Bengaluru Crime: ಮಹಿಳೆ ಕೊಲೆ ಮಾಡಿದ್ದ ಇಬ್ಬರ ಬಂಧನ

*  ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆ
*  ಇಬ್ಬರು ಆರೋಪಿಗಳನ್ನ ಬಂಧಿಸಿದ ವರ್ತೂರು ಠಾಣೆ ಪೊಲೀಸರು
* ಮೊಬೈಲ್‌ ಕರೆ,  ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಹಾಯದಿಂದ ಆರೋಪಿಗಳ ಬಂಧನ

Two Arrested For Woman Murder Case in Bengaluru grg

ಬೆಂಗಳೂರು(ಏ.13):  ಹಣಕಾಸು ವಿಚಾರ ಹಿನ್ನೆಲೆಯಲ್ಲಿ ಪರಿಚಿತ ಮಹಿಳೆಯೊಬ್ಬಳನ್ನು ಹತ್ಯೆಗೈದಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಚಮಾರನಹಳ್ಳಿ ನಿವಾಸಿ ಇಮ್ರಾನ್‌ ಹಾಗೂ ವೆಂಕಟೇಶ್‌ ಬಂಧಿತರಾಗಿದ್ದು, ಈ ಕೃತ್ಯ ಸಂಬಂಧ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಕಿರಣ್‌ ಪತ್ತೆಗೆ ತನಿಖೆ ನಡೆದಿದೆ. 

ಕೆಲ ದಿನಗಳ ಹಿಂದೆ ಕಾಚಮಾರನಹಳ್ಳಿಯ ಅಪಾರ್ಚ್‌ಮೆಂಟ್‌ನಲ್ಲಿ ಸುನೀತಾ ಪ್ರಸಾದ್‌(55) ಅವರ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Asianet Suvarna FIR: ಜೂನಿಯರ್ ಆರ್ಟಿಸ್ಟ್‌ಗಳೇ ಟಾರ್ಗೆಟ್.. ಬೆಂಗಳೂರು ಟು ದುಬೈ ಗ್ಯಾಂಗ್!

ಕಬ್ಬಿಣದ ರಾಡ್‌ನಿಂದ ಬಡಿದು ಪತಿಯನ್ನೇ ಕೊಂದಳು..!

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆಗೈದ(Murder) ಪತ್ನಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು(Police) ಸೋಮವಾರ ಬಂಧಿಸಿದ್ದಾರೆ.

ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್‌ ನಿವಾಸಿ ಉಮೇಶ್‌(52) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತನ ಪತ್ನಿ ವರಲಕ್ಷ್ಮೀ(48) ಎಂಬುವರನ್ನು ಬಂಧಿಸಲಾಗಿದೆ(Arrest). ಮನೆಯಲ್ಲಿ ಮುಂಜಾನೆ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ವರಲಕ್ಷ್ಮೀ, ಮಲಗಿದ್ದ ಪತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಬಳಿಕ ತಾವೇ ಮನೆ ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಉಮೇಶ್‌ ಮೃತಪಟ್ಟಿದ್ದಾರೆ(Death). ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿ ಮತ್ತು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ಕುಣಿಗಲ್‌ ತಾಲೂಕಿನ ಅಮೃತೂರಿನ ಉಮೇಶ್‌ 28 ವರ್ಷಗಳ ಹಿಂದೆ ಸೋದರ ಮಾವನ ಮಗಳು ವರಲಕ್ಷ್ಮೇ ಜತೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಿಯಲ್‌ ಎಸ್ಟೇಟ್‌ ಹಾಗೂ ಫೈನಾನ್ಸ್‌ ವ್ಯವಹಾರದಲ್ಲಿ ತೊಡಗಿದ್ದ ಉಮೇಶ್‌, ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್‌ನಲ್ಲಿ ಕುಟುಂಬ ಜತೆ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ(Couple) ಮಧ್ಯೆ ಮನಸ್ತಾಪವಾಗಿತ್ತು. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆದಿದ್ದವು.

Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

ಅಂತೆಯೇ ಭಾನುವಾರ ರಾತ್ರಿ ಸಹ ಸತಿ-ಪತಿ ಮಧ್ಯೆ ಜಗಳವಾಗಿ ತಣ್ಣಾಗಿದೆ. ಆದರೆ, ಮುಂಜಾನೆ ನಿದ್ರೆಯಿಂದ ಎಚ್ಚರಗೊಂಡ ವರಲಕ್ಷ್ಮೀ, ಶೌಚಾಲಯಕ್ಕೆ ಹೋಗುವಾಗ ಆಕಸ್ಮಿಕವಾಗಿ ಪತಿಗೆ ಕಾಲು ತಾಕಿಸಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ಉಮೇಶ್‌, ಪತ್ನಿಗೆ ಕಾಲಿನಿಂದು ಒದ್ದು ರಾದ್ಧಾಂತ ಮಾಡಿದ್ದಾನೆ. ಈ ಹಂತದಲ್ಲಿ ಕೆರಳಿದ ವರಲಕ್ಷ್ಮೇ, ಮನೆಯಲ್ಲಿದ್ದ ಕಬ್ಬಿಣ ರಾಡ್‌ನಿಂದ ಪತಿ ತಲೆಗೆ ಹೊಡೆದಿದ್ದಾರೆ. ಬಳಿಕ ಮನೆ ಹತ್ತಿರದ ಆಸ್ಪತ್ರೆಗೆ ಗಾಯಾಳು ಪತಿಯನ್ನು ಕರೆದಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರಂಭದಲ್ಲಿ ವರಲಕ್ಷ್ಮೀಯನ್ನು ವಿಚಾರಿಸಿದಾಗ ಗೊಂದಲಕಾರಿ ಹೇಳಿಕೆ ನೀಡಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು, ಮೃತನ ಮನೆಗೆ ತೆರಳಿ ಪರಿಶೀಲಿಸಿದಾಗ ಮಲಗುವ ಕೋಣೆಯಲ್ಲಿ ರಕ್ತ ಚೆಲ್ಲಾಡಿದ್ದು ಕಂಡು ಬಂದಿದೆ. ಆಗ ಉಮೇಶ್‌ ಪತ್ನಿ ಮತ್ತು ಮಕ್ಕಳನ್ನು ಪ್ರತ್ಯೇಕವಾಗಿ ಪೊಲೀಸರು ವಿಚಾರಿಸಿದಾಗ ವರಲಕ್ಷ್ಮೀ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
 

Latest Videos
Follow Us:
Download App:
  • android
  • ios