Asianet Suvarna News Asianet Suvarna News

ದೇವರಿಗಿಟ್ಟ ಬಾದಾಮಿ ಕದ್ದ ಆರೋಪ: 11 ವರ್ಷದ ಬಾಲಕನ ಕಂಬಕ್ಕೆ ಕಟ್ಟಿದ ದುರುಳರು

ದೇವರಿಗಿಟ್ಟ ಬಾದಾಮಿಯನ್ನು ಕದ್ದು ತಿಂದ ಎಂದು ದೇಗುಲದ ಅರ್ಚಕ ಹಾಗೂ ಮತ್ತೋರ್ವ ಯುವಕ ಇಬ್ಬರು ಸೇರಿ 11 ವರ್ಷದ ಬಾಲಕನನ್ನು ಮರವೊಂದಕ್ಕೆ ಕಟ್ಟಿ ಹಾಕಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.

two booked for harassing 11 year old boy tied him to tree for eating almonds which offered to god akb
Author
First Published Sep 12, 2022, 10:27 AM IST

ಭೋಪಾಲ್‌: ದೇವರಿಗಿಟ್ಟ ಬಾದಾಮಿಯನ್ನು ಕದ್ದು ತಿಂದ ಎಂದು ದೇಗುಲದ ಅರ್ಚಕ ಹಾಗೂ ಮತ್ತೋರ್ವ ಯುವಕ ಇಬ್ಬರು ಸೇರಿ 11 ವರ್ಷದ ಬಾಲಕನನ್ನು ಮರವೊಂದಕ್ಕೆ ಕಟ್ಟಿ ಹಾಕಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಸಿದ್ಧಯತನ್‌ ಜೈನ (Siddhayatan Jain) ದೇಗುಲದಲ್ಲಿ 11 ವರ್ಷದ ಬಾಲಕ ದೇವರಿಗಿಟ್ಟ ಬಾದಾಮಿಯಲ್ಲಿ ಸ್ವಲ್ಪವನ್ನು ಕಂದು ತಿಂದ ಎಂದು ದೇಗುಲದ ಪುರೋಹಿತರು ಆರೋಪಿಸಿ ಆತನನ್ನು ದೇಗುಲ ಸಮೀಪದ ಮರವೊಂದಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ವೇಳೆ ಬಾಲಕ ಬಿಟ್ಟು ಬಿಡಿ ಎಂದು ಜೋರಾಗಿ ಅಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ.

ಪುಟ್ಟ ಮಕ್ಕಳನ್ನು(Little childrens) ದೇವರ ಸಾಮಾನ ಎನ್ನಲಾಗುತ್ತದೆ. ಅವರಲ್ಲಿಯೇ ದೇವರನ್ನು ಕಾಣಲಾಗುತ್ತದೆ. ಆದರೆ ಇಲ್ಲಿ ದೇವರಿಗಿಟ್ಟ ಬಾದಾಮಿಯನ್ನು ತಿಂದ ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಶಿಕ್ಷೆ ನೀಡಲಾಗಿದೆ. ಈ ದೃಶ್ಯವನ್ನು ದೇಗುಲ (Temple) ಸಮೀಪದಲ್ಲೇ ಇದ್ದವರು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ದೃಶ್ಯ ಈಗ ವೈರಲ್ ಆಗಿದ್ದು, ಅನೇಕರು ಅರ್ಚಕನ (Priest) ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೀಗೆ ಬಾಲಕನನ್ನು ಕಂಬಕ್ಕೆ ಕಟ್ಟಿದ ಇಬ್ಬರನ್ನು ಭಾರತೀಯ ದಂಡ ಸಂಹಿತೆ (IPC) ಹಾಗೂ ಎಸ್‌ಸಿ ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Viral Video: ಖಾಕಿಯೊಳಗಿನ ಕಿರಾತಕಿ; ವೃದ್ಧ ಮಾವನ ಮೇಲೆ ದೌರ್ಜನ್ಯವೆಸಗಿದ ಕ್ರೂರಿ

ಪ್ರಮುಖ ಆರೋಪಿಯನ್ನು ರಾಕೇಶ್ ಜೈನ್(Rakesh jain) ಎಂದು ಗುರುತಿಸಲಾಗಿದ್ದು, ಘಟನೆ ಬಗ್ಗೆ ಸಂಪೂರ್ಣ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕನಿಗೆ ಹಿಗ್ಗಾಮುಗ್ಗಾ ಥಳಿತ

ಕಳೆದ ಜೂನ್‌ನಲ್ಲಿ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಶಾಲಾ ಶಿಕ್ಷಕನೋರ್ವ ಬಾಲಕನಿಗೆ ಪ್ರಜ್ಞೆ ತಪ್ಪುವಂತೆ ಥಳಿಸಿದ ಘಟನೆ ನಡೆದಿತ್ತು. 5 ವರ್ಷದ ಬಾಲಕನುಗೆ ಶಿಕ್ಷಕ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಬಾಲಕ ಪ್ರಜ್ಞೆ ತಪ್ಪಿದ್ದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಶಿಕ್ಷಕ ಥಳಿಸಿದ ರಭಸಕ್ಕೆ ಕೋಲು ಎರಡು ತುಂಡಾಗಿತ್ತು. ಬಾಲಕನಿಗೆ ಶಿಕ್ಷಕ ಥಳಿಸುತ್ತಿರುವ ವಿಡಿಯೋ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು. ಪಾಟ್ನಾದ ಜಯ ಕೋಚಿಂಗ್ ಸೆಂಟರ್‌ನಲ್ಲಿ ಈ ಅನಾಹುತ ನಡೆದಿತ್ತು. ನಂತರ ಸ್ಥಳೀಯರೆಲ್ಲಾ ಸೇರಿ ಬಾಲಕನಿಗೆ ಥಳಿಸಿದ ಶಿಕ್ಷಕನಿಗೆ ಥಳಿಸಿದ್ದರು. ಆದರೆ ಕೋಚಿಂಗ್ ಸೆಂಟರ್ ಮಾಲೀಕ ಅಮರ್‌ ಕಾಂತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶಿಕ್ಷಕ ಛೋಟು ಬಿಪಿಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
Vijayapura Boy Beaten: ಅಪ್ರಾಪ್ತ ಬಾಲಕನ ಗುಪ್ತಾಗಂಕ್ಕೆ ಬಣ್ಣ ಹಾಕಿ ಹಿಂಸಿಸಿದ ಊರ ಗೌಡ!

Follow Us:
Download App:
  • android
  • ios