Asianet Suvarna News Asianet Suvarna News

ಎಚ್ಚರ ತಪ್ಪಿದ್ರೆ ಹೀಗೆ ಆಗೋದು: 10 ರು. ಪಾವತಿಸಲು ಹೋಗಿ 1.69 ಲಕ್ಷ ರು. ಕಳೆದುಕೊಂಡ..!

* ಕೊರಿಯರ್‌ ಸಂಸ್ಥೆಯ ಪ್ರತಿನಿ​ಧಿ ಎಂದು ಹೇಳಿ ಕರೆ ಮಾಡಿದ ಅನಾಮಿಕ ವ್ಯಕ್ತಿ
* ಪಾರ್ಸೆಲ್‌ ಡೆಲಿವರಿಗೆ 10 ರು. ಪಾವತಿಸುವಂತೆ ತಿಳಿಸಿದ ಖದೀಮ
* ಬ್ಯಾಂಕ್‌ ಖಾತೆಗಳಿಂದ ಹಂತಹಂತವಾಗಿ 1,69,600 ರು. ವರ್ಗಾವಣೆ
 

Unknown Person Cheat to Man in Mangaluru grg
Author
Bengaluru, First Published Jun 18, 2021, 8:43 AM IST

ಮಂಗಳೂರು(ಜೂ.18):  ನಗರದ ವ್ಯಕ್ತಿಯೊಬ್ಬರು 10 ರು. ಪಾವತಿಸಲು ಹೋಗಿ ವಂಚನೆಗೊಳಗಾಗಿ 1.69 ಲಕ್ಷ ರು. ಕಳೆದುಕೊಂಡ ಘಟನೆ ನಡೆದಿದೆ.

ನಗರದ ನಿವಾಸಿಯೊಬ್ಬರಿಗೆ ಕೊರಿಯರ್‌ ಸಂಸ್ಥೆಯ ಪ್ರತಿನಿ​ಧಿ ಎಂದು ಹೇಳಿ ಕರೆ ಮಾಡಿದ ಅನಾಮಿಕ ವ್ಯಕ್ತಿಯು ತನ್ನನ್ನು ತಾನು ಡಿಟಿಡಿಸಿ ಕೊರಿಯರ್‌ ಸಂಸ್ಥೆ ಪ್ರತಿನಿ​ಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿಂದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್‌ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್‌ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್‌ ಡೆಲಿವರಿ ಮಾಡಬೇಕಿದ್ದಲ್ಲಿ 10 ರು. ಪಾವತಿಸುವಂತೆ ತಿಳಿಸಿದ್ದಾನೆ. 

ಬೆಳಗಾವಿ: BSNL ನೌಕರನಿಂದ 102 ಬಾರಿ ಓಟಿಪಿ ಪಡೆದು 10 ಲಕ್ಷ ವಂಚನೆ..!

ಇದರೊಂದಿಗೆ ಹಣ ಪಾವತಿಸಲು ಲಿಂಕ್‌ ಕಳುಹಿಸಿದ್ದಾನೆ. ಲಿಂಕ್‌ ತೆರೆದು ಯುಪಿಐ ಪಿನ್‌ ನಮೂದಿಸಿ 10 ರು. ಪಾವತಿಸಿದ ಬಳಿಕ ಮೊಬೈಲ್‌ ಸಂಖ್ಯೆಗೆ ಲಿಂಕ್‌ ಆಗಿರುವ ಕೆನರಾ, ಎಸ್‌ಬಿಐ, ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಖಾತೆಗಳಿಂದ ಹಂತಹಂತವಾಗಿ 1,69,600 ರು. ವರ್ಗಾವಣೆಯಾಗಿದ್ದು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸೈಬರ್‌ ಪೊಲೀಸರಿಗೆ ದೂರು ನೀಡಲಾಗಿದೆ.
 

Follow Us:
Download App:
  • android
  • ios