ಪಾಟ್ನಾ(ಡಿ.  27)  ಶ್ವಾನದ ಮಾಲೀಕತ್ವಕ್ಕಾಗಿ ನಡೆಯುತ್ತಿದ್ದ ಜಗಳ ಭೀಕರ ಸ್ವರೂಪಕ್ಕೆ ತಿರುಗಿದೆ. ಬಿಹಾರದ ಔರಂಗಬಾದ್ ಜಿಲ್ಲೆಯಲ್ಲಿ 22 ವರ್ಷದ ಯುವಕ ಶ್ವಾನದ ಜಗಳದಲ್ಲಿ ಗುಂಡೇಟು ತಿಂದಿದ್ದಾನೆ.

 ದೌಡ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಮ ಖುರ್ದ್ ಗ್ರಾಮದಲ್ಲಿ ಶುಕ್ರವಾರ ಸಂಜೆ  ಘಟನೆ ನಡೆದಿದೆ.  ರಾಜ್ ಕುಮಾರ್  ಎಂಬ ಯುವಕ ಗಾಯಗೊಂಡಿದ್ದಾನೆ.

ಹಬ್ಬದ ವೇಳೆ ಸೆಕ್ಸ್‌ಗೆ ಅವಕಾಶ; ಪತ್ನಿ ಜೈಲಿಗೆ ಬರಲಿಲ್ಲವೆಂದು ಶಿಶ್ನವನ್ನೇ ಕತ್ತರಿಸಿಕೊಂಡ!

ನಾಯಿಮರಿಯನ್ನು ಹಸ್ತಾಂತರಿಸಲು ನಿರಾಕರಿಸಿದ ರಾಜು  ಎಂಬಾತನ ಮೇಲೆ ಸುಧೀರ್ ಕುಮಾರ್ ಮತ್ತು ರೋಶನ್ ಕುಮಾರ್ ಗುಂಡು ಹಾರಿಸಿದ್ದಾರೆ.

ರಸ್ತೆ ಬದಿಯಲ್ಲಿ ಸಿಕ್ಕ ನಾಯಿಮರಿಯೊಂದನ್ನು ರಕ್ಷಣೆ ಮಾಡಿದ್ದ ರಾಜು ಅದನ್ನು ತನ್ನ ಸ್ನೇಹಿತನ ಮನೆಯಲ್ಲಿ ಬಿಟ್ಟಿದ್ದ. ಇದು ಗೊತ್ತಾದ ಸುಧೀರ್ ಮತ್ತು ರೋಶನ್ ಅಲ್ಲಿಗೆ ತೆರಳಿದ್ದು ನಾಯಿ ಮರಿ ತಮ್ಮದು ಎಂದಿದ್ದಾರೆ.

ಈ ವೇಳೆ ವಾಗ್ವಾದ ನಡೆದಿದ್ದು ವಿಕೋಪಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ಸುಧೀರ್ ಗುಂಡು ಹಾರಿಸಿದ್ದಾನೆ. ಪರಾರಿಯಾಗಿದ್ದ ಆರೋಪಿಗಳನ್ನು  ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.