*ಕಾರಿನ ಜಿಪಿಎಸ್ ಲೊಕೇಶನ್ ಆಧರಿಸಿ ಆರೋಪಿಗಳನ್ನ ಬಂಧಿಸಿದ ಪೊಲೀಸರು*ಬೆಂಗಳೂರಿನ ಬಂಡೆಪಾಳ್ಯ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ*ಬಂಧಿತರು ಸ್ನೇಹಿತ ಖಾಸಿಫ್ ಮೋಹಿನ್ ಖಾನ್ ಕಾರನ್ನ ಕದ್ದು ಎಸ್ಕೇಪ್ ಆಗಿದ್ದರು
ಬೆಂಗಳೂರು (ಏ. 16): ಸ್ನೇಹಿತನ ಕಾರು ಕಾರನ್ನ ಕದ್ದು ಎಸ್ಕೇಪ್ ಆಗಿದ್ದ ಖದೀಮರನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕಾರಿನ ಜಿಪಿಎಸ್ ಲೊಕೇಶನ್ ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಕ್,ಅಬ್ದುಲ್ಲಾ ಬಂಧಿತ ಆರೋಪಿಗಳು. ಬಂಧಿತರು ಸ್ನೇಹಿತ ಖಾಸಿಫ್ ಮೋಹಿನ್ ಖಾನ್ ಕಾರನ್ನ ಕದ್ದು ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಖಾಸಿಫ್ ಮೋಹಿನ್ ಏಪ್ರಿಲ್ 3ರಂದು ಕ್ರೆಟಾ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು.
ಈ ವೇಳೆ ಬಂಡೆಪಾಳ್ಯ ಬಳಿಯ ಶೆಲ್ ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿ ತೆರಳಿದ್ದರು. ಈ ವೇಳೆ ಖಾಸಿಫ್ ಕಾರಿನ ಕೀ ಕಳೆದುಕೊಂಡಿದ್ದರು. ಕೇರಳದ ತಮ್ಮ ಊರಿನಿಂದ ಮತ್ತೊಂದು ಕೀ ತರಿಸಲು ಖಾಸಿಫ್ ರೆಡಿಯಾಗಿದ್ದರು.
ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿ ಚಾಲಕನನ್ನ ಕರೆಸಿ ದರೋಡೆ: ನಾಲ್ವರ ಬಂಧನ
ಆದರೆ ನಿಲ್ಲಿಸಿದ್ದ ಕಾರು ಏಪ್ರಿಲ್ 6 ರಂದು ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರಿನ ಜಿಪಿಎಸ್ ಟ್ರ್ಯಾಕ್ ಮಾಡಿದ್ದಾರೆ. ಈ ವೇಳೆ ಕಾರು ಕೇರಳದತ್ತ ತೆರಳುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಕಾರು ಕದ್ದು ಎಸ್ಕೇಪ್ ಆಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯಲ್ಲೇ ಪೊಲೀಸರು ಆರೋಪಿಗಳ ಹೆಡೆಮುರಿ ಕೊಟ್ಟಿದ್ದಾರೆ.
