ಬೆಂಗಳೂರು; 4 ಕೋಟಿ ಮೊತ್ತದ ಚಿನ್ನ ಗಂಟು ಕಟ್ಟುತ್ತಿದ್ದಾಗಲೇ ಸಿಕ್ಕಿಬಿದ್ರು!
* ರೆಡ್ ಹ್ಯಾಂಡ್ ಆಗಿ ಸಿಕ್ಕ ಮುತ್ತೂಟ್ ಫೈನಾನ್ಸ್ ಲೂಟಿಕೋರರು
* ಲೂಟಿ ಮಾಡಿ ಗಂಟು-ಮೂಟೆ ಕಟ್ಟುತ್ತಿರೊವಾಗಲೇ ಲಾಕ್
* 4 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಖಾಕಿ
* ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದ ಘಟನೆ
ಬೆಂಗಳೂರು(ಆ. 25) ಬರೋಬ್ಬರಿ ನಾಲ್ಕು ಕೋಟಿ ರೂ. ಮೊತ್ತದ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಗಂಟು-ಮೂಟೆ ಕಟ್ಟಿಕೊಂಡು ಪರಾರಿಯಾಗಲು ಹೊರಟಿತ್ತು. ಆದರೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ಲೂಟಿ ಮಾಡಿ ಗಂಟು-ಮೂಟೆ ಕಟ್ಟುತ್ತಿರುವಾಗಲೇ ಲಾಕ್ ಆಗಿದ್ದಾರೆ. ಬಂಧಿತರಿಂದ 4 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಬೆಂಗಳೂರಿನ ಬಾಣಸವಾಡಿಯಿಂದ ಪ್ರಕರಣ ವರದಿಯಾಗಿದೆ.
ಇದೇ ಆಗಸ್ಟ್ 21 ರ ರಾತ್ರಿ ನೇಪಾಳಿ ಗ್ಯಾಂಗ್ ನಿಂದ ಕಳ್ಳತನಕ್ಕೆ ಯತ್ನ ನಡೆದಿತ್ತು. ಸುಬ್ಬಯ್ಯಪಾಳ್ಯದ ಮುತ್ತೂಟ್ ಫೈನಾನ್ಸ್ ಶೆಟರ್ ಒಡೆದು ಶಾಪ್ ನೊಳಕ್ಕೆ ಎಂಟ್ರಿ ಕೊಟ್ಟ ಖದೀಮರು 4 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ.
ಧೂಮ್ ಚಿತ್ರ ನೋಡಿ ದರೋಡೆಗೆ ಇಳಿದಿದ್ದ ಗ್ಯಾಂಗ್ ಅರೆಸ್ಟ್
ಮುತ್ತೂಟ್ ಫೈನಾನ್ಸ್ ಶಾಖೆಯ ಶೆಟರ್ ಅನ್ನು ಮೀಟಿ ಒಳಗೆ ನುಗ್ಗಿ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಲಾಕರ್ ಅನ್ನು ಒಡೆಯಲು ಯತ್ನಿಸುತ್ತಿದ್ದರು. ಲಾಕರ್ ಬಳಿ ಸೆನ್ಸಾರ್ ಅಳವಡಿದ್ದರಿಂದ ಸೆಕ್ಯುರಿಟಿ ಗಾರ್ಡ್‍ಗಳು ಒಳಗೆ ಹೋಗಿ ಲಾಕರ್ ಒಡೆಯುತ್ತಿದ್ದ ಸಂದರ್ಭದಲ್ಲಿ ಫೈನಾನ್ಸ್ ಕಂಪೆನಿಯವರಿಗೆ ಅಲಾರಾಂ ಬಡಿದುಕೊಂಡಿದೆ. ಇದನ್ನು ಅರಿತ ಸಿಬ್ಬಂದಿ ತಕ್ಷಣ ಬಾಣಸವಾಡಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕಳ್ಳರು ಒಳಗಿರಿವ ಮಾಹಿತಿ ತಿಳಿದ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಕದ್ದ ಚಿನ್ನ ಮೂಟೆ ಕಟ್ಟುತ್ತಿದ್ದ ವೇಳೆ ಬಾಣಸವಾಡಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಆಗ ರೆಡ್ ಹ್ಯಾಂಡ್ ಆಗಿ ಸೆಕ್ಯೂರಿಟಿ ಗಾರ್ಡ್ ಮತ್ತು ಇನ್ನೊಬ್ಬ ಕಳ್ಳ ಸಿಕ್ಕಿಬಿದ್ದಿದ್ದಾರೆ.
ಪ್ರಮುಖ ಆರೋಪಿ ಸೆಕ್ಯೂರಿಟಿ ಗಾರ್ಡ್, ಅಪಾರ್ಟ್ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಸಾಲಗಾರರ ಕಾಟ ತಾಳಲಾರದೆ ಮುತ್ತೂಟ್ ಫೈನಾನ್ಸ್ ನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ .