Asianet Suvarna News Asianet Suvarna News

ಪ್ರತ್ಯೇಕ ಘಟನೆ: ಕರ್ನಾಟಕದಲ್ಲಿ ಇಬ್ಬರು ನೇಣಿಗೆ ಶರಣು

ಉಡುಪಿ ಜಿಲ್ಲೆ ಪೆರ್ಡೂರಿನ ಮನೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣಾದರೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಳಕಲ್ಲು ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Two Women Committed Suicide in Karnataka grg
Author
First Published Nov 29, 2022, 1:24 PM IST

ಉಡುಪಿ/ವಿಜಯನಗರ(ನ.29):  ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದಲ್ಲಿ ಇಂದು(ಮಂಗಳವಾರ) ನಡೆದಿದೆ. ಉಡುಪಿ ಜಿಲ್ಲೆ ಪೆರ್ಡೂರಿನ ಮನೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣಾದರೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಳಕಲ್ಲು ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಉಡುಪಿ ಜಿಲ್ಲೆ ಪೆರ್ಡೂರಿನ ಮನೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ಎಂಬ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂದಿದೆ ಅಂತ ಪ್ರಿನ್ಸಿಪಾಲ್ ಬೈದಿದ್ದರು ಅಂತ ಹೇಳಲಾಗಿದೆ. ಮೃತ ದೀಪ್ತಿ ಹೆಬ್ರಿಯಲ್ಲಿರುವ ಎಸ್.ಆರ್. ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉಚಿತ ಸೀಟ್ ಪಡೆದಿದ್ದಳು ಮೃತ ವಿದ್ಯಾರ್ಥಿನಿ ದೀಪ್ತಿ. ಈ ಬಾರಿಯ ಪರೀಕ್ಷೆಯಲ್ಲಿ ದೀಪ್ತಿ 10 ಅಂಕ ಕಡಿಮೆ ಗಳಿಸಿದ್ದಳು. ಕಡಿಕೆ ಮಾರ್ಕ್ಸ್ ಗೆ ಫೈನ್ ಹಾಕುವುದಾಗಿ ಪ್ರಿನ್ಸಿಪಾಲ್ ಹೇಳಿದ್ದರಂತೆ. ಇದರಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿದ್ದಾಳೆಂದು ದೂರು ದಾಖಲಾಗಿದೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರೀತಿಸಿ ಮದುವೆಯಾದ 23 ದಿನದಲ್ಲೇ ಖಾಸಗಿ ವಾಹಿನಿಯ ಕ್ಯಾಮೆರಾಮ್ಯಾನ್ ದಂಪತಿ ನೇಣಿಗೆ ಶರಣು!

ಕೌಟುಂಬಿಕ ಕಲಹಕ್ಕೆ ಮಹಿಳೆ ನೇಣಿಗೆ ಶರಣು

ವಿಜಯನಗರ: ಕೌಟುಂಬಿಕ ಕಲಹಕ್ಕೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಳಕಲ್ಲು ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಪೂಜಾ ಬಿ.ವಿ (29) ಆತ್ಮಹತ್ಯೆಗೆ ‌ಶರಣಾದ ದುರ್ದೈವಿಯಾಗಿದ್ದಾಳೆ. 

ಕೌಟುಂಬಿಕ ಕಲಹಕ್ಕೆ ಪೂಜಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪತಿ ಜಗಳ ಮಾಡ್ತಿರೋದಾಗಿ ಮಹಿಳೆ ಪೋಷಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಇಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

Follow Us:
Download App:
  • android
  • ios