ತುಮಕೂರಿನಲ್ಲಿ ತಲೆ ಎತ್ತಿದೆ ನಕಲಿ ಚೈನ್ ಲಿಂಕ್ ಆನ್ಲೈನ್ ಕಂಪನಿ: ವಿದ್ಯಾರ್ಥಿಗಳೇ ಇವ್ರ ಮೈನ್ ಟಾರ್ಗೆಟ್

ಕಲ್ಪತರ ನಾಡು ತುಮಕೂರಿನಲ್ಲಿ ನಕಲಿ ಚೈನ್ ಲಿಂಕ್ ಆನ್ಲೈನ್ ಕಂಪನಿ ತಲೆ ಎತ್ತಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳನ್ನು ಮೈನ್ ಟಾರ್ಗೆಟ್ ಮಾಡುತ್ತಿದ್ದಾರೆ.

unknown peoples have been cheated by more than 30 people for employment in tumakuru gvd

ತುಮಕೂರು (ಜೂ.29): ಕಲ್ಪತರ ನಾಡು ತುಮಕೂರಿನಲ್ಲಿ ನಕಲಿ ಚೈನ್ ಲಿಂಕ್ ಆನ್ಲೈನ್ ಕಂಪನಿ ತಲೆ ಎತ್ತಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳನ್ನು ಮೈನ್ ಟಾರ್ಗೆಟ್ ಮಾಡುತ್ತಿದ್ದಾರೆ. ಸಿಎಲ್‌ವೈ (CLY) ಕಂಪನಿಯ ಹೆಸರಲ್ಲಿ ಫೇಸ್ಬುಕ್‌ನಲ್ಲಿ‌ ಕೆಲಸದ ಬಗ್ಗೆ ಜಾಹೀರಾತು ಮೂಲಕ ಯುವಕ, ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ಗಾಳ ಹಾಕುತ್ತಿದ್ದಾರೆ. 

ಮೊದಲು 2500 ರೂ ಹಣ ಪಡೆದು ಕಂಪನಿಗೆ ಅಡ್ಮೀಶನ್‌ ಮಾಡಿಕೊಂಡು ಬಳಿಕ ಒಬ್ಬೊಬ್ಬ ಯುವಕ, ಯುವತಿಯರಿಂದ 40ರಿಂದ 50 ಸಾವಿರ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಎರಡು ಮೂರು ದಿನ ಟ್ರೈನಿಂಗ್ ನೆಪದಲ್ಲಿ ಕಳ್ಳಾಟ ಮಾಡಿ ದೋಖಾ ಮಾಡಿದ್ದಾರೆ. ತುಮಕೂರಿನಲ್ಲಿ ಆಫೀಸ್ ತೆರೆಯದೇ ಊರುಕೆರೆ ಬಳಿಯಿರುವ ಸ್ವರ್ಣಗೃಹ ಅಪಾರ್ಟ್ಮೆಂಟ್‌ನಲ್ಲಿ ಮೂರು ನಾಲ್ಕು ಮನೆಗಳನ್ನ ಬಾಡಿಗೆ ಪಡೆದು ಫೇಸ್‌ಬುಕ್‌ನಲ್ಲೇ ಅಮಾಯಕರಿಗೆ ಗಾಳ‌ ಹಾಕಿದ್ದಾರೆ.  

ಪಾವಗಡದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ

ಇದೊಂದು ತರ ಚೈನ್ ಲಿಂಕ್ ಇದ್ದ ಹಾಗೇ ನೀವು ಎಷ್ಟು ಮಂದಿಯನ್ನ ನಮ್ಮ ಕಂಪನಿಗೆ ಸೇರಿಸುತ್ತಿರಾ. ಅದರಂತೆ ನಿಮ್ಗೆ ಕೈ ತುಂಬಾ ‌ಹಣ, ಕಾರು, ಬಂಗಲೇ ಸಿಗುತ್ತೆ ಅಂತ ವಿದ್ಯಾರ್ಥಿಗಳಿಗೆ ಮೈಂಡ್ ವಾಷ್ ಮಾಡುತ್ತಾರೆ. ಯಾರು ನಮಗೆ ಕೆಲಸ ಬೇಡ. ನಮ್ಮ ಹಣ ವಾಪಸ್ ಕೊಡಿ ಅಂತಾರೋ ಅಂಥವರ‌ ಮೇಲೆ ಪುಡಿ ರೌಡಿಗಳನ್ನ ಬಿಟ್ಟು ಹಲ್ಲೆ ನಡೆಸುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರೆ ಕೊಲೆ ಮಾಡೋದಾಗಿ ಜೀವ ಬೆದರಿಕೆಯನ್ನು ಹಾಕಿದ್ದಾರೆ. ಪ್ರಮುಖವಾಗಿ ಯುವತಿಯರಿಗೆ ಇಲ್ಲ ಸಲ್ಲದ ಆಸೆ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದು, ಖಾಸಗಿ ವಿಡಿಯೋ ಹಾಗೂ ಪೋಟೊಗಳನ್ನ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಕೂಡಾ ಮಾಡುತ್ತಿದ್ದಾರೆ.

ತುಮಕೂರು: ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಕೊಲೆಗೆ ಯತ್ನ

ಹೀಗೆ ಫೇಸ್ಬುಕ್ ಜಾಹಿರಾತು ನೋಡಿ ರಾಜ್ಯದ ಶಿವಮೊಗ್ಗ,ಚಾಮರಾಜನಗರ, ಕೊಪ್ಪಳ, ಹುಬ್ಬಳ್ಳಿ, ದಾವಣಗೆರೆ, ಸೇರಿ ಹಲವು ಕಡೆಗಳಿಂದ ಬಂದಿರುವ ಸುಮಾರು 30ಕ್ಕೂ ಹೆಚ್ಚು ಯುವಕ ಯುವತಿಯರು, ಇತ್ತ ತಮ್ಮ ಹಣವೂ ಇಲ್ಲದೇ ಕೆಲಸವು ಇಲ್ಲದೇ ಕಂಗಾಲಾಗಿದ್ದಾರೆ. ಈ ಬಗ್ಗೆ ಮೋಸ ಹೊದವರಿಂದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಘಟನೆ ಸಂಬಂಧ ಮೂವರನ್ನ ತುಮಕೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios