ಫೆ.10ರಂದು ಯಾದಗಿರಿಗೆ ಪ್ರಜಾಧ್ವನಿ ಯಾತ್ರೆ ಆಗಮನ: ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ 'ಸಿದ್ಧು' ಅಸ್ತ್ರ!

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯಾಧ್ಯಂತ ಸಂಚರಿಸಿದ್ದರು. ಈಗ ಸಿದ್ದು ಹಾಗೂ ಡಿಕೆಶಿ ಒಂಟಿ ಪ್ರಜಾಧ್ವನಿ ಯಾತ್ರೆ ಮಾಡ್ತಿದ್ದಾರೆ.

Prajadhvani Yatra led by Siddaramaiah arrived at Yadgir on February 10th gvd

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಫೆ.09): ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯಾಧ್ಯಂತ ಸಂಚರಿಸಿದ್ದರು. ಈಗ ಸಿದ್ದು ಹಾಗೂ ಡಿಕೆಶಿ ಒಂಟಿ ಪ್ರಜಾಧ್ವನಿ ಯಾತ್ರೆ ಮಾಡ್ತಿದ್ದಾರೆ. ಉತ್ತರ ಕರ್ನಾಟಕದ 112 ಕ್ಷೇತ್ರಗಳಲ್ಲಿ ಸಿದ್ದು ಯಾತ್ರೆ ಸಂಚರಿಸಿದ್ರೆ, ಡಿಕೆಶಿ ನೇತೃತ್ವದಲ್ಲಿ ದ.ಕರ್ನಾಟಕದ 112 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಈಗ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆ ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದೆ.

ಸುರಪುರ ಹಾಗೂ ಶಹಾಪುರದಲ್ಲಿ 'ಕೈ' ಬಲಪ್ರದರ್ಶನ: ಚುನಾವಣೆ ಘೋಷಣೆಗೂ ಮುನ್ನ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದ್ದು, ವಿಜಯ ಸಂಕಲ್ಪ, ಪ್ರಜಾದ್ವನಿ, ನಡೆಸು ಮೂಲಕ ತಮ್ಮ ಅಧಿಕಾರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಆರಂಭಿಸಿದ್ದಾರೆ. ಅತ್ಯಂತ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಕಾವು ರಂಗೇರಿದೆ. ಕ್ಷೇತ್ರದ ಕೋಡೇಕಲ್ ಗ್ರಾಮಕ್ಕೆ ಕಳೆದ ತಿಂಗಳು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಜೆಪಿಗೆ ಬಲ ತುಂಬಿದ್ದರು. ಇದರ ಬೆನ್ನಲ್ಲೆ ಕಾಂಗ್ರೆಸ್ ಪಕ್ಷವೂ ಸಹ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ತಯಾರಿ ನಡೆಸಿದೆ. 

ಕಸ ವಿಲೇವಾರಿ ವಿಚಾರದಲ್ಲೂ ಪಾಲಿಟಿಕ್ಸ್: ಬೊಂಬೆನಗರಿ ಚನ್ನಪಟ್ಟಣದಲ್ಲಿ ಎದುರಾಯ್ತು ಕಸದ ಸಮಸ್ಯೆ!

ನಾಳೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಪ್ರಜಾದ್ವನಿ ಬಸ್ ಯಾತ್ರೆ ಆಗಮಿಸುತ್ತಿದೆ. ದೆವತ್ಕಲ್ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ  ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ  ಅಧಿಕಾರದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸತೀಶ್ ಜಾರಕಿಹೋಳಿ, ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕ ಘಟಾನು ಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದರಿಂದ ಸುರಪುರ ಹಾಗೂ ಶಹಾಪುರ ಕಾಂಗ್ರೇಸ್ ಗೆ ಬೂಸ್ಟ್ ಸಿಗಲಿದ್ದು, ಸೊರಗಿದ್ದ ಕಾಂಗ್ರೇಸ್ ಹವಾ ಮತ್ತೆ ಮರುಕಳಿಸುವಂತೆ ಆಗಲಿದೆ.

ಹೆಲಿಕಾಪ್ಟರ್ ಮೂಲಕ ಸಿದ್ದು ಆಗಮನ: ನಾಳೆ ಬೆಳಗ್ಗೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೇಸ್ ನಾಯಕರು ಹೆಲಿಕಾಪ್ಟರ್ ಮೂಲಕ ದೇವತ್ಕಲ್ ಗ್ರಾಮದ ಹೆಲಿಪ್ಯಾಡಗೆ 10.30ಕ್ಕೆ ಆಗಮಿಸಲಿದ್ದಾರೆ. ಮಾಜಿ ಶಾಸಕ ಹಾಗೂ 2023 ರ ಕಾಂಗ್ರೇಸ್ ಅಭ್ಯರ್ಥಿಯೆಂದೇ ಬಿಂಬಿತರಾಗಿರುವ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ನಾಯಕರನ್ನು ಸ್ವಾಗತಿಸಲಾಗುವುದು. ಅಲ್ಲಿಂದ ನೇರವಾಗಿ ರಸ್ತೆ ಮಾರ್ಗವಾಗಿ ವೇದಿಕೆಯತ್ತ ಹೋಗಲಾಗುವುದು. ಬೃಹತ್ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

20 ಎಕರೆಯಲ್ಲಿ ಪಾರ್ಕಿಂಗ್, ಊಟಕ್ಕೆ 60 ಕೌಂಟರ್ ಓಪನ್: ಇನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 60 ಊಟದ ಕೌಂಟರ್ ಗಳನ್ನು ಓಪನ್ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಿಗಿ ಬಂದೊಬಸ್ತ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಬಸ್ ಯಾತ್ರೆ ಸಮಾವೇಯದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇರುವುದರಿಂದ ಸುಮಾರು ಇಪ್ಪತ್ತು ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಯಕ್ಷಗಾನ ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ: ಸಚಿವ ಸುನೀಲ್ ಕುಮಾರ್

ಬಿಜೆಪಿಗೆ ಕಾಂಗ್ರೆಸ್ ಟಕ್ಕರ್: ಸುರಪುರ ಹಾಗೂ ಶಹಾಪುರ ಇವೆರಡು ಕ್ಷೇತ್ರಗಳು ಕಾಂಗ್ರೇಸ್-ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿವೆ. ಇವೆರಡನ್ನೂ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ-ಕಾಂಗ್ರೆಸ್ ಘಟಾನುಘಟಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರನ್ನು ಕರೆಸುತ್ತಿದ್ದಾರೆ. ಕಳೆದ ತಿಂಗಳು ಇದೇ ಸುರಪುರ ಕ್ಷೇತ್ರಕ್ಕೆ ದೇಶದ ಪ್ರಧಾನಿ ಮೋದಿ ಆಗಮಿಸಿದ್ದರು. ಈಗ ಕಾಂಗ್ರೆಸ್ ಮತ ಸೆಳೆಯಬಲ್ಲ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಇದರಿಂದ ಸುರಪುರ ಹಾಗೂ ಶಹಾಪುರ ಕ್ಷೇತ್ರಗಳನ್ನು ಎರಡು ಪಕ್ಷಗಳು ಗೆಲ್ಲಲು ಶತಾಯಗತಾಯ ಯತ್ನಸುತ್ತಿವೆ.

Latest Videos
Follow Us:
Download App:
  • android
  • ios