ಈಜಾಡಲು ಹೋಗಿ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಭಾನುವಾರ ಮೈಸೂರು ತಾಲೂಕಿನ ಸಾಹುಕಾರಹುಂಡಿ ಕೆರೆಯಲ್ಲಿ ನಡೆದಿದೆ. ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ (16), ಬಸವನಪುರ ನಿವಾಸಿ ಜಸ್ವಂತ್ (14) ಮೃತ ದುರ್ದೈವಿಗಳು.

ಮೈಸೂರು (ಜೂ.16): ಈಜಾಡಲು ಹೋಗಿ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಭಾನುವಾರ ಮೈಸೂರು ತಾಲೂಕಿನ ಸಾಹುಕಾರಹುಂಡಿ ಕೆರೆಯಲ್ಲಿ ನಡೆದಿದೆ.

ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ (16), ಬಸವನಪುರ ನಿವಾಸಿ ಜಸ್ವಂತ್ (14) ಮೃತ ದುರ್ದೈವಿಗಳು. ಇಂದು ಭಾನುವಾರ ಆಗಿದ್ದರಿಂದ ಇಳಿಸಂಜೆ ವೇಳೆ ಈಜಾಡಲು ಕೆರೆಗೆ ತೆರಳಿದ್ದ ಬಾಲಕರು. ಕೆರೆಯ ಆಳ ಅರಿಯದೇ ಕೆರೆಗೆ ಇಳಿದಿದ್ದಾರೆ. ಈಜಾಡಲು ಸಹ ಬಾರದ್ದರಿಂದ ಕೆರೆಯಲ್ಲಿ ಮುಳುಗಿದ್ದಾರೆ. ಆ ವೇಳೆ ಕೆರೆಯ ಸುತ್ತಮುತ್ತ ಯಾರೂ ಸುಳಿದಿಲ್ಲ. ಹೀಗಾಗಿ ಬಾಲಕರು ಕೂಗಾಡಿದರೂ ಯಾರೂ ಸಹಾಯಕ್ಕೆ ಬಂದಿಲ್ಲ.

ಘಟನೆ ಬಳಿಕ ಸ್ಥಳಕ್ಕೆ ಇಲವಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು.

ಹಾಸನದಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು