ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಸಿದ್ದ ಅರೋಪಿಗಳು ಅರೆಸ್ಟ್

ಪ್ರೇಮಿಗಳ ಖಾಸಗಿ ವಿಡಿಯೋ ಮಾಡಿ ಬೆದರಿಸುತ್ತಿದ್ದ ಮತ್ತೊಂದು ಜೋಡಿ ಇದೀಗ ಪೊಲೀಸರ ಅತಿಥಿಯಾಗಿದೆ.  ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. 

Two arrests for shooting lovers private video and demanding for money in bengaluru rbj

ಬೆಂಗಳೂರು, (ಜುಲೈ.17): ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.  ಉಷಾ ಮತ್ತು ಸುರೇಶ್ ಬಾಬು ಬಂಧಿತ ಆರೋಪಿಗಳು. 

ಯಲಹಂಕ ಬಳಿಯ ಖಾಸಗಿ ಹೋಟೆಲ್‌ಗೆ ಹೋಗಿದ್ದ ಇಬ್ಬರು ಪ್ರೇಮಿಗಳು, ಒಂದೇ ರೂಮ್ ನಲ್ಲಿ ಎರಡು ಬಾರಿ ಭೇಟಿ ಆಗಿದ್ರು. ಈ ವೇಳೆ ಯಾರಿಗೂ ಗೊತ್ತಾಗದ ರೀತಿ ಆರೋಪಿಗಳು ಕ್ಯಾಮರಾ ಇಟ್ಟು ವಿಡಿಯೋ ಚಿತ್ರಿಕರಿಸಿದ್ದರು. ಆರೋಪಿಗಳಾದ ಉಷಾ ಮತ್ತು ಸುರೇಶ್ ಸಹ ಪ್ರೇಮಿಗಳು. ಅಲ್ಲದೇ ನೊಂದ ಮಹಿಳೆಯ ಹತ್ತಿರದ ಸಂಬಂಧಿ ಸಹ ಆಗಿದ್ದಾರೆ.

ಅಮೆರಿಕಾ ಹುಡುಗಿ, ನೈಜೀರಿಯಾ ಹುಡುಗ: ಹಣಕ್ಕಾಗಿ ಅಪಹರಣ ನಾಟಕ ಮಾಡಿ ಬಂಧನ

ಆರೋಪಿಗಳು ಯಾರಿಗೂ ಇಳಿಯದಂತೆ ರೂಮ್‌ನಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಕೆಲ ದಿನಗಳ ನಂತರ ನೊಂದ ಮಹಿಳೆಗೆ ವಾಟ್ಸಪ್ ಮೂಲಕ ವಿಡಿಯೋ ಕಳಿಸಿದ್ದಾರೆ. ವಿಡಿಯೋ ನೋಡಿ ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ಅದೇ ನಂಬರ್ ನಿಂದ ಇಪತ್ತೈದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಹಣ ಕೊಡಿ ಇಲ್ಲಾವಾದ್ರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳೆ ಹಣ ನೀಡಲು ತಡಮಾಡಿದಾಗ ಆರೋಪಿ ಉಷಾ ಹೊಸ ನಾಟಕ ಶುರು ಮಾಡಿದ್ದಾರೆ. ತನ್ನ ಮೊಬೈಲ್ ಗೂ ಯಾರೋ ನಿಮ್ಮ ವಿಡಿಯೋ ಕಳಿಸಿದ್ದಾರೆ ಎಂದು ಮತ್ತಷ್ಟು ಬೆದರಿಸಲು ಮುಂದಾಗಿದ್ದಾರೆ. ಜೊತೆಗೆ ಸಿಡಿ ಮಾಡಿ ಮನೆಯವರು ಹಾಗೂ ಕುಟುಂಬದ ಎಲ್ಲರಿಗೂ ಕಳಿಸುವುದಾಗಿ ಹೆದರಿಸಿದ್ದಾರೆ.

ಇದರಿಂದ ನೊಂದ ಮಹಿಳೆ ಈ ಬಗ್ಗೆ ಪೊಲೀಸ್‌  ಮೊರೆ ಹೋಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. 

Latest Videos
Follow Us:
Download App:
  • android
  • ios