Asianet Suvarna News Asianet Suvarna News

ಕಲಬುರಗಿ: ನೀರಿನ ಗುಂಡಿಯಲ್ಲಿ ಮುಳುಗಿ ಬಾಲಕರಿಬ್ಬರು ದುರ್ಮರಣ

ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ತೀವ್ರತೆ ತಗ್ಗಿದೆ. ಆದರೆ, ಮಳೆಯ ಅನಾಹುತಗಳು ಹಾಗೇ ಮುಂದುವರಿದಿವೆ.ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸುತ್ತ ಮುತ್ತ ತೊಡಲಗಿದ್ದ ಗುಂಡಿಯಲ್ಲಿ ನಿಂತ ಮಳೆ ನೀರಲ್ಲಿ ಮುಳುಗಿ ಇಬ್ವರು ಬಾಲಕರು ಸಾವನ್ನಪ್ಪಿರುವ ದುರಂತ ಘಟನೆ ಕಲಬುರಗಿ ನಗರದಲ್ಲಿ ಭಾನುವಾರ ದುಬೈ ಕಾಲೋನಿಯಲ್ಲಿ ನಡೆದಿದೆ.

Two boys drowned in a waterhole dies at kalaburagi district rav
Author
First Published Jul 24, 2023, 7:21 AM IST

ಕಲಬುರಗಿ (ಜು.24) :  ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ತೀವ್ರತೆ ತಗ್ಗಿದೆ. ಆದರೆ, ಮಳೆಯ ಅನಾಹುತಗಳು ಹಾಗೇ ಮುಂದುವರಿದಿವೆ.ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸುತ್ತ ಮುತ್ತ ತೊಡಲಗಿದ್ದ ಗುಂಡಿಯಲ್ಲಿ ನಿಂತ ಮಳೆ ನೀರಲ್ಲಿ ಮುಳುಗಿ ಇಬ್ವರು ಬಾಲಕರು ಸಾವನ್ನಪ್ಪಿರುವ ದುರಂತ ಘಟನೆ ಕಲಬುರಗಿ ನಗರದಲ್ಲಿ ಭಾನುವಾರ ದುಬೈ ಕಾಲೋನಿಯಲ್ಲಿ ನಡೆದಿದೆ.

ದುರಂತದಲ್ಲಿ ಸಾವನ್ನಪ್ಪಿದ ಬಾಲಕರನ್ನು ಈ ಅಭಿ (11), ಅಜಯ್‌ (12) ಎಂದು ಗುರುತಿಸಲಾಗಿದೆ.

ನಿನ್ನೆ ಮದ್ಯಾಹ್ನದಿಂದ ಈ ಬಾಲಕರು ನಾಪತ್ತೆ ಆಗಿದ್ದರು, ಮನೆಯವರು ಇವರನ್ನು ಎಲ್ಲೆಡೆ ಹುಡುಕಿದರೂ ಸಿಕ್ಕಿರಲಿಲ್ಲ, ನಂತರ ಕೆಲವರು ಬಾಲಕರು ಮಳೆ ನೀರು ಸಂಗ್ರಹವಾಹಿದ್ದ ಈ ಗುಂಡಿಯ ಸುತ್ತ ಆಟ ಅಡುತ್ತಿರೋದನ್ನ ನೋಡಿದ್ದಾಗಿ ಹೇಳಿದಾಗ ಇಲ್ಲಿ ಪೊಲೀಸ್‌, ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಟ ಶುರು ಮಾಡಿದ್ದರು.

ಕೆಆರ್‌ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಮೊದಲು ಅಭಿ ಎಂಬ ಬಾಲಕನ ಶವ ಪತ್ತೆ ಆಯ್ತು, ನಂತರ ಶೋಧ ಕಾರ್ಯ ಹಾಗೆಯೇ ಮುಂದುವರಿಸಿದಾಗ ಇಂದು ಇನ್ನೋರ್ವ ಬಾಲಕನ ಶವ ಕೂಡಾ ದೊರಕಿದೆ.

ಇಲ್ಲಿ ಓವರ್ಹೆಡ್‌ ನೀರಿನ ಟ್ಯಾಂಕ್‌ ನಿರ್ಮಿಸಲಾಗುತ್ತಿತ್ತು. ನೀರಿನ ಟ್ಯಾಂಕ್‌ ಸುತ್ತಮುತ್ತ 15 ಅಡಿ ಗುಂಡಿ ತೋಡಲಾಗಿತ್ತು. ಮಳೆ ನೀರಿನಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ನಿನ್ನೆ ಮಧ್ಯಾನದಿಂದ ನಾಪತ್ತೆಯಾಗಿದ್ದ ಬಾಲಕರು ಈ ಗುಂಡಿಯಲ್ಲಿ ಶವವಾಗಿ ಪತ್ತೆ ಆಗಿದ್ದಾರೆ, ಈ ಬಾಲಕರ ಮನೆಗಳಲ್ಲಿ ಬಂಧುಗಳು, ಪೋಷಕರು ಎಲ್ಲರ ದುಃಖದ ಕಟ್ಟೆಒಡೆದಿತ್ತು.

ಆಟ ಆದಳು ಹೋದವರು ಹೀಗೆ ಸಾವನ್ನು ಅಪ್ಪಿರೋದು ಕುಟುಂಬದಲ್ಲಿ, ಪೋಷಕರಿಗೆ ಭಾರಿ ಅಘಾತ ಉಂಟು ಮಾಡಿದೆ. ಮೃತ ಬಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹ ಕೇಳಿ ಬಂದಿದೆ. ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತ ಪೊಲೀಸ್‌ ಆಯುಕ್ತರ ಭೇಟಿ ನೀಡಿದ್ದಾರೆ.

ಅಪಾಯಕಾರಿ ಸ್ಥಳದಲ್ಲಿ ರೀಲ್ಸ್‌ ಮಾಡುವವರೇ ಇಲ್ನೋಡಿ: ನದಿಯಲ್ಲಿ ಮುಳುಗಿ ಬಲಿಯಾದ 3 ಬಾಲಕರು

ಸರ್ಕಾರದಿಂದ ಎರಡು ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

ವಿಜಯಪುರ: ಕೃಷಿಹೊಂಡದಲ್ಲಿ ಬಿದ್ದ ತೆಂಗಿನಕಾಯಿ ತೆಗೆಯಲು ಹೋಗಿ ಮಕ್ಕಳು ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮದಲ್ಲಿ ನಡೆದಿದೆ. ಪ್ರಮೋದ ಬಿಲೂರ (12), ಸಂತೋಷ ಬಿಲೂರ (10) ಮೃತಪಟ್ಟಿರುವ ಮಕ್ಕಳು. ಬಾಲಕರು ಕೃಷಿಹೊಂಡದಲ್ಲಿ ಬಿದ್ದಿರುವ ತೆಂಗಿನಕಾಯಿ ತೆಗೆಯಲು ಹೋದಾಗ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸ್‌ ಠಾಣಾ ಪೊಲೀಸರು ಭೇಟಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios