Asianet Suvarna News Asianet Suvarna News

ಅಪಾಯಕಾರಿ ಸ್ಥಳದಲ್ಲಿ ರೀಲ್ಸ್‌ ಮಾಡುವವರೇ ಇಲ್ನೋಡಿ: ನದಿಯಲ್ಲಿ ಮುಳುಗಿ ಬಲಿಯಾದ 3 ಬಾಲಕರು

ಬಿಹಾರದ ಮೋತಿಹಾರಿಯ ಸಿಕ್ರಾನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕನಿಷ್ಠ ಮೂವರು ಹದಿಹರೆಯದವರು ತಮ್ಮ ನಾಲ್ವರು ಸ್ನೇಹಿತರು ವಿಡಿಯೋ ರೀಲ್ಸ್‌ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

3 teens drown as friends make reels in bihar s motihari ash
Author
First Published Jul 5, 2023, 7:42 PM IST

ಮೋತಿಹಾರಿ (ಜುಲೈ 5, 2023): ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗ್ತಾನೇ ಇದೆ. ಅದರಲ್ಲೂ, ಅಪ್ರಾಪ್ತ ಬಾಲಕ - ಬಾಲಕಿಯರು ಸಹ ಹೆಚ್ಚು ಸಮಯ ಮೊಬೈಲಲ್ಲೇ ಮುಳುಗಿರುತ್ತಾರೆ. ಗೇಮ್ಸ್, ಸಾಮಾಜಿಕ ಜಾಲತಾಣ ಬಳಕೆ, ಫೋಟೋ, ವಿಡಿಯೋ, ರೀಲ್ಸ್ ತೆಗೆಯೋ ಅಭ್ಯಾಸ ಹೆಚ್ಚಿರುತ್ತದೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಿ ಅಥವಾ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿರುವ ಉದಾಹರಣೆಯನ್ನು ನೀವು ನೋಡಿರಬಹುದು ಅಥವಾ ಓದಿರಬಹುದು. ಇದೇ ರೀತಿ, ಬಿಹಾರದಲ್ಲಿ ಹದಿಹರೆಯದ ಗೆಳೆಯರು ರೀಲ್ಸ್ ತೆಗೆಯಲು ಹೋಗಿ ಮೂವರು ಪ್ರಾಣವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಬಿಹಾರದ ಮೋತಿಹಾರಿಯ ಸಿಕ್ರಾನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕನಿಷ್ಠ ಮೂವರು ಹದಿಹರೆಯದವರು ತಮ್ಮ ನಾಲ್ವರು ಸ್ನೇಹಿತರು ವಿಡಿಯೋ ರೀಲ್ಸ್‌ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟಿಕುಲ್ಯಾ ಧಾಬಾ ಘಾಟ್ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಅಮೆರಿಕ ಬೀಚ್‌ನಲ್ಲಿ ಮಗನನ್ನು ರಕ್ಷಿಸುವಾಗ ಮುಳುಗಿ ಸತ್ತ ಟೆಕ್ಕಿ; ಮಗ ಅಪಾಯದಿಂದ ಪಾರು

ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಮುಫಸ್ಸಿಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವನೀಶ್ ಕುಮಾರ್, ಸೋಮವಾರ ಸ್ಥಳೀಯ ಮೀನುಗಾರರು ಮೂರು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ. ಮೃತರನ್ನು ಜಮಾಲಾ ಪ್ರದೇಶದ ಪ್ರಿನ್ಸ್ ಕುಮಾರ್ (14), ಅಚ್ಚರ್ ಕುಮಾರ್ (14) ಮತ್ತು ಮಂಜಿತ್ ಕುಮಾರ್ (15) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, ಈ ಘಟನೆ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

"ಇತ್ತೀಚಿನ ದಿನಗಳಲ್ಲಿ ಅನೇಕ ಹುಡುಗಿಯರು ಮತ್ತು ಹುಡುಗರು ಜನಪ್ರಿಯವಾಗಲು ವಿಡಿಯೋ ರೀಲ್ಸ್ ಮಾಡುವುದು ಅಥವಾ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ತಮ್ಮ ಜೀವಕ್ಕೆ ಉಂಟಾಗಬಹುದಾದ ಅಪಾಯವನ್ನೂ ಇವರು ನಿರ್ಲಕ್ಷಿಸುತ್ತಾರೆ’’ ಎಂದೂ ಎಸ್‌ಎಚ್‌ಒ ಹೇಳಿದರು.

ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಕೇರಳ ಮೂಲದ ವ್ಯಕ್ತಿ: 40 ವರ್ಷ ಶಿಕ್ಷೆ ವಿಧಿಸಿದ ಬ್ರಿಟನ್ ಕೋರ್ಟ್‌

ಇನ್ನು, ಈ ಘಟನೆಯನ್ನು ವಿವರಿಸಿದ ಮೃತ ಬಾಲಕನ ಸ್ನೇಹಿತ ಗೋಲು, ‘’ನಾವು ತಮ್ಮ ಸ್ನೇಹಿತ ಸತ್ಯಂ ಅವರನ್ನು ಭೇಟಿ ಮಾಡಲು ಟಿಕುಲಿಯಾಗೆ ಹೋಗಲು ಮೂರು ಚಕ್ರದ ವಾಹನವನ್ನು ಬಾಡಿಗೆಗೆ ಪಡೆದಿದ್ದೆವು’’ ಎಂದು ಹೇಳಿದ್ದಾನೆ. ಅಲ್ಲದೆ, ಹಳ್ಳಿಯ ನದಿ ದಡದಲ್ಲಿ ನಡೆದುಕೊಂಡು ಹೋಗಿ ಸೆಲ್ಫಿ ತೆಗೆದುಕೊಳ್ಳುವುದರ ಜೊತೆಗೆ ರೀಲ್ಸ್‌ ಮಾಡಲು ನಿರ್ಧರಿಸಿದ್ದೆವು. ಆದರೆ ಅದನ್ನು ಮಾಡುವಾಗ ನಾವು ನಮ್ಮ ಮೂವರು ಸ್ನೇಹಿತರನ್ನು ಕಳೆದುಕೊಂಡಿದ್ದೇವೆ ಎಂದೂ ಹದಿಹರೆಯದ ಬಾಲಕ ತಿಳಿಸಿದ್ದಾನೆ. 

ಇದನ್ನೂ ಓದಿ: ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ

Follow Us:
Download App:
  • android
  • ios