ಹಾಸನ: ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವು
Two drown while fishing in Hasan: ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ
ಹಾಸನ (ಜು. 16): ಮೀನು ಹಿಡಿಯಲು (Fisshing) ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ (Hasan) ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ. ಮೂವರು ಸ್ನೇಹಿತರು ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಭಾರೀ ಮಳೆ ನಡುವೆ ಗಾಳಿಯಿಂದ ಕೆರೆಯ ಮಧ್ಯದಲ್ಲಿ ತೆಪ್ಪ ಮಗುಚಿದ್ದು, ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಿಶೋರ್(38) ಮತ್ತು ರಾಜಣ್ಣ(50) ಮೃತರು.
ಕಿಶೋರ್ ಕೆರೆಯಲ್ಲಿ ಮೀನು ಸಾಕಿದ್ದು, ಮೀನು ಬೆಳೆದಿದ್ದರಿಂದ ಮಾರಾಟ ಮಾಡಲು ಮೀನು ಹಿಡಿಯಲು ಸ್ನೇಹಿತರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ತೆಪ್ಪ ಮಗುಚಿ ಇಬ್ಬರು ಮೃತಪಟ್ಟಿದ್ದಾರೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ಸಿಬ್ಬಂದಿ ಕಿಶೋರ್ ಮೃತದೇಹ ಹೊರತೆಗೆದಿದ್ದಾರೆ. ಮತ್ತೊಂದು ಮೃತ ದೇಹಕ್ಕಾಗಿ ಶೋಧ ಮುಂದುವರೆದಿದೆ.
ಇದನ್ನೂ ಓದಿ: ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಇಳಿದ ಅರ್ಚಕ ನೀರು ಪಾಲು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ
ವಿದ್ಯುತ್ ತಂತಿ ತುಳಿದು ಇಬ್ಬರು ರೈತರ ದುರ್ಮರಣ: ಇನ್ನು ತುಂಡಾದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೂರ ಗ್ರಾಮದಲ್ಲಿ ನಡೆದಿದೆ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ದುರಂತ ನಡೆದಿದದ್ದು, ಫಕೀರಪ್ಪ ಚಂದರಗಿ(54), ಮಹಾದೇವ ಮೇತ್ರಿ(40) ಮೃತ ದುರ್ದೈವಿಗಳು. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ