳಿದು, ಕೂದಲು ಕತ್ತರಿಸಲಾಗಿದೆ. ಚಪ್ಪಲಿ ಹಾರಿ ಹಾಕಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಚೋಟ್ಕಿ ಇಬ್ರಾಹಿಂಪುರದಲ್ಲಿ ನಡೆದಿದೆ.
ಚೋಟ್ಕಿ ಗ್ರಾಮದ ಈ ಮಹಿಳೆಯ ಪತಿ ಮುಂಬೈನಲ್ಲಿ ಕೆಲಸದಲ್ಲಿದ್ದಾನೆ. ತಿಂಗಳಿಗೊಮ್ಮೆ ಮನೆಗೆ ಬರುತ್ತಾನೆ. ಇವರಿಗೆ ಮೂವರು ಮಕ್ಕಳಿದ್ದಾರೆ.ಇದೇ ಗ್ರಾಮದ ಮತ್ತೊರ್ವ ಪುರುಷನೊಂದಿಗೆ ಈ ಮಹಿಳೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋದು ಆರೋಪ. ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮುಂಬೈನಲ್ಲಿರುವ ಪತಿ ತವರಿಗೆ ಮರಳಿದ್ದಾನೆ. ಬಳಿಕ ಗ್ರಾಮಸ್ಥರು ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಮಹಿಳೆಗೆ ಶಿಕ್ಷೆಗೆ ಆರ್ಡರ್ ನೀಡಲಾಗಿದೆ.
ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆಂದು ಲೈವ್ ವೀಡಿಯೊ ಮಾಡಿ ಮಹಿಳೆ ಆತ್ಮಹತ್ಯೆಗೆ ಶರಣು!
ಇದರಿಂದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ. ಬಳಿಕ ಆಕೆಯ ಕೂದಲನ್ನು ಕತ್ತರಿಸಲಾಗಿದೆ. ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಲಾಗಿದೆ. ಈ ವೇಳೆ ಮಹಿಳೆಯ ಅಕ್ರಮ ಸಂಬಂಧ ಬೆಳೆಸಿದ ಪುರಷ ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಕ್ಷಿಸು ಸಾಹಸಕ್ಕೆ ಮುಂದಾಗಿದ್ದಾನೆ. ಆದರೆ ಗ್ರಾಮಸ್ಥರು ಆತನಿಗೆ ಥಳಿಸಿದ್ದಾರೆ. ಹೀಗಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಒಂದೆಡೆ ಏನೂ ಅರಿಯದ ಮಕ್ಕಳು ಭಯಭೀತರಾಗಿದ್ದಾರೆ. ಪತಿ ನಿಸ್ಸಾಹಯನಾಗಿದ್ದಾನೆ. ಇತ್ತ ಮಹಿಳೆ ಮೇಲೆ 20ಕ್ಕೂ ಹೆಚ್ಚು ಮಂದಿ ಈ ಕ್ರೌರ್ಯ ಮೆರೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಐವರು ತಲೆಮರೆಸಿಕೊಂಡಿದ್ದಾರೆ.
ಅರೆಸ್ಟ್ ವೇಳೆ ಕೆಲವರು ಇದು ಗ್ರಾಮಸ್ಥರು ನಡೆಸಿದ ಪಂಚಾಯಿತಿಗೆ ಆರ್ಡರ್ ಎಂದು ವಾದಿಸಿದ್ದಾರೆ. ಪೊಲೀಸರು ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತ ಕೌಟುಂಬಿಕ ಸಮಸ್ಯೆಗಳಿದ್ದರೆ ಕೋರ್ಟ್ ಮೂಲಕ ಪರಿಹಾರ ಕಂಡುಕೊಳ್ಳಲು ಪೊಲೀಸರು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಈ ರೀತಿ ದೌರ್ಜನ್ಯ, ಕ್ರೌರ್ಯ ನಡೆಸಿದರೆ ಸಂಬಂಧಪಟ್ಟ ಎಲ್ಲರ ಗ್ರಹಚಾರ ಬಿಡಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
20 ವರ್ಷದ ಹುಡುಗಿಯ ಕೊಲೆ, ಶವವನ್ನು ಪೊದೆಯಲ್ಲಿ ಎಸೆದು ಹೋದ ಬಾಯ್‌ಫ್ರೆಂಡ್!
