ಮಂಚದ ಮೇಲೆ ಮಲಗಿದ್ದಕ್ಕೆ ಮಗುವಿನ ಮೇಲೆ ಹಲ್ಲೆ ಕೇಸ್; ತಾಯಿ ಹಾಗೂ ಪ್ರಿಯಕರನ ಜಾಮೀನು ಅರ್ಜಿ ವಜಾ

ಮೂರೂವರೆ ವರ್ಷ ಮಗುವಿನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.

Udupi child assault case The court rejected the bail application of the accused rav

ಉಡುಪಿ (ನ.3): ಮೂರೂವರೆ ವರ್ಷ ಮಗುವಿನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.

ಪೂರ್ಣಪ್ರಿಯಾ ಮತ್ತು ಆಕೆಯ ಪ್ರಿಯಕರ ಸುಹೇಲ್ ಮಗುವಿನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು. ಸೆ.13ರಂದು ಉಡುಪಿ  ಜಿಲ್ಲೆಯ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನೇ ತಾಯಿ, ಅನಾರೋಗ್ಯದ ಕಾರಣ ನೀಡಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಮಗುವಿನ ಮೇಲಾದ ಗಾಯದ ಬಗ್ಗೆ ತಾಯಿ ಪೂರ್ಣ ಪ್ರಿಯಾ ಯಾವುದೇ ಮಾಹಿತಿ ನೀಡಿರಲಿಲ್ಲ. ಮಗುವಿನ ಮೇಲಾದ ಗಾಯಗಳಿಂದ ಅನುಮಾನಗೊಂಡ ಜಿಲ್ಲಾ ಆಡೋಗ್ಯಾಧಿಕಾರಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.  ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿತ್ತು.  ಚಿಕಿತ್ಸೆ ಪಡೆದು ಚೇತರಿಸಿಕೊಂಡ ಮೂರುವರೆ ವರ್ಷದ ಮಗುವಿನ ವಿಚಾರಣೆ ನಡೆಸಿದ್ದ ಅಧಿಕಾರಿಗಳು. ವಿಚಾರಣೆ ಬಳಿಕ ಮಗುವಿನ ಮೇಲೆ ತಾಯಿ ಹಾಗೂ ಪ್ರಿಯಕರ ಹಲ್ಲೆ ನಡೆಸಿರುವ ವಿಚಾರ ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಅಮಾಸೆಬೈಲು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮೊದಲಿಗೆ ಮಗು ಜಾರಿಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದ ತಾಯಿ ಪೂರ್ಣ ಪ್ರಿಯಾ ಆದರೆ ತೀವ್ರ ವಿಚಾರಣೆ ಬಳಿಕ ಹಲ್ಲೆ ನಡೆಸಿರುವುದು ಒಪ್ಪಿಕೊಂಡಿದ್ದರು.

ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಣಿ ನೇಣು ಬಿಗಿದು ಆತ್ಮ*ತ್ಯೆ

ಪ್ರಿಯಕರನ ಜೊತೆ ಚಕ್ಕಂದಕ್ಕೆ ಮಗು ಅಡ್ಡಿ:

ಪೂರ್ಣ ಪ್ರಿಯಾಳ ಗಂಡ ಇತ್ತೀಚೆಗಷ್ಟೆ ನಿಧನರಾಗಿದ್ದರು. ಆ ಬಳಿಕ ಪ್ರಿಯಕರ ಸುಹೇಲ್‌ ಜೊತೆಗೆ ನಿಕಟ ಸಂಪರ್ಕದಲ್ಲಿದ್ದ ಪೂರ್ಣಪ್ರಿಯಾ. ಆದರೆ ಪ್ರಿಯಕರ ಬಂದ ವೇಳೆ ಮಗು ಮಂಚದ ಮೇಲೆ ಮಲಗಿದೆ. ಇದರಿಂದ ಕೋಪಗೊಂಡಿದ್ದ ತಾಯಿ ಹಾಗೂ ಪ್ರಿಯಕರ. ಬೇರೆ ಕಡೆ ಮಲಗದೇ ಮಂಚದ ಮಲಗಿದ್ದ ಮಗು. ಇದೆ ಕಾರಣಕ್ಕೆ ತಾಯಿ ಹಾಗೂ ಪ್ರಿಯಕರ ಹೆತ್ತ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದರು. ಅ.24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಶರಣಾಗಿದ್ದ ಆರೋಪಿಗಳು. ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದರೆ ಪ್ರಕರಣದ ಗಂಭೀರತೆ ಮನಗಂಡು ಇದೀಗ ಎರಡನೆ ಹೆಚ್ಚುವರಿ ಸಿವಿಲ್‌ ಕೋರ್ಟ್‌ ಜೆಎಂಎಫ್‌ಸಿಯಲ್ಲಿ ಇಬ್ಬರ ಮಧ್ಯಂತರ ಜಾಮೀನು ಅರ್ಜಿ ನ್ಯಾಯಾಲಯ ವಜಾಗೊಳಿಸಿದೆ.

Latest Videos
Follow Us:
Download App:
  • android
  • ios