Asianet Suvarna News Asianet Suvarna News

ಮಂಡ್ಯ: ಸರ್ಕಾರಿ ವಸತಿ ಗೃಹದಲ್ಲಿ ಭ್ರೂಣ ಹತ್ಯೆ ಕೇಸ್, ಮತ್ತಿಬ್ಬರ ಬಂಧನ

ಬಂಧನಕ್ಕೊಳಗಾಗಿರುವ ಕಿರಣ್ ಹಾಗೂ ಅಖಿಲಾಶ್ ತಮ್ಮ ಪತ್ನಿಯರಿಗೆ ಭ್ರೂಣ ಹತ್ಯೆ ಮಾಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Two Arreted of Feticide case at Pandavapura in Mandya grg
Author
First Published May 12, 2024, 9:50 AM IST

ಪಾಂಡವಪುರ(ಮೇ.12): ಪಟ್ಟಣದ ಆರೋಗ್ಯ ಇಲಾಖೆ ಸರ್ಕಾರಿ ವಸತಿ ಗೃಹದಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 8ಕ್ಕೇರಿದೆ. ಪ್ರಕರಣದ ಎ-1 ಆರೋಪಿಯಾಗಿರುವ ಅಭಿಷೇಕ್ ಗೌಡನ ಚಾಲಕ ತಾಲೂಕಿನ ಹೊಸಕೋಟೆ ಗ್ರಾಮದ ಅಖಿಲಾಶ್ (23) ಹಾಗೂ ಮಹದೇಶ್ವರಪುರ ಗ್ರಾಮದ ಕಿರಣ್‌ (35)ನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಬಂಧನಕ್ಕೊಳಗಾಗಿರುವ ಕಿರಣ್ ಹಾಗೂ ಅಖಿಲಾಶ್ ತಮ್ಮ ಪತ್ನಿಯರಿಗೆ ಭ್ರೂಣ ಹತ್ಯೆ ಮಾಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ 74 ಭ್ರೂಣಹತ್ಯೆ?

ಕಳೆದ ಮೇ. 5ರಂದು ಪಾಂಡವಪುರ ಸರ್ಕಾರಿ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. 

Latest Videos
Follow Us:
Download App:
  • android
  • ios