ಪಾವಗಡದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ
* ಪಾವಗಡ ಪಟ್ಟಣದಲ್ಲಿ ತಲೆ ಎತ್ತಿದ ಮಟ್ಕಾ ದಂಧೆ
* ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ
* ಹಾಡ ಹಗಲೇ ಮಟ್ಕಾ ಬರೆಯುತ್ತಿರುವ ಬೀಟರ್
* ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ
ತುಮಕೂರು, (ಜೂನ್.27): ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು, ಸೋಮವಾರ ಪಾವಗಡ ಪಟ್ಟಣದ ಹಳೆಸಂತೆ ಮೈದಾನದ ಹತ್ತಿರ ಹೇರ್ ಕಟಿಂಗ್ ಸೆಲೂನ್‌ನಲ್ಲಿ ಮಟ್ಕಾ ಬರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಬಡಬಗ್ಗರು , ಕೂಲಿ ಕಾರ್ಮಿಕರು , ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗದ ಜನತೆ ಮಟ್ಕಾ ಮತ್ತು ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದಾರೆ . ಹಾಗಾಗಿ ಇವರುಗಳ ಹೆಂಡತಿ - ಮಕ್ಕಳು ಉಪವಾಸ ಅನುಭವಿಸುವ ದುಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ .
ಆಫ್ ಹೆಲ್ಮೆಟ್, ಶೋಕಿ ಸೈಲೆನ್ಸರ್: ಪುಡಿ-ಪುಡಿ ಮಾಡಿದ ರೋಡ್ ರೋಲರ್
ಸೋಮವಾರ ಮಟ್ಕಾ ಬರೆಯುತ್ತಿದ್ದ ಬೀಟರ್ ಮಾತನಾಡಿ , ತಾನು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು , ತನಗೆ ದುಡಿಯಲು ಸಾಧ್ಯವಾಗುತ್ತಿಲ್ಲ . ಮಟ್ಕಾ ಬರೆದು ಜೀವನ ಮಾಡುತ್ತಿದ್ದೇನೆ . ದಿನ ಒಂದಕ್ಕೆ 3 ರಿಂದ 5 ಸಾವಿರ ಕಲೆಕ್ಷನ್ ಆಗುತ್ತದೆ . ಈ ಮೊತ್ತವನ್ನು ಮಟ್ಕಾ ಅಶ್ವತ್ಥಪ್ಪನಿಗೆ ನೀಡಿ , ತನ್ನ ಕಮಿಷನ್ ( ದಲ್ಲಾಲಿ ) ಹಣ ಪಡೆಯುತ್ತೇನೆ ಎಂದರು .
ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ಪಟ್ಟಣದ ನಡೆಯುತ್ತಿದ್ದು , ಬಡಾವಣೆ , ನಾಗರಕಟ್ಟೆ , ಭರ್ಜರಿಯಾಗಿ ಕುಮಾರಸ್ವಾಮಿ ನಲಿಗಾನಹಳ್ಳಿ , ಬಾಲಮ್ಮನಹಳ್ಳಿ , ಪಳವಳ್ಳಿ , ಕ್ಯಾತಗಾನಚೆರ್ಲು ,ತಿರುಮಣಿ , ವೆಂಕಟಮ್ಮನಹಳ್ಳಿ , ಪಿ.ರೊಪ್ಪ , ಹೊಸ ಬಸ್ಟ್ಯಾಂಡ್ , ಹಳೆ ಬಸ್ಟ್ಯಾಂಡ್ , ಹಳಸಂತೆ - ಮಾರುಕಟ್ಟೆಯ ಹತ್ತಿರದ ಟೀ ಸ್ಟಾಲ್ ಮಧ್ಯೆ , ಮಂಗಳವಾಡದ ರೈನ್ ಗೇಜ್ ಬಡಾವಣೆ , ಪಳವಳ್ಳಿ ಈ ಎಲ್ಲಾ ಪ್ರದೇಶಗಳಿಂದ ಮಟ್ಟಾ ಬೀಟರ್‌ಗಳು ಲಕ್ಷಾಂತರ ಹಣ ವಸೂಲ ಮಾಡುತ್ತಿದ್ದಾರೆ .
ಪ್ರತಿದಿನ ರಾತ್ರಿ 8 ಗಂಟೆಗೆ ಕರಾರುವಾಕ್ಕಾಗಿ ಮಟ್ಕಾ ಕೇಂದ್ರಗಳಿಗೆ ಹಣ ಸೇರುತ್ತಿದೆ ಎಂದು ತಾಲ್ಲೂಕಿನಾದ್ಯಂತ ನಿರಂತರವಾಗಿ ಮಟ್ಕಾ ದಂಧೆ ನಡೆಯುತ್ತಿದ್ದು , ಪೋಲೀಸ್ ಇಲಾಖೆಯ ಕೆಲವೊಂದು ಸಿಬ್ಬಂದಿಯೆ ದಂಧೆಕೋರರಿಗೆ ದಾಳಿಯ ವರ್ತಮಾನ ನೀಡಿ , ದಂಧೆಯಲ್ಲಿ ತೊಡಗಿರುವ ಆಟಗಾರರೊಂದಿಗೆ ಶಾಮೀಲಾಗಿದ್ದಾರೆ . ಪೋಲೀಸರೆ ಮೊಬೈಲ್ ಮೂಲಕ ಮಾಹಿತಿ ನೀಡಿ , ದಂಧೆಕೋರರು ಪರಾರಿಯಾಗಲು ಅನುವು ಮಾಡಿಕೊಡುತ್ತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ .
ಇಂತಹ ಅವ್ಯವಸ್ಥೆಯಿಂದ ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ಮತ್ತು ಇಸ್ಪೀಟ್ ದಂಧೆ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂಬುದು ನಾಗರಿಕರ ಮಾತಾಗಿದೆ . ತಾಲ್ಲೂಕು ಆಂಧ್ರದ ಗಡಿ ಭಾಗದಲ್ಲಿ ಇದ್ದು , ಆಂಧ್ರ ಪ್ರದೇಶದಿಂದಲೂ ಮಟ್ಕಾ ಮತ್ತು ಇಸ್ಪೀಟ್ ಆಡಲು ಜನತೆ ಬರುತ್ತಿದ್ದು , ದೊಮ್ಮತಮರಿ ಗಡಿಯಲ್ಲಿ ವೆಂಕಟಮ್ಮನಹಳ್ಳಿ , ಲಿಂಗದಹಳ್ಳಿ , ಅರಸಿಕೆರೆ , ಜಂಜೂರಾಯನ ಭಾಗದಲ್ಲಿ ನಿರಂತರ ಇಸ್ಪೀಟ್ ದಂಧೆ ನಡೆಯುತ್ತಿದೆ .