ನೈತಿಕ ಪೊಲೀಸ್ ಗಿರಿ ಆರೋಪದಡಿ ಹಿಂದೂ ಕಾರ್ಯಕರ್ತರ ಬಂಧನ ಮಾಡಿದ್ದನ್ನ ಆಕ್ಷೇಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಏ.06): ನೈತಿಕ ಪೊಲೀಸ್ ಗಿರಿ (Moral Policing) ಆರೋಪದಡಿ ಹಿಂದೂ ಕಾರ್ಯಕರ್ತರ (Hindu Activists) ಬಂಧನ (Arrest) ಮಾಡಿದ್ದನ್ನ ಆಕ್ಷೇಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಬಿಜೆಪಿ (BJP) ಶಾಸಕ ಸಂಜೀವ ಮಠಂದೂರು (Sanjeeva Matandoor) ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ದ.ಕ ಜಿಲ್ಲೆಯ ಉಪ್ಪಿನಂಗಡಿ ಬಳಿ ಶಾಸಕ ಸಂಜೀವ ಮಠಂದೂರು ತಡೆದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. 

ಮನೆಯಲ್ಲಿದ್ದೇನೆ ಎಂದು ಹೇಳಿ ಶಾಸಕ ಮಠಂದೂರು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ ಬಳಿ ತಡೆದು ಧಿಕ್ಕಾರ ಕೂಗಿದ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಪರ ನಿಲ್ಲದ ಹಿನ್ನೆಲೆ ಶಾಸಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೊಂದು ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ಧೋರಣೆ ಎಂದು ಆರೋಪಿಸಿ ವಾಗ್ವಾದ ನಡೆಸಿದ್ದಾರೆ. 

ನೈತಿಕ ಪೊಲೀಸ್ ಗಿರಿ-ಇಬ್ಬರು ಅಂದರ್: ನೈತಿಕ ಪೊಲೀಸ್ ಗಿರಿ ಆರೋಪದ ಹಿನ್ನೆಲೆ ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾಲಚಂದ್ರ (35) ಮತ್ತು ರಂಜಿತ್( 31) ಬಂಧಿತ ಆರೋಪಿಗಳು. ದ‌.ಕ ಜಿಲ್ಲೆಯ ಪುತ್ತೂರು ತಾಲೂಕಿನ ಗುಂಡ್ಯ ಎಂಬಲ್ಲಿ ನಿನ್ನೆ ಸಂಜೆ ಘಟನೆ ನಡೆದಿತ್ತು. ಅನ್ಯ ಕೋಮಿನ ಆಟೋ ಚಾಲಕನ ಜೊತೆ ವೇಣೂರಿನ ಹಿಂದೂ ಯುವತಿ ಗುಂಡ್ಯಕ್ಕೆ ಬಂದಿದ್ದಳು. ಈ ಬಗ್ಗೆ ಮಾಹಿತಿ ಪಡೆದು ಜೋಡಿಯನ್ನು ತಡೆದಿದ್ದ ಹಿಂದೂ ಕಾರ್ಯಕರ್ತರು, ಹಲ್ಲೆ ನಡೆಸಿದ್ದರು.

Mangaluru: ‘ನನ್ನ ಮತ ಮಾರಾಟಕ್ಕಿಲ್ಲ’ ಎಂದು ಜನಾಂದೋಲನವಾಗಲಿ: ಸ್ಪೀಕರ್‌ ಕಾಗೇರಿ

ಹಲ್ಲೆ ಹಿನ್ನೆಲೆ ಆಟೋ ಚಾಲಕ ನಜೀರ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ತಾನು ತನ್ನ ಪ್ರಿಯತಮೆ‌ ಪೂಜಾ ಜೊತೆ ಸಂಚರಿಸುತ್ತಿದ್ದ ವೇಳೆ ತಡೆದು ಹಲ್ಲೆ ನಡೆಸಿದ್ದಾಗಿ ನಜೀರ್ ದೂರು ನೀಡಿದ್ದ. ಹೀಗಾಗಿ ನೈತಿಕ ಪೊಲೀಸ್ ಗಿರಿ ಹಿನ್ನೆಲೆ ಇಬ್ಬರನ್ನು ಬಂಧಿಸಿ ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈ ನಡುವೆ ಇದೊಂದು ಲವ್ ಜಿಹಾದ್ ಅಂತ ಹಿಂದೂ ಸಂಘಟನೆಗಳು ಆರೋಪಿಸಿವೆ.

ಅನುಮತಿ ಇಲ್ಲದೆ ದುಬೈಗೆ ಹಾರಿದ ಇನ್ಸ್‌ಪೆಕ್ಟರ್‌ ಶರೀಫ್ ಸಸ್ಪೆಂಡ್: ಅನುಮತಿ ಇಲ್ಲದೇ ವಿದೇಶಕ್ಕೆ ತೆರಳಿದ ಪೊಲೀಸ್ (Karnataka Police) ಇನ್ಸ್ಪೆಕ್ಟರ್ ಸಸ್ಪೆಂಡ್ (Suspend) ಆಗಿದ್ದಾರೆ. ಪ್ರವಾಸಕ್ಕೆ ತೆರಳುವುದಾಗಿ ಹೇಳಿ ದುಬೈಗೆ (Dubai) ತೆರಳಿದ್ದ ಸಂಚಾರ ಉತ್ತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮುಹಮ್ಮದ್ ಶರೀಫ್ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ದುಬೈ ಪ್ರವಾಸ ಮಾಡಿರುವುದು ದೃಢಪಟ್ಟಿದೆ. ಮಹಮ್ಮದ್ ಷರೀಫ್ ಅವರು ಊರಿನ ಮನೆಯಲ್ಲಿ ಅತೀ ಅಗತ್ಯದ ಧಾರ್ಮಿಕ ಕಾರ್ಯಕ್ರಮ ಇರುವುದಾಗಿ ಮಾಹಿತಿ ನೀಡಿ ರಜೆ ಪಡೆದುಕೊಂಡಿದ್ದರು.

ವಿದೇಶ ಪ್ರಯಾಣ ಮಾಡುವಾಗ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 8ರ ಉಪನಿಯಮ 2 ಕ್ಕೆ ಸಂಬಂಧಪಟ್ಟ ಇಲಾಖಾ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೇ, ಲಾಖಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತು ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ತಿಳಿಸಿದ್ದಾರೆ.

ಕಲ್ಕಡ್ಕ ಭಟ್ ಜೊತೆ ಕೇಸರಿ ಶಾಲು ಧರಿಸಿಯೇ ವಿದ್ಯಾರ್ಥಿಗಳು ಭಾಗಿ: ಸಿಎಫ್ಐ ಪ್ರತಿಭಟನೆ

ಮಂಗಳೂರು ಉತ್ತರ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಆಗಿ ಶರೀಫ್ ಕೆಲಸ ಮಾಡುತ್ತಿದ್ದರು. ಪೊಲೀಸ್ ಇಲಾಖೆ ನಿಯಮದ ಪ್ರಕಾರ ವಿದೇಶಿ ಪ್ರಯಾಣಕ್ಕೆ ಅನುಮತಿ‌ ಕಡ್ಡಾಯ ಮೂಲಗಳ ಪ್ರಕಾರ ಕ್ರಿಮಿನಲ್ ಒಬ್ಬನ ಜೊತೆ ವಿದೇಶ ಪ್ರವಾಸ ಹೋಗಿದ್ದ ಮಾಹಿತಿ ಲಭ್ಯವಾಗಿದೆ. ಪ್ರಕರಣವೊಂದರ ತನಿಖೆ ವೇಳೆ ಶರೀಫ್ ವಿದೇಶಿ ಪ್ರವಾಸದ ಮಾಹಿತಿ ಲಭ್ಯವಾಗಿದೆ.