ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರಿನಲ್ಲಿ ಕುಳಿತಿದ್ದ ಬಿಜೆಪಿ ನಾಯಕನ ಪುತ್ರ ಮೇಲೆ ಕಚ್ಚಾ ಬಾಂಬ್ ಎಸೆದಿದ್ದಾರೆ. ಬಳಿಕ ಅಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ. ಇತ್ತ ಕೂದಲೆಳೆ ಅಂತರದಲ್ಲಿನಾಯಕನ ಪುತ್ರ ಪಾರಾಗಿದ್ದಾರೆ. 

ಪ್ರಯಾಗರಾಜ್(ಏ.07): ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಪದೇ ಪದೇ ಚರ್ಚೆಯಾಗುತ್ತಿದೆ. ಹಾಡಹಗಲೇ ಶೂಟೌಟ್, ಹತ್ಯೆ ನಡೆಯುತ್ತಿದೆ. ಇದನ್ನು ಮಟ್ಟಹಾಕುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದರಂತೆ ಮಾಫಿಯಾ, ಗೂಂಡಾಗಳ ಮೇಲೆ ಎನ್‌ಕೌಂಟರ್ ಅಸ್ತ್ರ ಪ್ರಯೋಗಿಸಿದ್ದಾರೆ. ಇದೀಗ ಪ್ರಯಾಗ್‌ರಾಜ್‌ನ ಬಿಜೆಪಿ ನಾಯಕ ವಿಜಯ್ ಲಕ್ಷ್ಮಿ ಚಾಂಡೇಲ್ ಪುತ್ರನ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದಿದ್ದಾರೆ. ಕಾರಿನಲ್ಲಿ ಕುಳಿತಿದ್ದ 20 ವರ್ಷದ ವಿಧಾನ್ ಸಿಂಗ್ ಮೇಲೆ ಬಾಂಬ್ ಎಸೆದಿದ್ದಾರೆ. ತಕ್ಷಣವೇ ಕಾರಿನಿಂದ ಹೊರಬಂದ ವಿಧಾನ್ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಪ್ರಯಾಗರಾಜನ್ ರೆಸಿಡೆನ್ಶಿಯಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ವಿಧಾನ್ ಸಿಂಗ್ ಕಾರು ನಿಲ್ಲಿಸಲಾಗಿತ್ತು. ಕಾರಿನಲ್ಲೇ ಕುಳಿತಿದ್ದ ವಿಧಾನ್ ಸಿಂಗ್ ಮೇಲೆ ಬೈಕ್‌ನಲ್ಲಿ ಬಂದ ದುರ್ಷರ್ಮಿಗಳು ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಎರಡು ಬೈಕ್‌ಮೂಲಕ ದುಷ್ಕರ್ಮಿಗಳು ಆಗಮಿಸಿ ಕೈಯಿಂದ ಕಚ್ಚಾ ಬಾಂಬ್ ಎಸೆದು ಪರಾರಿಯಾಗಿದ್ದಾರೆ.

ಸುರೇಶ್‌ ರೈನಾ ಸಂಬಂಧಿಕರ ತ್ರಿವಳಿ ಹತ್ಯೆ ಕೇಸ್‌: ಕುಖ್ಯಾತ ಕ್ರಿಮಿನಲ್‌ ಎನ್‌ಕೌಂಟರ್‌ ಮಾಡಿದ ಯುಪಿ ಪೊಲೀಸ್‌

ಬಾಂಬ್ ಎಸೆದ ಬೆನ್ನಲ್ಲೇ ಎಚ್ಚೆತ್ತ ವಿಧಾನ್ ಸಿಂಗ್ ಕಾರಿನಿಂದ ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. ಜುನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿಯಲ್ಲಿ ಈ ದೃಶ್ಯಗಳು ದಾಖಲಾಗಿದೆ. ಇದೀಗ ಪ್ರಕರಣಗಳು ದಾಖಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಬೈಕ್ ಸೇರಿದಂತೆ ಇತರ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ . ಶಿವಂ ಯಾದವ್ ಸೇರಿದಂತೆ ಕೆಲವರ ಮೇಲೆ ಈ ಕೃತ್ಯದ ಹಿಂದಿನ ಕೈವಾಡ ಶಂಕೆ ವ್ಯಕ್ತವಾಗಿದೆ. ಶಿವಂ ಯಾದವ್ ಮೇಲೂ ಪ್ರಕರಣ ದಾಖಲಾಗಿದೆ.

ಉಮೇಶ್ ಪಾಲ್ ಹತ್ಯೆ ಬಳಿಕ ಗೂಂಡಾಗಳ ಸದ್ದಗಡಿಸಿದ ಯೋಗಿ ಸರ್ಕಾರ
ಉತ್ತರ ಪ್ರದೇಶದ ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಸಾಕ್ಷಿ ಉಮೇಶ್‌ ಪಾಲ್‌ರನ್ನು ಹತ್ಯೆ ಮಾಡಿದ್ದ ಇನ್ನೊಬ್ಬ ಪಾತಕಿಯನ್ನು ಸೋಮವಾರ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿದೆ. ಇದರೊಂದಿಗೆ ಇಬ್ಬರು ಆರೋಪಿಗಳು ಎನ್‌ಕೌಂಟರ್‌ನಲ್ಲಿ ಬಲಿಯಾದಂತಾಗಿದೆ. ನಸುಕಿನ 5.30ರ ಸುಮಾರಿಗೆ ಪ್ರಯಾಗರಾಜ್‌ನ ಗೋಠಿ ಹಾಗೂ ಬೇಲ್ವಾ ಪ್ರದೇಶಗಳ ಮಧ್ಯೆ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ವಿಜಯ ಚೌಧರಿ ಅಲಿಯಾಸ್‌ ಉಸ್ಮಾನ್‌ ಹತನಾಗಿದ್ದಾನೆ. ಈ ನಡುವೆ ಎನ್‌ಕೌಂಟರ್‌ ಬಗ್ಗೆ ತನಿಖೆ ನಡೆಸಬೇಕು ಎಂದು ವಿಜಯ್‌ ಪತ್ನಿ ಆಗ್ರಹಿಸಿದ್ದಾಳೆ. ಉಮೇಶ್‌ ಪಾಲ್‌ನನ್ನು ಫೆ.24ರಂದು ಐವರು ಹಂತಕರು ಗುಂಡಿಕ್ಕಿ ಸಾಯಿಸಿದ್ದರು. ಈ ಪೈಕಿ ಉಮೇಶ್‌ ಮೇಲೆ ಮೊದಲು ಗುಂಡು ಹೊಡೆದವನೇ ವಿಜಯ್‌ ಆಗಿದ್ದ. ಫೆ.27ರಂದು ಇನ್ನೊಬ್ಬ ಹಂತಕ ಅರ್ಬಾಜ್‌ನನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಉಮೇಶ್‌ ಪಾಲ್‌ ಕಿಡ್ನ್ಯಾಪ್‌ ಕೇಸ್‌: ಯುಪಿ ಗ್ಯಾಂಗ್‌ಸ್ಟರ್‌ ಅತೀಕ್ ಅಹಮದ್‌ಗೆ ಜೀವಾವಧಿ ಶಿಕ್ಷೆ