ಕುಮಟಾ: ಬೀಚ್ ರೆಸಾರ್ಟ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ, ಇಬ್ಬರ ಬಂಧನ
ತಮ್ಮ ಲಾಭಕ್ಕೋಸ್ಕರ ಬೇರೆ ಬೇರೆ ಕಡೆಯಿಂದ ಮಹಿಳೆಯರನ್ನು ಕರೆಯಿಸಿ, ತಮ್ಮ ರೆಸಾರ್ಟ್ ಕಟ್ಟಡದಲ್ಲಿ ವೇಶ್ಯಾವಾಟಿಕೆಯಂತಹ ಅನೈತಿಕ ಚಟುವಟಿಕೆ ನಡೆಸಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದರು ಎಂಬ ಆರೋಪದಡಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು.
ಕುಮಟಾ(ಅ.10): ತಾಲೂಕಿನ ಬಾಡ ಗ್ರಾಮದಲ್ಲಿರುವ ನೇಸರ ಬೀಚ್ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆಯಂತಹ ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ನಿಖರ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆರಾಮಬೊಡ್ಡಿಯ ನಾಗೇಶ ಮಂಜಪ್ಪ ಶೆಟ್ಟಿ, ಕಲಬುರಗಿ ಜಿಲ್ಲೆಯ ಜೇವರ್ಗಿಯ ಅರೀಫ್ ಮುಲ್ಲಾ ಹುಸೇನ ಸಾಬ್ ಬಂಧಿತ ಆರೋಪಿಗಳು.
ಈ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ರೆಸಾರ್ಟ್‌ನಲ್ಲಿ ಸಂಗ್ರಹಿಸಲ್ಪಟ್ಟ ೮ ಮೊಬೈಲ್, ಮಾತ್ರೆ ಪ್ಯಾಕೇಟ್ ಜತೆಗೆ ₹ ೩೨ ಸಾವಿರ ಹಾಗೂ ಸಿಸಿ ಕ್ಯಾಮೆರಾ ಡಿವಿಆರ್ ಹಾಗೂ ದಾಖಲಾತಿ ರಜಿಸ್ಟರ್ ಇನ್ನಿತರ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ಮಣಿಪಾಲದಲ್ಲಿ ವೈಶ್ಯಾವಾಟಿಕೆ ಆರೋಪಿಗಳ ಬಂಧನ ಮಹಿಳೆಯರ ರಕ್ಷಣೆ
ತಮ್ಮ ಲಾಭಕ್ಕೋಸ್ಕರ ಬೇರೆ ಬೇರೆ ಕಡೆಯಿಂದ ಮಹಿಳೆಯರನ್ನು ಕರೆಯಿಸಿ, ತಮ್ಮ ರೆಸಾರ್ಟ್ ಕಟ್ಟಡದಲ್ಲಿ ವೇಶ್ಯಾವಾಟಿಕೆಯಂತಹ ಅನೈತಿಕ ಚಟುವಟಿಕೆ ನಡೆಸಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದರು ಎಂಬ ಆರೋಪದಡಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳ ಡಿವೈಎಸ್‌ಪಿ ಶ್ರೀಕಾಂತ ನೇತೃತ್ವದಲ್ಲಿ, ಪಿಎಸ್‌ಐ ನವೀನ ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.