Asianet Suvarna News Asianet Suvarna News

ವೈದ್ಯೆ ಪತ್ನಿಯನ್ನು ಕೊಂದು 400 KM ದೂರದಲ್ಲಿ ಹೂತು ಹಾಕಿದ ಡಾಕ್ಟರ್

ತನ್ನ ವೈದ್ಯ ಪತ್ನಿಯನ್ನು ಕೊಲೆ ಮಾಡಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಅಭಿಷೇಕ್ ಅವಸ್ಥಿ ಬಂಧಿತ ವೈದ್ಯ. ಈತ ತನ್ನ ಪತ್ನಿ ವಂದನಾ ಅವಸ್ಥಿಯನ್ನು ಹತ್ಯೆ ಮಾಡಿ ಶವವನ್ನು 400 ಕಿಲೋ ಮೀಟರ್ ದೂರದಲ್ಲಿ ಹೂತು ಹಾಕಿದ್ದ.

Uttar Pradesh doctor killed his doctor wife after marital disputes entered peek akb
Author
First Published Dec 14, 2022, 4:39 PM IST

ಲಕ್ನೋ: ತನ್ನ ವೈದ್ಯ ಪತ್ನಿಯನ್ನು ಕೊಲೆ ಮಾಡಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಅಭಿಷೇಕ್ ಅವಸ್ಥಿ ಬಂಧಿತ ವೈದ್ಯ. ಈತ ತನ್ನ ಪತ್ನಿ ವಂದನಾ ಅವಸ್ಥಿಯನ್ನು ಹತ್ಯೆ ಮಾಡಿ ಶವವನ್ನು 400 ಕಿಲೋ ಮೀಟರ್ ದೂರದಲ್ಲಿ ಹೂತು ಹಾಕಿದ್ದ. ನವಂಬರ್ 26 ರಂದು ಈ ಘಟನೆ ನಡೆದಿದ್ದು, ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದಿದೆ. ಲಖಿಂಪುರ ಖೇರಿಯಲ್ಲಿ (akhimpur Kheri) ಪತ್ನಿ ವಂದನಾ ಅವಸ್ಥಿಯನ್ನು (Vandana Awasthi) ಹತ್ಯೆ ಮಾಡಿದ ಆರೋಪಿ ವೈದ್ಯ ಅಭಿಷೇಕ್ ಆವಸ್ಥಿ ( Abhishek Awasthi) ಬಳಿಕ ಶವವನ್ನು ಸುಮಾರು 400 ಕೀಲೋ ಮೀಟರ್ ದೂರದ ಗೃಹಮುಕುಟೇಶ್ವರ (Garhmukteshwar) ಎಂಬಲ್ಲಿ ತೆಗೆದುಕೊಂಡು ಹೋಗಿ ಹೂತು ಹಾಕಿದ್ದರು.

ಆಯುರ್ವೇದಿಕ್ ವೈದ್ಯನಾಗಿರುವ ಅಭಿಷೇಕ್ ಅವಸ್ಥಿ ತನ್ನ ತಂದೆ ಗೌರಿ ಶಂಕರ್ ಅವಸ್ಥಿ ಜೊತೆ ಸೇರಿಕೊಂಡು ಪತ್ನಿ ಜೊತೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ಪತ್ನಿ ವಂದನಾಗೆ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ ತಲೆಗೆ ಗಂಭೀರ ಗಾಯವಾಗಿ ವಂದನಾ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಅಭಿಷೇಕ್ ಆವಸ್ಥಿ, ಸದರ್ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ.  ಅಲ್ಲದೇ ಅವಸ್ಥಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಬೀಗ ಹಾಕಿ ತನ್ನ ಕ್ಲಿನಿಕ್ ಗೌರಿ ಚಿಕಿತ್ಸಾಲಯಕ್ಕೆ ಹೋಗಿದ್ದ. ಬಳಿಕ ಆಂಬುಲೆನ್ಸ್ ಒಂದಕ್ಕೆ ಕರೆ ಮಾಡಿದ್ದು, ಅದರಲ್ಲಿ ಪತ್ನಿ ಶವವನ್ನು ತುಂಬಿಸಿ 400 ಕಿಲೋ ಮೀಟರ್ ದೂರದ ಘರ್ಮುಕುಟೇಶ್ವರದಲ್ಲಿ (Garh Mukteshwar) ಹೂತು ಹಾಕಿದ್ದ ಎಂದು ಲಖೀಂಪುರ ಕೇರಿ ಎಎಸ್‌ಪಿ ಅರುಣ್ ಕುಮಾರ್ (Arun Kumar Singh) ಮಾಧ್ಯಮಗಳಿಗೆ ಘಟನೆಯ ಬಗ್ಗೆ ವಿವರಿಸಿದ್ದಾರೆ. 

Chitradurga: ಕಾಲು ಜಾರಿ ಬಿದ್ದು ಪತ್ನಿ ಸಾವು, ಶಂಕಿಸಿದ್ದ ವೈದ್ಯ, ಪೋಸ್ಟ್ ಮಾರ್ಟಂ ಬಳಿಕ ಸತ್ಯ ಬಯಲು

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವೈದ್ಯ ಅವಸ್ಥಿಯನ್ನು ಸೋಮವಾರ ವಿವಾರಣೆ ನಡೆಸಿದ್ದು,  ನಂತರ ಈತ ತಾನು ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಲೆ ಆರೋಪಿ ತನ್ನ ತಂದೆಯ ಜೊತೆ ಸೇರಿ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಅಪ್ಪ ಮಗ ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೇ ಈತ ಆಂಬುಲೆನ್ಸ್ ಚಾಲಕನಿಗೆ ಈ ಮಹಿಳೆ ಆಂಬುಲೆನ್ಸ್‌ನಲ್ಲಿ ಸಾವನ್ನಪ್ಪಿದ್ದು, ಆದಷ್ಟು ಬೇಗ ಆಕೆಯ ಅಂತ್ಯಸಂಸ್ಕಾರ ನಡೆಸುವಂತೆ ಹೇಳಿದ್ದಾನೆ.

ಈತನ ಪತ್ನಿ ಕೊಲೆಯಾದ ವಂದನಾ ಶುಕ್ಲಾ (Vandana Shukla) ಕೂಡ ಆಯುರ್ವೇದಿಕ್ ವೈದ್ಯೆಯಾಗಿದ್ದು (ayurvedic doctor), ಲಖೀಂಪುರ ನಗರದ ಮೊಹಲ್ಲಾ ಬಹದೂರ್ ನಗರದ ನಿವಾಸಿಯಾಗಿದ್ದ ಅಭಿಷೇಕ್ ಅವರನ್ನು 2014ರಲ್ಲಿ ವಿವಾಹವಾಗಿದ್ದರು. ಇಬ್ಬರು ಸೇರಿ ಸೀತಾಪುರ ರಸ್ತೆಯಲ್ಲಿ ಗೌರಿ ಚಿಕಿತ್ಸಾಲಯ ಎಂಬ ಕ್ಲಿನಿಕೊಂದನ್ನು ತೆರೆದಿದ್ದರು. ಆದರೆ ಗಂಡ ಹೆಂಡತಿ ಮಧ್ಯೆ ಕೌಟುಂಬಿಕ ಕಲಹ ಹೆಚ್ಚಾದ ಹಿನ್ನೆಲೆಯಲ್ಲಿ ವಂದನಾ ಚಮಲ್ಪುರದಲ್ಲಿರುವ (Chamalpur) ಲಕ್ಷ್ಮಿನಾರಾಯಣ ಆಸ್ಪತ್ರೆಯಲ್ಲಿ ಪ್ರಾಕ್ಟಿಸ್ ಮಾಡಲು ಶುರು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಖಿಚಡಿಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಕತ್ತು ಹಿಸುಕಿ ಪತ್ನಿಯ ಕೊಲೆ

Mandya: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆಗೈದ ಪಾಪಿ ಪತಿ!

ವಿಮೆ ಹಣಕ್ಕಾಗಿ ಪತ್ನಿಯ ಕೊಲೆ ಮಾಡಿಸಿದ ಭೂಪ, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು ಸತ್ಯ!

Follow Us:
Download App:
  • android
  • ios