Asianet Suvarna News Asianet Suvarna News

ಹಿಂದೂ ಯುವತಿ ಮೇಲೆ ನನ್ನ ಮಗ ಅತ್ಯಾಚಾರ ನಡೆಸಿದ್ದು ನನಗೆ ಗೊತ್ತಿಲ್ಲ: ಆರೋಪಿ ಅಲ್ತಾಫ್ ತಾಯಿ ಮಾತು!

ಹಿಂದೂ ಯುವತಿ ಮೇಲೆ ನನ್ನ ಮಗ ಅತ್ಯಾಚಾರ ನಡೆಸಿದ್ದು ನನಗೆ ಗೊತ್ತಿಲ್ಲ. ಹಗಲೆಲ್ಲ ದುಡಿಯುತ್ತಾನೆ ರಾತ್ರಿ 12 ಗಂಟೆಗೆ ಬರುತ್ತಾನೆ ಎಂದು ಬಂಧಿತ ಆರೋಪಿ ಅಲ್ತಾಫ್ ತಾಯಿ ಆಯೆಷಾ ಹೇಳಿದ್ದಾರೆ.

Udupi kidnaps and rapes case altaf  mother and brother first reacts rav
Author
First Published Aug 25, 2024, 1:26 PM IST | Last Updated Aug 25, 2024, 1:26 PM IST

ಉಡುಪಿ (ಆ.25): ಮದ್ಯದಲ್ಲಿ ಮಾದಕ ವಸ್ತು ನೀಡಿ 21 ವರ್ಷದ ಹಿಂದೂ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ತಾಫ್ ಬಂಧಿತ ಆರೋಪಿಯಾಗಿದ್ದು, ಹಿಂದೂ ಸಂಘಟನೆಗಳು ಇದು ಅತ್ಯಾಚಾರ ಪ್ರಕರಣವಲ್ಲ. ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿವೆ. 

ಈ ಬಗ್ಗೆ ಆರೋಪಿ ಅಲ್ತಾಫ್ ತಾಯಿ ಆಯಿಷಾ ಏಷಿಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ದುಡಿಯುತ್ತಾನೆ ರಾತ್ರಿ 12 ಗಂಟೆಗೆ ಬರುತ್ತಾನೆ. ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಪೊಲೀಸರು ನಮ್ಮ ಬಳಿ ಏನೂ ಕೇಳಿಲ್ಲ. ನಮ್ಮ ಊರು ತೀರ್ಥಹಳ್ಳಿ. ನನ್ನ ಮಗ ಮರಳಿನ ವ್ಯಾಪಾರ ಮಾಡುತ್ತಿದ್ದಾನೆ. ಮದುವೆಯಾಗಿದೆ. ಎರಡು ಮಕ್ಕಳು ಇದ್ದಾರೆ.  ಘಟನೆ ನಡೆದ ಮೇಲೆ ನಾವು ಪೊಲೀಸ್ ಠಾಣೆಗೆ ಹೋದಾಗ ಮತ್ತೆ ಫೋನ್ ಮಾಡುತ್ತೇವೆ ಎಂದಿದ್ದಾರೆ. ಮಗನನ್ನ ಒಮ್ಮೆ ಬಿಡಿಸಿ ತರಬೇಕು. ಮಗ ಅತ್ಯಾಚಾರ ಮಾಡಿದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದ ಆರೋಪಿ ತಾಯಿ ಆಯಿಷಾ ಹೇಳಿದ್ದಾರೆ.

12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ, ಸ್ಥಳೀಯರಿಂದ ಕಾಮುಕನಿಗೆ ಧರ್ಮದೇಟು!

ಇನ್ನು ಅತ್ಯಾಚಾರ ಘಟನೆ ಬಗ್ಗೆ ಅಲ್ತಾಫ್ ಸಹೋದರ ಕೂಡ ಪ್ರತಿಕ್ರಿಯೆ ನೀಡಿದ್ದು, ನನ್ನ ತಮ್ಮ ಅಲ್ತಾಫ್ ಸಿಗರೇಟು ಕೂಡ ಸೇದುತ್ತಿರಲಿಲ್ಲ. ಗೆಳೆಯರು ಒತ್ತಾಯ ಮಾಡಿ ಅವನಿಗೆ ದುಶ್ಚಟ ಕಲಿಸಿದ್ದಾರೆ. ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ.  ಅವನು ಏನು ತಿನ್ನುವುದಿಲ್ಲ, ಏನೂ ಮಾಡುವುದಿಲ್ಲ. ಜಬರ್ದಸ್ತ್ ಅಲ್ಲಿ ಜೊತೆಗಿದ್ದವರು ಅವನನ್ನು ಹಾಳು ಮಾಡಿದ್ದಾರೆ. ನಾನು ಅವನ ತಮ್ಮನಾಗಿ ಹೇಳುತ್ತೇನೆ ಅವನಿಗೆ ಯಾವುದೇ ಚಟ ಇರಲಿಲ್ಲ ಎಂದ ಸಹೋದರ.

Latest Videos
Follow Us:
Download App:
  • android
  • ios