Asianet Suvarna News Asianet Suvarna News

ಒಂಟಿ ಬಾಡಿಗೆದಾರರೇ ಎಚ್ಚರ: ವಿದ್ಯಾರ್ಥಿಯನ್ನು ಕೊಂದು ದೇಹ 3 ತುಂಡಾಗಿ ಕತ್ತರಿಸಿ ಎಸೆದ ಮನೆ ಮಾಲೀಕ..!

ಮೃತ ವಿದ್ಯಾರ್ಥಿ ಇತ್ತೀಚೆಗೆ ಯುಪಿಯ ಬಾಗ್‌ಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿದ್ದು, ಅದರಿಂದ ಆತನಿಗೆ 1 ಕೋಟಿ ರೂ. ಸಿಕ್ಕಿದೆ ಎಂದು ತಿಳಿದುಕೊಂಡ ಮನೆ ಮಾಲೀಕ ಆತನ ಮೇಲೆ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

up man kills tenant phd student dumps his chopped body parts at 3 locations ash
Author
First Published Dec 15, 2022, 2:38 PM IST

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದ ಶ್ರದ್ಧಾ ವಾಕರ್‌ (Shraddha Walkar) ಬರ್ಬರ ಹತ್ಯೆ ಪ್ರಕರಣ (Murder) ಬೆಳಕಿಗೆ ಬಂದ ಬಳಿಕ ಆಗಾಗ್ಗೆ ಅಂತದ್ದೇ ಘಟನೆಗಳು ಬೆಳಕಿಗೆ ಬರುತ್ತಿದೆ. ಉತ್ತರ ಪ್ರದೇಶದಲ್ಲಿ (Uttar Pradesh) ಈಗ ಮತ್ತೊಂದು ಅಂತದ್ದೇ ಹತ್ಯೆ ಪ್ರಕರಣ ವರದಿಯಾಗಿದೆ. ಆದರೆ, ಇಲ್ಲಿ ಮನೆ ಮಾಲೀಕ (Owner) ಒಂಟಿ ಬಾಡಿಗೆದಾರನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ನಡೆದು 2 ತಿಂಗಳಾಗಿದ್ದು, ಇತ್ತೀಚೆಗೆ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. 

ತನ್ನ ಬಾಡಿಗೆದಾರ ಅಂಕಿತ್ ಖೋಕರ್‌ನನ್ನು (Ankit Khokar) ಕೊಂದು ಕಾಲುವೆಗೆ ಎಸೆದು ಆತನ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಯುಪಿಯ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಿಂದ ಉಮೇಶ್ ಶರ್ಮಾ ಎಂಬ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೃತ ವಿದ್ಯಾರ್ಥಿ ಇತ್ತೀಚೆಗೆ ಯುಪಿಯ ಬಾಗ್‌ಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿದ್ದು, ಅದರಿಂದ ಆತನಿಗೆ 1 ಕೋಟಿ ರೂ. ಸಿಕ್ಕಿದೆ ಎಂದು ತಿಳಿದುಕೊಂಡ ಮನೆ ಮಾಲೀಕ ಆತನ ಮೇಲೆ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಮನೆ ಮಾಲೀಕ ಮಾತ್ರವಲ್ಲದೆ ಪರ್ವೇಶ್ ಎಂದು ಗುರುತಿಸಲಾದ ಹಂತಕನ ಸ್ನೇಹಿತನನ್ನು ಸಹ ಬಂಧಿಸಲಾಗಿದೆ ಎಂದು ವರದಿಯಾಗಿದೆ. 

ಇದನ್ನು ಓದಿ: ಮೆಹ್ರುಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದು, ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತು!

ಮೃತ ಅಂಕಿತ್ ಖೋಕರ್ ಕೆಲವು ವರ್ಷಗಳ ಹಿಂದೆ ಅವರ ಪೋಷಕರು ನಿಧನರಾದಾಗಿನಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಮತ್ತು ಲಕ್ನೋದ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾನೆ. ಆತ,  ವಾರಗಟ್ಟಲೆ ಕರೆಗಳಿಗೆ ಉತ್ತರಿಸದೇ ಇದ್ದಾಗ ಆತನ ಸ್ನೇಹಿತರಿಗೆ ಅನುಮಾನ ಬಂದು ಆತನನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಬಳಿಕ, ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಂದೆಡೆ, ವಿದ್ಯಾರ್ಥಿಯ ಮೊಬೈಲ್‌ ನಂಬರ್‌ನಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದಾಗ, ಸಂಭಾಷಣೆಯ ಶೈಲಿಯು ಅವರದಲ್ಲ ಎಂದು ಅವರು ಕಂಡುಕೊಂಡರು ಮತ್ತು ಫೋನ್‌ ಕರೆಗಳಿಗೆ ಉತ್ತರಿಸುತ್ತಿರಲಿಲ್ಲ.  

ಅಂಕಿತ್‌ ಖೋಕರ್‌ ಮನೆಯ ಮಾಲೀಕರಿಗೆ ಸಾಲವಾಗಿ 40 ಲಕ್ಷ ರೂ. ನೀಡಿದ್ದರು ಎಂದೂ ತಿಳಿದುಬಂದಿದೆ. ಅಕ್ಟೋಬರ್ 6 ರಂದು ಅಂಕಿತ್ ಖೋಕರ್ ಅವರನ್ನು ಬಂಧಿತ ಮನೆ ಮಾಲೀಕ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಈಗ ಕಂಡುಕೊಂಡಿರುವುದಾಗಿ ಪೊಲೀಸರು ಹೇಳುತ್ತಾರೆ. ನಂತರ ಗರಗಸವನ್ನು ಬಳಸಿ ಮೃತದೇಹವನ್ನು ಕನಿಷ್ಠ 3 ಭಾಗಗಳಾಗಿ ಕತ್ತರಿಸಿ, ಅದನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಪ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ವೈದ್ಯೆ ಪತ್ನಿಯನ್ನು ಕೊಂದು 400 KM ದೂರದಲ್ಲಿ ಹೂತು ಹಾಕಿದ ಡಾಕ್ಟರ್

ಅಲ್ಲದೆ, ಮೃತದೇಹದ ಒಂದು ಭಾಗವನ್ನು ಮುಜಾಫರ್‌ನಗರದ ಖತೌಲಿಯ ಕಾಲುವೆಯಲ್ಲಿ, ಇನ್ನೊಂದು ಭಾಗವನ್ನು ಮಸ್ಸೂರಿ ಕಾಲುವೆಯಲ್ಲಿ ಮತ್ತು ಉಳಿದ ಇನ್ನೊಂದು ಭಾಗವನ್ನು ಎಕ್ಸ್‌ಪ್ರೆಸ್‌ವೇನಲ್ಲಿ ಬಿಸಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೃತದೇಹದ ಭಾಗಗಳು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದೂ ವರದಿಯಾಗಿದೆ.

ಸಾಲ ತೆಗೆದುಕೊಂಡಿದ್ದಲ್ಲೆ, ಅಂಕಿತ್‌ ಖೋಕರ್‌ ಅಕೌಂಟ್‌ನಿಂದ ಆತನ ಎಟಿಎಂ ಕಾರ್ಡ್‌ ಬಳಸಿ ಒಟ್ಟಾರೆ 20 ಲಕ್ಷ ರೂ. ವಿತ್‌ಡ್ರಾ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. ಹಾಗೂ, ಹೆಚ್ಚಿನ ಹಣಕ್ಕಾಗಿ ಆಥನ ಸ್ನೇಹಿತ ಪ್ರವೇಶ್‌ಗೆ ಕಾರ್ಡ್‌ ನೀಡಿ ಉತ್ತರಾಖಂಡ್‌ನಲ್ಲಿ ಹಣ ಹಿಂಪಡೆಯಲು ಹೇಳಿದ್ದನು ಎಂದೂ ತಿಳಿದುಬಂದಿದೆ.

ಇದನ್ನು ಓದಿ: Hassan: ಕಬ್ಬಿನ ಗದ್ದೆಯಲ್ಲಿ ಹೂತಿದ್ದ ಮಹಿಳೆ ಶವ ಹೊರಕ್ಕೆ: ಆರೋಪಿಯ ಬಂಧನ

ಹಾಗೂ, ಒಂದು ವೇಳೆ ಆತ ಕಾಣೆಯಾಗಿದ್ದಾನೆ ಎಂದು ವರದಿಯಾದರೆ ಮತ್ತು ತನಿಖೆಯನ್ನು ದಾರಿತಪ್ಪಿಸಲು ಮೃತನ ಮೊಬೈಲ್ ಫೋನ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವಂತೆಯೂ ಸ್ನೇಹಿತರಿಗೆ ಹೇಳಿದರು’’ ಎಂದು ಗಾಜಿಯಾಬಾದ್ ಗ್ರಾಮಾಂತರದ ಪೊಲೀಸ್ ಉಪ ಕಮಿಷನರ್ ಇರಾಜ್ ರಾಜಾ ಹೇಳಿದರು.

Follow Us:
Download App:
  • android
  • ios