Asianet Suvarna News Asianet Suvarna News

Cybercrime; ಬಿಟ್ ಕಾಯಿನ್ ನಡುವೆ ಟಿಬೇಟಿಯನ್ ವಂಚಕರ ಬಂಧನ

* ನಿಷೇಧಿತ ಚೀನಾ ಆಪ್ ಬಳಸಿ ಹಣ ಲಪಟಾಯಿಸುತ್ತಿದ್ದ ಟಿಬೇಟ್ ಪ್ರಜೆಗಳ ಬಂಧನ

* ಮಂಗಳೂರು CEN ಪೊಲೀಸರಿಂದ ಇಬ್ಬರು ಟಿಬೇಟ್ ಪ್ರಜೆಗಳ ಬಂಧನ

* ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಬಂಧನ

* ಮುಂಡಗೋಡು ಟಿಬೇಟಿಯನ್ ಕ್ಯಾಂಪ್ ನಿವಾಸಿಗಳು

Two Tibetans held for credit card fraud in Mangaluru mah
Author
Bengaluru, First Published Nov 11, 2021, 9:20 PM IST

ಮಂಗಳೂರು(ನ. 11) ರಾಜ್ಯದಲ್ಲಿ ಒಂದು ಕಡೆ ಬಿಟ್ ಕಾಯಿನ್ (Bitcoin scam)ಹಗರಣ ದೊಡ್ಡ ಸುದ್ದಿ ಮಾಡುತ್ತಲೇ ಇದೆ. ಈ ನಡುವೆ ನಿಷೇಧಿತ ಚೀನಾ(China) ಆಪ್ ಬಳಸಿ ಹಣ ಲಪಟಾಯಿಸುತ್ತಿದ್ದ ಟಿಬೇಟ್ (Tibetans)ಪ್ರಜೆಗಳ ಬಂಧನವಾಗಿದೆ.

ಮಂಗಳೂರು(Mangaluru) CEN ಪೊಲೀಸರಿಂದ ಇಬ್ಬರು ಟಿಬೇಟ್ ಪ್ರಜೆಗಳ ಬಂಧನವಾಗಿದೆ. ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಎಂಬುವರನ್ನು ಬಂಧಿಸಲಾಗಿದೆ. ಇವರು  ಮುಂಡಗೋಡು ಟಿಬೇಟಿಯನ್ ಕ್ಯಾಂಪ್ ನಿವಾಸಿಗಳು.

Mobiwik wallet app, Wechat, Redpack ಆಪ್ ಬಳಸಿ ಚೀಟಿಂಗ್ ಮಾಡುತ್ತಿದ್ದರು. ಕ್ರೆಡಿಟ್ ಕಾರ್ಡ್ ಕ್ಯಾನ್ಸಲೇಶನ್ ಮಾಡಿಸಲು ಮನವಿಯ ಮಾಡಿದವರಿಗೆ ಕರೆ ಮಾಡುತ್ತಿದ್ದ ಟಿಬೇಟಿಗಳು ಕ್ಯಾನ್ಸಲೇಷನ್ ಗೆ ಒಟಿಪಿ ಬರುತ್ತೆ ಅಂತಾ ಒಟಿಪಿ ಪಡೆದು ವಂಚನೆ ಮಾಡುತ್ತಿದ್ದರು.

ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? ಹ್ಯಾಕರ್ ಶ್ರೀಕಿ ರೋಚಕ ಇತಿಹಾಸ

ಅತ್ತಾವರದ ಅಲೆಕ್ಸಾಂಡರ್ ಎಂಬುವರ ಅಕೌಂಟ್ ನಿಂದ 112000 ಹಣ ವರ್ಗಾವಣೆಯಾಗಿತ್ತು. ಉತ್ತರ ಪ್ರದೇಶ, ಮಹಾರಾಷ್ಟ್ರ ಮೂಲದ ಬಹಳಷ್ಟು ಅಕೌಂಟ್ ನಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿಯೂ ಇತ್ತು. ಇಂಡಿಯನ್ ಕರೆನ್ಸಿಯನ್ನು ಟಿಬೇಟ್ ಕರೆನ್ಸಿಯನ್ನಾಗಿ ಕನ್ವರ್ಟ್ ಮಾಡುವುದರಲ್ಲಿಯೂ ನಿಸ್ಸೀಮರಾಗಿದ್ದರು.

ನಿಮಗೆ ಲಾಟರಿ ಬಂದಿದೆ, ನಿಮ್ಮ ಖಾತೆಯ ಕೆವೈಸಿ ಮಾಡಬೇಕಿದೆ,  ನೀವು ಬಹುಮಾನ ಗೆದ್ದಿದ್ದೀರಿ, ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗ್ಇದೆ ಹೀಗೆ ಹಲವಾರು ಕಾರಣಗಳನ್ನು ನೀಡಿ ಕರೆ ಮಾಡುವ ಕಿರಾತಕರು ನಿಮ್ಮಿಂದ ಒಟಿಪಿ ಪಡೆದುಕೊಂಡು ವಂಚನೆ ಮಾಡುತ್ತಾರೆ. ಆನ್ ಲೈನ್ ಜಮಾನದಲ್ಲಿ ಎಷ್ಟು ಎಚ್ಚರದಿಂದ ಇದ್ದರೂ ಸಾಲದು. 

 ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಅವರ ಇ-ಮೇಲ್‌ ಐಡಿಯನ್ನು ಹ್ಯಾಕ್‌ ಮಾಡಿದ ಕಿಡಿಗೇಡಿಗಳು, ಬಿದರಿ ಅವರ ಹೆಸರಿನಲ್ಲಿ ಸ್ನೇಹಿತರಿಗೆ ಮೇಲ್‌ ಕಳುಹಿಸಿ 25 ಸಾವಿರ ವಸೂಲಿ ಮಾಡಿದ್ದರು. ಇದಾದ ಕೆಲವೇ ದಿನದಲ್ಲಿ ಶಂಕರ್ ಬಿದರಿ ಅವರಿಂದ ಓಟಿಪಿ ಪಡೆದುಕೊಂಡು ಎಂಭತ್ತು ಸಾವಿರ ಮೋಸ ಮಾಡಿದ್ದರು,.

ಪಾನ್ ಕಾರ್ಡ್(PAN Card)ನಂ. ಲಿಂಕ್  ಮಾಡಬೇಕೆಂದು ಬಿದರಿಗೆ ಕರೆ ಮಾಡಿದ್ದರು.  ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್(Bank) ಸ್ಥಗಿತವಾಗುವುದಾಗಿ ತಿಳಿಸಿದ್ದರು. ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಟಿಪಿ ನಂ. ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿತ್ತು.

 

Follow Us:
Download App:
  • android
  • ios