Asianet Suvarna News Asianet Suvarna News

ಪ್ರೀತಿಸಿ ಮದುವೆಯಾದ 23 ದಿನದಲ್ಲೇ ಖಾಸಗಿ ವಾಹಿನಿಯ ಕ್ಯಾಮೆರಾಮ್ಯಾನ್ ದಂಪತಿ ನೇಣಿಗೆ ಶರಣು!

ಖಾಸಗಿ ಸುದ್ದಿ ವಾಹಿನಿ ಕ್ಯಾಮೆರಾಮ್ಯಾನ್ ತನ್ನ ಪತ್ನಿ ಸಮೇತ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮನೆಯ ಎರಡು ಪ್ರತ್ಯೇಕ ಕೋಣೆಯಲ್ಲಿ ದಂಪತಿ ನೇಣಿಗೆ ಶರಣಾಗಿದ್ದಾರೆ.

newly married couple commited suicide at vijayapur muddebihal rav
Author
First Published Nov 28, 2022, 9:30 AM IST

ವಿಜಯಪುರ (ನ.28) : ಖಾಸಗಿ ಸುದ್ದಿ ವಾಹಿನಿ ಕ್ಯಾಮೆರಾಮ್ಯಾನ್ ತನ್ನ ಪತ್ನಿ ಸಮೇತ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮನೆಯ ಎರಡು ಪ್ರತ್ಯೇಕ ಕೋಣೆಯಲ್ಲಿ ದಂಪತಿ ನೇಣಿಗೆ ಶರಣಾಗಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಬಳಿ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ದಂಪತಿ ತಿಪ್ಪಣ್ಣ ಹೊಸಮನಿ (34), ಸುಜಾತಾ (30)  ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯಲ್ಲಿ ಕ್ಯಾಮೆರಾಮ್ಯಾನ್ ಆಗಿದ್ದ ತಿಪ್ಪಣ್ಣ ಮುದ್ದೇಬಿಹಾಳ ತಾಲ್ಲೂಕಿನ ಕೆಸಾಪೂರ ಸುಜಾತಾಳನ್ನ ಮನಸಾರೆ ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಕೆಲಸ ಬಿಟ್ಟು ಊರಿಗೆ ಮರಳಿದ್ದ. ನಾಲ್ಕು ತಿಂಗಳ ಹಿಂದೆಯೆಷ್ಟೇ   ಪ್ರೀತಿ ಚಿಗುರೊಡೆದಿತ್ತು. 23 ದಿನಗಳ ಹಿಂದೆಯಷ್ಟೇ  ಮದುವೆಯಾಗಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ತಿಂಗಳೊಳಗೇ ನೇಣಿಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. 

ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ: 

ನಾಲ್ಕು ತಿಂಗಳ ಹಿಂದೆಯೆಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಸುಖವಾಗಿರಬೇಕಿತ್ತು. ಆದರೆ ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಕುಟುಂಬದವರ ವಿರೋಧವಿತ್ತೆ? ಬೆದರಿಕೆ ಇತ್ತೇ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ. ಸ್ಥಳಕ್ಕೆ ಮುದ್ದೇಬಿಹಾಳ ಐಪಿಎಸ್ ಆರೀಫ್‌ ಮುಶಾಪುರಿ ಭೇಟಿ, ಸ್ಥಳ ಪರಿಶೀಲನೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

ಗದಗ: ಆಂಟಿ ಮೋಹಕ್ಕೆ ಸಿಲುಕಿದ ರೌಡಿಶೀಟರ್: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಪಾಲಿಗೆ ವಿಲನ್!

Follow Us:
Download App:
  • android
  • ios