Bengaluru: ರಸ್ತೆ ಮೇಲೆ ನಡೆದು ಹೋಗ್ತಿದ್ದವರಿಗೆ ಕಾಟ ಕೊಡ್ತಿದ್ದ ಆರೋಪಿಗಳು: ವಿಡಿಯೋ ಆಧರಿಸಿ ಇಬ್ಬರ ಬಂಧನ

ವೃದ್ಧರು, ಮಹಿಳೆಯರು, ಯುವತಿಯರಿಗೆ ಕಿರುಕುಳ ಹಾಗೂ ರಸ್ತೆ ಮೇಲೆ ನಡೆದು ಹೋಗ್ತಿದ್ದವರಿಗೆ ಕಾಟ ಕೊಡ್ತಿದ್ದ ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

Two People Arrested for Harassing Case In Bengaluru gvd

ಬೆಂಗಳೂರು (ಮಾ.24): ವೃದ್ಧರು, ಮಹಿಳೆಯರು, ಯುವತಿಯರಿಗೆ ಕಿರುಕುಳ ಹಾಗೂ ರಸ್ತೆ ಮೇಲೆ ನಡೆದು ಹೋಗ್ತಿದ್ದವರಿಗೆ ಕಾಟ ಕೊಡ್ತಿದ್ದ ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೈಕ್‌ನಲ್ಲಿ ತೆರಳುತ್ತಾ ರಸ್ತೆ ಮೇಲೆ ನಡೆದು ಹೋಗ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ವಿಕೃತಿ ಮೆರೆದು ನಂತರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು. ಅದೇ ವೈರಲ್ ವಿಡಿಯೋ ಬೆನ್ನತ್ತಿದ್ದ ಬೆಂಗಳೂರು ಪೊಲೀಸರಿಗೆ ನ್ಯಾಷನಲ್ ಕಾಲೇಜು ಸುತ್ತಾಮುತ್ತ ವಿಡಿಯೋ ಮಾಡಿರೋದಾಗಿ ಗೊತ್ತಾಗಿತ್ತು. ಅಲ್ಲದೇ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಆಧರಿಸಿ ಹೇಮಂತ್ ಸೇರಿ ಮತ್ತೋರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
 


ಆರೋಪಿ ಒತ್ತೆಯಿಟ್ಟು ಸುಲಿಗೆಗಿಳಿದ 3 ಪೊಲೀಸರು ಅಂದರ್‌: ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿದ ಎಂಬ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಬಳಿಕ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ 45 ಲಕ್ಷ ರು. ಸುಲಿಗೆಗೆ ಯತ್ನಿಸಿದ ಆರೋಪದ ಮೇರೆಗೆ ಹೆಡ್‌ ಕಾನ್‌ಸ್ಟೇಬಲ್‌ ಸೇರಿದಂತೆ ಮೂವರನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಧ್ರುವನಾರಾಯಣ ಪುತ್ರಗೆ ಅನುಕಂಪ ‘ಕಾಂಗ್ರೆಸ್‌’ ಹಿಡಿಯುವುದೇ?: ಬಿಜೆಪಿಯಿಂದ ಹರ್ಷವರ್ಧನ್‌ ಸ್ಪರ್ಧೆ

ವರ್ತೂರು ನಿವಾಸಿ, ಮಾರತ್ತಹಳ್ಳಿ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಕೆ.ಎಲ್‌.ಹರೀಶ್‌, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಆದಿಗೆರೆ ಗ್ರಾಮದ ಶಬ್ಬೀರ್‌ ಖಾನ್‌ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸ ಕೋಟೆ ತಾಲೂಕಿನ ಇಂಡಿಗಿನಾಳದ ಜಾಕಿರ್‌ ಹುಸೇನ್‌ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮಾರತ್ತಹಳ್ಳಿ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ರಂಗೇಶ್‌ ಹಾಗೂ ಇತರರ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚಿಗೆ ಮಾರತ್ತಹಳ್ಳಿ ಸಮೀಪ ರಾಮಾಂಜನಿ ಎಂಬಾತನನ್ನು ಹುಲಿ ಚರ್ಮ ಮಾರಾಟದ ನೆಪದಲ್ಲಿ ವಶಕ್ಕೆ ಪಡೆದು ಪಿಎಸ್‌ಐ ರಂಗೇಶ್‌ ತಂಡ ಸುಲಿಗೆ ಯತ್ನಿಸಿತ್ತು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒತ್ತೆಯಾಗಿಟ್ಟು ಹಣ ಸುಲಿಗೆಗೆ ಸಂಚು: ಕೆಲ ದಿನಗಳ ಹಿಂದೆ ಹುಲಿ ಉಗುರು ಹಾಗೂ ಚರ್ಮ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಎಂಬ ಮಾಹಿತಿ ಮೇರೆಗೆ ರಾಮಾಂಜನಿನನ್ನು ಮಾರತ್ತಹಳ್ಳಿ ಠಾಣೆ ಪಿಎಸ್‌ಐ ರಂಗೇಶ್‌ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಹರೀಶ್‌ ತಂಡವು ವಶಕ್ಕೆ ಪಡೆಯಿತು. ಆದರೆ ಈ ಸಂಬಂಧ ಎಫ್‌ಐಆರ್‌ ದಾಖಲಿಸದ ಪೊಲೀಸರು, ರಾಮಾಂಜನಿಯನ್ನು ಜಾಕೀರ್‌ ಹುಸೇನ್‌ ಹಾಗೂ ಮಲ್ಲಪ್ಪ ಸೇರಿದಂತೆ ಇತರರ ಸಹಕಾರ ಪಡೆದು ಬೇರೆಡೆಗೆ ಒತ್ತೆಯಾಗಿಟ್ಟು ಹಣ ಸುಲಿಗೆಗೆ ಸಂಚು ರೂಪಿಸಿದ್ದರು. ಅಂತೆಯೇ ಒತ್ತೆಯಾಳು ರಾಮಾಂಜನಿಯ ಹಣೆಗೆ ಗನ್‌ ಇಟ್ಟು 45 ಲಕ್ಷ ರು. ಹಣ ಕೊಡುವಂತೆ ಪಿಎಸ್‌ಐ ರಂಗೇಶ್‌ ಧಮ್ಕಿ ಹಾಕಿದ್ದ.

ಆಗ ತನ್ನ ಬಳಿ ಹಣವಿಲ್ಲವೆಂದು ಸಂತ್ರಸ್ತ ಗೋಳಾಡಿದಾಗ ಪಿಎಸ್‌ಐ ತಂಡವು ರಾಮಾಂಜನಿ ಮೂಲಕ ಆತನ ಸ್ನೇಹಿತನಿಗೆ ಕರೆ ಮಾಡಿ ಹಣ ತರುವಂತೆ ಸೂಚಿಸಿದ್ದರು. ಈ ಅಪಹರಣದ ವಿಷಯ ತಿಳಿದು ಆತಂಕಗೊಂಡ ಸಂತ್ರಸ್ತನ ಸ್ನೇಹಿತ ಶಿವರಾಮಯ್ಯ, ಬಾಗಲೂರು ಠಾಣೆಗೆ ತೆರಳಿ ದೂರು ದಾಖಲಿಸಿದರು. ಆಗ ದೂರು ದಾಖಲಾದ ಮಾಹಿತಿ ಗೊತ್ತಾಗಿ ಭಯಗೊಂಡ ಪಿಎಸ್‌ಐ ರಂಗೇಶ್‌ ತಂಡವು, ರಾಮಾಂಜನಿಯನ್ನು ಬಂಧಮುಕ್ತಗೊಳಿಸಿ ಪರಾರಿಯಾಗಿತ್ತು. ಅಲ್ಲದೆ ತಮ್ಮ ಬಗ್ಗೆ ಮಾಹಿತಿ ನೀಡಿದರೆ ನಿನ್ನ ಸಾಯುವವರೆಗೆ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಸಂತ್ರಸ್ತನಿಗೆ ಪಿಎಸ್‌ಐ ಬೆದರಿಕೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್‌

ಮರುದಿನ ಠಾಣೆಗೆ ಆಗಮಿಸಿ ತನ್ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ರಂಗೇಶ್‌ ಹಾಗೂ ಆತನ ಸಹಚರರ ಕುರಿತು ಬಾಗಲೂರು ಪೊಲೀಸರಿಗೆ ಸಂತ್ರಸ್ತ ಹೇಳಿಕೆ ನೀಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೇಪ್ರಸಾದ್‌ ಅವರು, ಕೂಡಲೇ ಆರೋಪಿಗಳ ಬಂಧನಕ್ಕೆ ಸೂಚಿಸಿದರು. ಅಂತೆಯೇ ಹೆಡ್‌ ಕಾನ್‌ಸ್ಟೇಬಲ್‌ ಹರೀಶ್‌ ಸೇರಿ ಮೂವರ ಬಂಧನವಾಗಿದೆ. ತಪ್ಪಿಸಿಕೊಂಡಿರುವ ಪಿಎಸ್‌ಐ ರಂಗೇಶ್‌ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios