ಕಾರವಾರ(ಜ. 09)  ಮದುವೆ ಮನೆಯಲ್ಲಿ ಮದುಮಗಳ ಮೇಲೆ ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್  ಮದುಮಗಳು ಪಾರಾಗಿದ್ದಾಳೆ. ಅಂಕೋಲಾ ತಾಲೂಕಿನ 
ಆವರ್ಸಾದ ಸಕಲಬೇಣದಲ್ಲಿ ಘಟನೆ ನಡೆದಿದೆ.

ಸುಂಕಸಾಳದ ದುರ್ಗನಬೈಲ್ ನಿವಾಸಿ ದಿವ್ಯಾ ಗಾಂವಕರ್ ಅವರ ಮದುವೆ  ನಿಗದಿಯಾಗಿತ್ತು. ಸಂಬಂಧಿಕರ ಮನೆ ಹತ್ತಿರವಾದ್ದರಿಂದ ಸಕಲಬೇಣದಲ್ಲಿರುವ ಮನೆಯಲ್ಲಿ ಮದುವೆ ತಯಾರಿ ನಡೆದಿತ್ತು. ಮದುಮಗಳು ಬೆಳಗ್ಗೆ 4 ಗಂಟೆ  ಎದ್ದು ಕೆಲಸ ಮಾಡುತ್ತಿದ್ದಳು. ಡೈನಿಂಗ್ ಹಾಲಿನ ಕಿಟಕಿ ಸ್ವಲ್ಪ ತೆರೆದಿದ್ದದಿಂದ ನಾಡಬಂದೂಕಿನಿಂದ  ಬುಲೆಟ್ ತೂರಿಬಂದಿದೆ.

ಶ್ವಾನದ ಮಾಲೀಕತ್ವಕ್ಕೆ ಜಗಳ.. ಗುಂಡು ಹಾರಿಸಿಬಿಟ್ಟ!

 ಗುಂಡು ಗೋಡೆಗೆ ಹೊಡೆದದ್ದರಿಂದ ಯುವತಿ ಪಾರಾಗಿದ್ದಾಳೆ. ಘಟನೆ ಬಗ್ಗೆ ಅಂಕೋಲಾ ಠಾಣೆಯಲ್ಲಿ ಯುವತಿ ಅಣ್ಣ ಅಣ್ಣ ಸಂದೀಪ್ ಉಮೇಶ್  ದೂರು ನೀಡಿದ್ದಾರೆ.  ವಜ್ರಳ್ಳಿಯ ರಾಜೇಶ್ ಗಣಪತಿ ಗಾಂವಕರ್ ಮೇಲೆ ದೂರು  ನೀಡಲಾಗಿದೆ.

ಲವ್ ಮಾಡ್ತೇನೆಂತ ಹೇಳಿ ಯುವತಿಯನ್ನು ರಾಜೇಶ್ ಕಾಡುತ್ತಿದ್ದ. ಅದೇ ಕಾರಣದಿಂದ ಬುಲೆಟ್ ಫೈರ್ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ವಜ್ರಳ್ಳಿಯ ರಾಜೇಶ್ ಗಣಪತಿ ಗಾಂವಕರ್  ಮೇಲಲೆ ಯಪ್ಪಾಪುರದಲ್ಲೊಂದು ಮರ್ಡರ್ ಪ್ರಕರಣ  ಇದೆ. ಅಲ್ಲದೇ, 2017ರಲ್ಲಿ ಅಂಕೋಲಾದಲ್ಲಿ ಅರಣ್ಯ ಇಲಾಖೆ ವಾಹನದ ಮೇಲೆ 8 ಸುತ್ತಿನ ಬುಲೆಟ್ ಫೈರ್ ಮಾಡಿದ್ದ. ಅರಣ್ಯ ಕಳ್ಳತನ ಸಂಬಂಧಿಸಿ ಈಗಾಗಲೇ 7-8 ಕೇಸ್ ರಾಜೇಶ್ ಮೇಲಿದೆ.ಜನವರಿ 6ರಂದು ರಾಜೇಶ್ ತಮ್ಮ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಣ್ಣ ಮಿಸ್ಸಿಂಗ್ ಎಂದು ದೂರು ನೀಡಿದ್ದ. ಕಳೆದ ನಾಲ್ಕು ದಿನದಿಂದ ಮಿಸ್ಸಿಂಗ್ ಆಗಿರುವ ರಾಜೇಶನೇ ಕೃತ್ಯ ಎಸಗಿರುವ ಸಂಶಯ ಮೂಡಿದೆ.