ರಕ್ಷ ಬಂಧನ ಹಬ್ಬ ಆಚರಿಸಿ ಮನೆಗೆ ಮರಳುತ್ತಿದ್ದ ಇಬ್ಬರ ಸಹೋದರಿಯರ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ.  ಈ ಪ್ರಕರಣ ಸಂಬಂದ ಬಿಜೆಪಿ ನಾಯಕನ ಪುತ್ರ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯ್‌ಪುರ್(ಸೆ.02) ರಕ್ಷಾ ಬಂಧನ ಹಬ್ಬದ ದಿನ ಘನಘೋರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬಸ್ಥರ ಮನೆಗೆ ತೆರಳಿ ರಕ್ಷಾ ಬಂಧನ ಆಚರಿಸಿ ಮರಳುತ್ತಿದ್ದ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ಚತ್ತೀಸಘಡದ ರಾಯ್‌ಪುರದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಬಿಜೆಪಿ ನಾಯಕನ ಪುತ್ರ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. 

ಇಬ್ಬರು ಸಹೋದರಿಯರು ಸಂಬಂಧಿಕರ ಮನೆಗೆ ತೆರಳಿ ರಾಖಿ ಹಬ್ಬ ಆಚರಿಸಿದ್ದರು. ಸಂಜೆ ವೇಳೆ ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ಮರಳುತ್ತಿದ್ದ ವೇಳೆ ಮೂವರು ಮೂವರು ಕಾಮುಕರ ಈ ಸಹೋದರಿಯರನ್ನು ಅಡ್ಡಗಟ್ಟಿ ಮೊಬೈಲ್ ಫೋನ್, ಪರ್ಸ್ ವಶಕ್ಕೆ ಪಡೆದಿದ್ದಾರೆ. ಬಳಿಕ ರಸ್ತೆಯಲ್ಲಿ ಅಡ್ಡ ನಿಂತು ಕಿರುಕುಳ ನೀಡಲು ಆಗಮಿಸಿದ್ದಾರೆ. ಇದೇ ವೇಳೆ ಬೈಕ್ ಮೂಲಕ ಮತ್ತೆ 7 ಮಂದಿ ಸ್ಥಳಕ್ಕೆ ಆಗಮಿದ್ದಾರೆ.

ವಿವಾಹಿತ ಬೇರೊಬ್ಬಳನ್ನು ನಂಬಿಸಿ ದೈಹಿಕ ಸಂಬಂಧ ಬೆಳೆಸುವುದು ಅತ್ಯಾಚಾರ; ಬಾಂಬೆ ಹೈಕೋರ್ಟ್‌

ಇಬ್ಬರು ಸಹೋದರಿಯರನ್ನು ಹಿಡಿದು ನಿರ್ಜನ ಪ್ರದೇಶಕ್ಕೆ ಒಯ್ದು ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ. ಅತ್ಯಾಚಾರ ಹಾಗೂ ಹಲ್ಲೆಯಿಂದ ತೀವ್ರ ನರಳಿದ ಸಹದೋರಿಯರು ಮನೆಗೆ ಮರಳಿ ನಡೆದ ಘಟನೆ ವಿವರಿಸಿದ್ದಾರೆ. ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಬಿಜೆಪಿ ಮುಖಂಡನ ಪುತ್ರ ಪೂನಮ್ ಠಾಕೂರ್‌ ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಪೂನಮ್ ಠಾಕೂರ್ ಆಗಸ್ಟ್ ತಿಂಗಳಲ್ಲಿ ಜಾಮೀನಿನ ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಜೈಲು ಸೇರಿದ್ದಾನೆ. ಇತ್ತ ಇಬ್ಬರು ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚತ್ತೀಸಘಡದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಮುಖಂಡನ ಪುತ್ರ ಈ ಪ್ರಕರಣದಲ್ಲಿ ಅರೆಸ್ಟ್ ಆಗಿರುವುದು ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ.

ಸೌಜನ್ಯಾ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯ; ಕೋರ್ಟ್ ತೀರ್ಪು ಬಳಿಕ ತನಿಖೆ ನಿರ್ಧಾರ: ಪರಂ

ಚತ್ತೀಸಘಡ ಇತ್ತೀಚೆಗೆ ಭಾರಿ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಛತ್ತೀಸ್‌ಗಢದ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಬೀಡಿ ಸೇದಿದ್ದಲ್ಲದೇ, ಆದಿವಾಸಿ ವ್ಯಕ್ತಿಗೆ ಹೇಗೆ ಸೇದಬೇಕು ಎಂಬುದನ್ನು ಕಲಿಸುತ್ತಿರುವ ವಿಡಿಯೋ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಕವಾಸಿ ಲಖಮಾ ಎಂಬ ಸಚಿವರು ಬಸ್ತರ್‌ ಸಮೀಪ ಗ್ರಾಮವೊಂದರಲ್ಲಿ ತಮ್ಮ ಬೆಂಗಾವಲಿನ ಜೊತೆ ಬೀಡಿ ಸೇದುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಸುಪಾಸಿನಲ್ಲಿ ಇದ್ದ ಬುಡಕಟ್ಟು ಜನರನ್ನು ತಮ್ಮ ಸಮೀಪಕ್ಕೆ ಕರೆದು ‘ಬೀಡಿಯ ಹೊಗೆಯನ್ನು ಬಾಯಿಯಿಂದ ಒಳಗೆ ತೆಗೆದುಕೊಂಡು ಮೂಗಿನಿಂದ ಹೊರಗೆ ಬಿಡಬೇಕು’ ಎಂದು ಹೇಳಿಕೊಡುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜನರಿಂದ ಭಾರಿ ಆಕ್ರೋಶ ಕಾರಣವಾಗಿತ್ತು.

ರಾಯಪುರ: ಛತ್ತೀಸ್‌ಗಢದ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಬೀಡಿ ಸೇದಿದ್ದಲ್ಲದೇ, ಆದಿವಾಸಿ ವ್ಯಕ್ತಿಗೆ ಹೇಗೆ ಸೇದಬೇಕು ಎಂಬುದನ್ನು ಕಲಿಸುತ್ತಿರುವ ವಿಡಿಯೋ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ವಿಡಿಯೋದಲ್ಲಿ ಕವಾಸಿ ಲಖಮಾ ಎಂಬ ಸಚಿವರು ಬಸ್ತರ್‌ ಸಮೀಪ ಗ್ರಾಮವೊಂದರಲ್ಲಿ ತಮ್ಮ ಬೆಂಗಾವಲಿನ ಜೊತೆ ಬೀಡಿ ಸೇದುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಸುಪಾಸಿನಲ್ಲಿ ಇದ್ದ ಬುಡಕಟ್ಟು ಜನರನ್ನು ತಮ್ಮ ಸಮೀಪಕ್ಕೆ ಕರೆದು ‘ಬೀಡಿಯ ಹೊಗೆಯನ್ನು ಬಾಯಿಯಿಂದ ಒಳಗೆ ತೆಗೆದುಕೊಂಡು ಮೂಗಿನಿಂದ ಹೊರಗೆ ಬಿಡಬೇಕು’ ಎಂದು ಹೇಳಿಕೊಡುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜನರಿಂದ ಭಾರಿ ಆಕ್ರೋಶ ಕಾರಣವಾಗಿದೆ.