Asianet Suvarna News Asianet Suvarna News

ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಖರ್ತನಾಕ್‌ ಕಳ್ಳರ ಬಂಧನ

ಮದ್ಯದ ನಶೆಯಲ್ಲಿ ಯಾವ ವಾಹನ ಕಂಡರೂ ಕ್ಷಣಮಾತ್ರದಲ್ಲಿ ಎಗರಿಸಿ ಪರಾರಿಯಾಗುತ್ತಿದ್ದ ಖದೀಮರು  

Two Arrested For Theft Cases in Bengaluru grg
Author
Bengaluru, First Published Aug 14, 2022, 12:02 PM IST

ಬೆಂಗಳೂರು(ಆ.14):  ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೈಕು, ಕಾರು, ಆಟೋ ಏನೇ ಆಗಲಿ ಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುತ್ತಿದ್ದ ಇಬ್ಬರು ಆರೋಪಿಗಳನ್ನ ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದಾರೆ. ನದೀಂ ಅಹಮದ್ ಹಾಗೂ ಗುಲಾಂ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಖದೀಮರು ಮದ್ಯದ ನಶೆಯಲ್ಲಿ ಯಾವ ವಾಹನ ಕಂಡರೂ ಕ್ಷಣಮಾತ್ರದಲ್ಲಿ ಎಗರಿಸಿ ಪರಾರಿಯಾಗುತ್ತಿದ್ದರು.  

ಕದ್ದ ವಾಹನಗಳ ನಂಬರ್ ಪ್ಲೇಟ್ ಬದಲಿಸಿ ಎಷ್ಟು ಸಿಕ್ರೆ ಅಷ್ಟಕ್ಕೆ ಮಾರಾಟ ಮಾಡುತ್ತಿದ್ದರು. ಕೆಲವೊಂದು ಸಲ ಕದ್ದ ವಾಹನಗಳನ್ನ ಕೊಳ್ಳೋರ ಜೊತೆ ಸಂಚಾರಿ ಪೊಲೀಸರಿಗೂ ಯಾಮಾರಿಸುತ್ತಿದ್ದರು. 

ಸ್ನೇಹಿತರ ಜೊತೆ ಸೇರಿ ಕುಡಿದು ರೆಸ್ಟೋರೆಂಟ್‌ನಲ್ಲಿ ಗಲಾಟೆ: ಗಗನಸಖಿಯ ಬಂಧನ

ಬಂಧಿತ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಹುಳಿಮಾವು, ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ವಾಹನಗಳನ್ನ ಕಳ್ಳತನ ಮಾಡುತ್ತಿದ್ದರು. ಜೈಲಿಗೆ ಹೋಗಿ‌ ಬಂದರೂ ಈ ಖದೀಮರು ಮತ್ತದೇ ಕೃತ್ಯ ಮುಂದುವರೆಸಿದ್ದರು. ಬಂಧಿತರಿಂದ 2 ಆಟೋ, 1 ಕಾರು 6 ಬೈಕುಗಳನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. 
 

Follow Us:
Download App:
  • android
  • ios