Asianet Suvarna News Asianet Suvarna News

12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ, ಸ್ಥಳೀಯರಿಂದ ಕಾಮುಕನಿಗೆ ಧರ್ಮದೇಟು !

ಡ್ರಾಪ್ ಕೊಡುವ ನೆಪದಲ್ಲಿ ಕಾಮುಕನೋರ್ವ 12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದಿದೆ.

A man attempted to rape school girl incident happened in rayabhag at belagavi district rav
Author
First Published Aug 25, 2024, 12:40 PM IST | Last Updated Aug 25, 2024, 12:40 PM IST

ಬೆಳಗಾವಿ (ಆ.25): ಡ್ರಾಪ್ ಕೊಡುವ ನೆಪದಲ್ಲಿ ಕಾಮುಕನೋರ್ವ 12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದಿದೆ.

ಸುನೀಲ್ ದೀಪಾಳೆ ಎಂಬಾತನಿಂದ ಪೈಶಾಚಿಕ ಕೃತ್ಯ. ರಾಯಭಾಗ ರೈಲ್ವೆ ಸ್ಟೇಷನ್ ಕೈರಕೋಡಿ ನಿವಾಸಿಯಾಗಿರುವ ಆರೋಪಿ. ಬಾಲಕಿ ಪಟ್ಟಣದ ಕಂಚರವಾಡಿ ರೋಡ್ ಕಡೆಯಿಂದ ತೆರಳುತ್ತಿದ್ದ ವೇಳೆ ಬೈಕ್ ಮೇಲೆ ಅದೇ ರಸ್ತೆಯಲ್ಲಿ ಬಂದಿದ್ದ ಕಾಮುಕ. ಈ ವೇಳೆ ಬಾಲಕಿ ಒಂಟಿಯಾಗಿರುವುದು ಕಂಡು ಬೈಕ್ ನಿಲ್ಲಿಸಿದ್ದಾನೆ. ಮನೆಯವರಿಗೆ ಡ್ರಾಪ್ ಕೊಡುತ್ತೇನೆ ಬಾ ಎಂದು ಬಾಲಕಿಗೆ ಪುಸಲಾಯಿತಿ ಬೈಕ್ ಮೇಲೆ ಹತ್ತಿಸಿಕೊಂಡಿರುವ ಕಾಮುಕ. ಬಳಿಕ ಹೇಳಿದ ಜಾಗಕ್ಕೆ ಡ್ರಾಪ್ ಕೊಡದೇ ಬಾಲಕಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಯಾದಗಿರಿಯಲ್ಲಿ ಸದ್ದಿಲ್ಲದೇ ಬೇರುತಿದೆಯಾ ಮತಾಂತರ ಜಾಲ? ವಾರದಲ್ಲಿ ಎರಡನೇ ಮತಾಂತರಕ್ಕೆ ಯತ್ನ!

ಬಾಲಕಿಯ ಕಿರುಚಾಟ ಕೇಳಿದ ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ತೆರಳಿ ಕಾಮುಕನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು. ಬಾಲಕಿ ಮೇಲೆ ಅತ್ಯಾಚಾರ ಯತ್ನ ಸಂಬಂಧ ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Videos
Follow Us:
Download App:
  • android
  • ios