ಕರ್ನೂಲ್(ನ. 05)   ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಯುವತಿಯರಿಬ್ಬರು ಮನೆ ಬಿಟ್ಟು ತೆರಳಿದ್ದಾರೆ.  ತೆರಳಿದ್ದು ಮಾತ್ರವಲ್ಲದೆ ಪೋಷಕರಿಗೆ ಸಂದೇಶವೊಂದನ್ನು ಕಳಿಸಿದ್ದಾರೆ. ಸಂದೇಶ ಕಂಡ ಪೋಷಕರು ಹೌಹಾರಿದ್ದಾರೆ.

ಸಂತೋಷ್ ನಗರದ ನಿವಾಸಿ  21  ವರ್ಷದ ಯುವತಿ ಮತ್ತು ನರಸಿಂಗರೆಡ್ಡಿ ನಗರ ನಿವಾಸಿ 20  ವರ್ಷದ ಯುವತಿ ಮನೆಬಿಟ್ಟು ಓಡಿಹೋಗಿದ್ದಾರೆ.  ಬಾಲ್ಯ ಸ್ನೇಹಿತರಯರಾಗಿದ್ದ ಇಬ್ಬರು  ಮೊದಲಿನಿಂದಲೂ ತುಂಬಾ ಕ್ಲೋಸ್ ಆಗಿಯೇ ಇದ್ದರು. ಯೌವನಕ್ಕೆ ಕಾಲಿಟ್ಟಾಗ ಇಬ್ಬರ ನಡುವೆ ಮತ್ತೊಂದು ಬಂಧ ಬೆಳೆದಿದೆ.

ಹುಡುಗಿಯರು ಸೆಕ್ಸ್ ಟಾಯ್ ಬಳಸುವುದು ಸೇಫಾ?

ಓರ್ವ ಯುವತಿಗೆ ಮದುವೆಯಾಗಿದ್ದರೆ ಇನ್ನೊಬ್ಬ ಯುವತಿಗೆ ವರನ ಹುಡುಕಾಟ ನಡೆಸಲಾಗುತ್ತಿತ್ತು. ಹುಡುಗರೊಂದಿಗೆ ದಾಂಪತ್ಯ ಹಂಚಿಕೊಳ್ಳಲು ಬಯಸದ ಹುಡುಗಿಯರು ಮನೆ ಬಿಟ್ಟು ಹೋಗಿದದ್ದು ಪೋಷಕರಿಗೆ ವಿಷಯ ತಿಳಸಿದ್ದಾರೆ.

ನಾವಿಬ್ಬರು ಪ್ರೇಮಿಸುತ್ತಿದ್ದು ಮದುವೆ ಮಾಡಿಕೊಳಳುತ್ತೇವೆ ಎಂದು ತಿಳಿಸಿದ್ದು ಆಘಾತಕ್ಕೆ ಒಳಗಾದ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.