ಪಟ್ಟಣದ ಶರಾವತಿ ಸೇತುವೆ ಮೇಲಿಂದ ಓರ್ವ ಯುವಕ- ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತರಿಬ್ಬರೂ ತುಮಕೂರು ಜಿಲ್ಲೆಯವರಾಗಿದ್ದು ನೆಲಹಾಳ ನಿವಾಸಿ ದಿಲೀಪ ಶಿವರಾಜು ಎನ್‌.ಬಿ(17), ಅಮೂಲ್ಯ ಲೋಕೇಶ್‌(17) ಎಂದು ಗುರುತಿಸಲಾಗಿದೆ.

ಹೊನ್ನಾವರ (ಏ.15) : ಪಟ್ಟಣದ ಶರಾವತಿ ಸೇತುವೆ ಮೇಲಿಂದ ಓರ್ವ ಯುವಕ- ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತರಿಬ್ಬರೂ ತುಮಕೂರು ಜಿಲ್ಲೆಯವರಾಗಿದ್ದು ನೆಲಹಾಳ ನಿವಾಸಿ ದಿಲೀಪ ಶಿವರಾಜು ಎನ್‌.ಬಿ(17), ಅಮೂಲ್ಯ ಲೋಕೇಶ್‌(17) ಎಂದು ಗುರುತಿಸಲಾಗಿದೆ.

ರಾತ್ರಿ ವೇಳೆ ಹಾಗೂ ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಇಬ್ಬರೂ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ. ಇಬ್ಬರು ಪ್ರೇಮಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಶವವು ಶರಾವತಿ ನದಿ(Sharavati river)ಗೆ ಹೊಂದಿಕೊಂಡಿರುವ ಟೊಂಕ ಸಮೀಪ ಶುಕ್ರವಾರ ರಾತ್ರಿಯೇ ಸಿಕ್ಕಿದ್ದು, ಇನ್ನೊಂದು ಶವ ಶನಿವಾರ ಪತ್ತೆಯಾಗಿದೆ. ಈ ಶವಕ್ಕಾಗಿ ಶೋಧ ಕಾರ್ಯ ರಾತ್ರಿಯಿಡೀ ಮುಂದುವರೆದಿತ್ತು. ಸೇತುವೆ ಪಕ್ಕ ಇಬ್ಬರ ಚಪ್ಪಲಿ ಹಾಗೂ ಬ್ಯಾಗ್‌, ಬಸ್‌ ಪ್ರಯಾಣದ ಟಿಕೆಟ್‌ ಪತ್ತೆ ಆಗಿದ್ದವು. ಘಟನೆ ಹಿನ್ನಲೆ ಸೇತುವೆ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಮೂಡಿಗೆರೆ ಪೊಲೀಸ್‌ ಠಾಣೆ ಮೇಲಿಂದ ಜಿಗಿಯಲು ಯತ್ನಿಸಿದ ಮಹಿಳೆ: ವ್ಯಾಜ್ಯ ಇತ್ಯರ್ಥಕ್ಕೆ ಪಟ್ಟು

ಸ್ಥಳಕ್ಕೆ ಹೊನ್ನಾವರ ಸಿಪಿಐ ಮಂಜುನಾಥ ಇ.ಓ, ಪಿಎಸೈ ಪ್ರವೀಣಕುಮಾರ, ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದರು. ಶನಿವಾರ ಇನ್ನೊಂದು ಶವ ಪತ್ತೆಯಾಗಿದೆ. ಘಟನೆಗೆ ನಿಖರ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ. ಈ ಕುರಿತು ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿನಲ್ಲೂ ಒಂದಾದ ದಂಪತಿ

ತಿಪಟೂರು: ಹೆಂಡತಿ ಅಪಘಾತದಲ್ಲಿ ಸಾವನ್ನಪ್ಪಿದರೆ, ಗಂಡ ಪತ್ನಿಯ ಸಾವಿನ ದುಃಖವನ್ನು ಸಹಿಸಲಾರದೆ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗುವ ಮೂಲಕ ಸಾವಿನಲ್ಲೂ ದಂಪತಿಗಳು ಒಂದಾಗಿರುವ ಮನಕಲಕುವ ಘಟನೆ ತಾಲೂಕಿನ ಗಡಿಭಾಗವಾದ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.

ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಸೀಕೆರೆ ರೈಲ್ವೆ ಪೊಲೀಸ್‌ ಠಾಣೆಯ ಮಹಿಳಾ ಪೊಲೀಸ್‌ ಪೇದೆ ಸುಧಾರಾಣಿ (28) ಮೃತಪಟ್ಟದುರ್ದೈವಿ. ಇವರು ಕಳೆದೆರಡು ವರ್ಷಗಳ ಹಿಂದೆ ಅರಸೀಕೆರೆ ತಾಲೂಕಿನ ಕೆಂಕೆರೆ ಗ್ರಾಮದ ಚೇತನ್‌ (32) ಎಂಬುವವರೊಂದಿಗೆ ವಿವಾಹವಾಗಿದ್ದರು. ಪತಿ ಚೇತನ್‌ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ರಜೆಗೆಂದು ತಮ್ಮ ಗ್ರಾಮಕ್ಕೆ ಬಂದಿದ್ದರು. ದಂಪತಿಗಳಿಬ್ಬರು ಕೆಂಕೆರೆಯಲ್ಲಿ ನಡೆದ ಜಾತ್ರೆಯನ್ನು ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುವಾಗ ತಾಲೂಕಿನ ಚಿಂದೇನಹಳ್ಳಿ ಗಡಿ ಬಳಿ ಬೈಕ್‌ ಅಪಘಾತದಲ್ಲಿ ಸುಧಾರಣೆಯವರ ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತಿ ಚೇತನ್‌ ಪತ್ನಿಯ ಸಾವಿನ ದುಃಖವನ್ನು ಸಹಿಸಲಾಗದೆ ತಮ್ಮ ಮನೆಯಲ್ಲಿಯೇ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇವರ ಅಂತ್ಯಸಂಸ್ಕಾರ ಕೆಂಕೆರೆ ಗ್ರಾಮದಲ್ಲಿ ನೆರವೇರಿತು.

ಸಾವನ್ನಪ್ಪಿದ ದಂಪತಿಗಳ ಫೋಟೋ 14-ಟಿಪಿಟಿ6ರಲ್ಲಿ ಕಳುಹಿಸಲಾಗಿದೆ.

Crime News: ಪ್ರತ್ಯೇಕ ಘಟನೆ; ನೇಣು ಬಿಗಿದು ಇಬ್ಬರು ಸಾವು

ಸಾಲ: ರೈತ ಆತ್ಮಹತ್ಯೆ

ಆನವಟ್ಟಿ: ಇಲ್ಲಿಗೆ ಸಮೀಪದ ಕಾತುವಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ ಗೌಡ (39) ಅವ​ರು ಜಮೀನು ಪಕ್ಕದ ಮರಕ್ಕೆ ನೇಣುಹಾಕಿಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ತೋಟದ ಕೊಳವೆಬಾವಿ ನೀರು ಕಡಿಮೆಯಾಗಿ ಬತ್ತುವ ಸ್ಥಿತಿ ತಲುಪಿತ್ತು. ಕೊಳವೆಯಲ್ಲಿರುವ ಅಲ್ಪಸ್ವಲ್ಪ ನೀರನ್ನು ತೋಟಕ್ಕೆ ಹಾಯಿಸಲು, ನಿರಂತರವಾಗಿ ವಿದ್ಯುತ್‌ ಸ್ಥಗಿತ ಸಮಸ್ಯೆ ಆಗು​ತ್ತಿತ್ತು. ಇದ​ರಿಂದ ಸಕಾ​ಲಕ್ಕೆ ನೀರು ಹರಿ​ಸ​ಲಾ​ಗದೇ, ಬಿಸಿಲಿನ ಬೇಗೆಗೆ ತೋಟ ಒಣಗಿಹೋಗಿದ್ದರಿಂದ ಮನನೊಂದಿದ್ದರು. ಅಲ್ಲದೇ, ಸಾಲವನ್ನೂ ಮಾಡಿದ್ದರು. ಆನವಟ್ಟಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ನಡೆಸಲಾಗಿದೆ.